ಗುಬ್ಬಿ : ಗುಬ್ಬಿಯ ಯೋಧನಿಗೆ ಆತ್ಮೀಯ ಬೀಳ್ಕೊಡುಗೆ

ಗುಬ್ಬಿ : 

ಪಾಕ್‌ ಹಾಗೂ ಭಾರತದ ನಡುವೆ ಯುದ್ಧ ತಾರಕಕ್ಕೇರುತ್ತಿದ್ದು ರಜೆಯಲ್ಲಿದ್ದ ಸೈನಿಕರು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಲಾಗಿದೆ. ಅದರಂತೆ ಸೈನಿಕರೆಲ್ಲರೂ ತಮ್ಮ ಕುಟುಂಬ, ಸಂತೋಷಕ್ಕಿಂತ ದೇಶ ಸೇವೆಯೇ ಮುಖ್ಯ ಅಂತಾ ವಾಪಸ್‌ ತೆರಳ್ತಾ ಇದ್ದಾರೆ. ಇತ್ತ ಗುಬ್ಬಿಯ ಸೈನಿಕ ವೇಣುಗೇಪಾಲ್‌ ರಜೆ ಮೇಲೆ ಊರಿಗೆ ಬಂದಿದ್ದರು. ಆದರೆ ದೇಶ ಸೇವೆಗೆ ಬರುವಂತೆ ಕರೆ ಬಂದಿದ್ದು ರಜೆಯನ್ನು ಮೊಟಕುಗೊಳಿಸಿ ದೇಶ ಸೇವೆಗೆ ತೆರಳಿದರು.

ಗುಬ್ಬಿಯ ಯೋಧ ವೇಣುಗೋಪಾಲ್‌ ವರ್ಷಕ್ಕೊಮ್ಮೆ ರಜೆ ಪಡೆದು ಮಕ್ಕಳ ಶಾಲಾ ದಾಖಲಾತಿ ಕೆಲಸ ಮುಗಿಸಿ ತೆರಳುತ್ತಿದ್ದ BSF ಯೋಧ ವೇಣುಗೋಪಾಲ್‌ಗೆ ರಜೆ ಅವಧಿ ಮುಗಿಯುವ ಮುನ್ನವೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಸೂಚನೆಯಂತೆ ವೇಣುಗೋಪಾಲ್‌ ದೇಶ ಮುಖ್ಯ ಎಂದು ಮರಳಿ ಯುದ್ಧ ಭೂಮಿಗೆ ತೆರಳಲು ಸಜ್ಜಾದರು. ಈ ವೇಳೆ ಗುಬ್ಬಿಯ ನಾಗರೀಕರು ಯೋಧ ವೇಣುಗೋಪಾಲ್‌ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟು ಯುದ್ಧ ಗೆದ್ದು ಬನ್ನಿ ಎಂದು ಹಾರೈಸಿ ಕಳುಹಿಸಿಕೊಟ್ಟರು. ಈ ವೇಳೆ ಸಿ.ಆರ್.ಶಂಕರ್ ಕುಮಾರ್, ರಮೇಶಗೌಡ, ಲೋಕೇಶ್, ಚಿಕ್ಕೇಗೌಡ, ಬ್ಯಾಟರಾಯಪ್ಪ ಸೇರಿ ಹಲವು ಮಂದಿ ಉಪಸ್ಥಿತರಿದ್ದರು.

Author:

...
Sushmitha N

Copy Editor

prajashakthi tv

share
No Reviews