ರುಚಿಕರವಾದ ಗೋಧಿ ಬಿಸ್ಕೆಟ್ ಮಾಡಲು ಬೇಕಾಗುವ ಸಾಮಗ್ರಿಗಳು
*ಎಣ್ಣೆ – 1/2 ಕಪ್
*ಸಕ್ಕರೆ ಪುಡಿ – 1/2 ಕಪ್
*1 ಕಪ್ – ಗೋದಿ ಹೆಟ್ಟು
*1/2 ಕಪ್ – ಕಡಲೇಹಿಟ್ಟು
*ಸ್ವಲ್ಪ ಹಾಲು
ರುಚಿಕರವಾದ ಗೋಧಿ ಬಿಸ್ಕೆಟ್ ಮಾಡುವ ವಿಧಾನ...
ಒಂದು ಬೌಲ್ಗೆ ಅರ್ಧ ಕಪ್ ಎಣ್ಣೆ, ಅರ್ಧ ಕಪ್ ಸಕ್ಕರೆ ಪುಡಿ, ಸೇರಿಸಿ ಚೆನ್ನಾಗಿ ೫-೬ ನಿಮಿಷ ಮಿಶ್ರಣ ಮಾಡಿ. ನಂತರ ಒಂದು ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಕಡಲೇ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹಾಲು ಹಾಕಿ ನಾದಿಕೊಳ್ಳಿ.
ನಂತರ ಇದನ್ನು ತುಸು ದಪ್ಪಗೆ ಲಟ್ಟಿಸಿಕೊಂಡು ಫೋರ್ಕ್ ನ ಸಹಾಯದಿಂದ ಇದರ ಮೇಲೆ ನಿಧಾನಕ್ಕೆ ಚುಚ್ಚಿ. ಚಿಕ್ಕ ಚಿಕ್ಕ ತೂತಿನ ಹಾಗೇ ಕಾಣಿಸುತ್ತದೆ. ನಂತರ ಚೌಕಾಕಾರದಲ್ಲಿ ಕತ್ತರಿಸಿ. ಇದನ್ನು ಬೇಕಿಂಗ್ ಟ್ರೆಯಲ್ಲಿ ಇಟ್ಟು ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ಇದು ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.