ಚಿಕಾಗೋ ಏರ್ ಪೋರ್ಟ್ ನಲ್ಲಿ ಭಾರೀ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ವಿಮಾನ ಲ್ಯಾಂಡಿಗ್ ಮಾಡುವ ವೇಳೆ ಖಾಸಗಿ ಜೆಟ್ ಅಡ್ಡ ಬಂದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿರುವ ಘಟನೆ ಚಿಕಾಗೋ ಮಿಡ್ ವೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಸೌತ್ ವೆಸ್ಟ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಲ್ಯಾಂಡಿಂಗ್ ಮಾಡುವ ವೇಳೆ ಖಾಸಗಿ ಜೆಟ್ ವೊಂದು ರನ್ ವೇಅಲ್ಲಿ ಬಂದಿದೆ. ಈ ವೇಳೆ ಪೈಲಟ್ ಗಳು ವಿಮಾನವನ್ನು ರನ್ ವೇಗೆ ಇಳಿಸಿ ತಕ್ಷಣವೇ ಮತ್ತೆ ವಿಮಾನವನ್ನು ಮೇಲೆ ಹಾರಿಸುವ ಮೂಲಕ ಅಪಘಾತವನ್ನು ತಪ್ಪಿಸಿದ್ದಾರೆ. ಪೈಲಟ್‌ಗಳ ಸಮಯಪ್ರಜ್ಞೆಯಿಂದ ಭೀಕರ ಅಪಘಾತವೊಂದು ತಪ್ಪಿದ್ದು, ನೂರಾರು ಜನರ ಜೀವ ಉಳಿದಂತಾಗಿದೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನೀಡಿರುವ ಮಾಹಿತಿ ಪ್ರಕಾರ, ಖಾಸಗಿ ಜೆಟ್ ಅನುಮತಿಯಿಲ್ಲದೆ ರನ್‌ವೇಗೆ ಪ್ರವೇಶಿಸಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.