ರಾಯಚೂರು: ಗಾರಲದಿನ್ನಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಹುಲ್ಲಿನ ಬಣೆವೆಗಳು

ರಾಯಚೂರು: 

ಆಕಸ್ಮಿಕವಾಗಿ ಬೆಂಕಿ ತಗುಲಿ ಬಣೆವೆಗಳು ಹೊತ್ತಿ ಉರಿದಿರುವ ಘಟನೆ ರಾಯಚೂರು ತಾಲೂಕಿನ  ಗಾರಲದಿನ್ನಿ ಗ್ರಾಮದ ತಾಯಮ್ಮ ಗುಡಿ ಹಿಂಭಾಗದಲ್ಲಿ ನಡೆದಿದೆ. ಇನ್ನು ಶಂಕರಗೌಡ, ಮಹಾಬಲ್‌ ಸಾಬ್, ಶಿವರಾಜಗೌಡ, ಪಂಪನಗೌಡ, ಅಜ್ಮೀರ್‌ ಸಾಬ್‌ ಎನ್ನುವವರ ಬಣವೆಗಳು ಸುಟ್ಟುಹೋಗಿದೆ.

ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಟ್ಯಾಂಕ್‌, ಬಕೆಟ್‌ ಮತ್ತು ಬಿಂದಿಗೆಗಳ ಮೂಲಕ ನೀರನ್ನು ಹಾಕಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಕೂಡ ಪ್ರಯೋಜನವಾಗಿಲ್ಲ. ಇನ್ನು ಊರಿಗೆ ಸಮೀಪದಲ್ಲಿ ಅಗ್ನಿ ಶಾಮಕ ಠಾಣೆ ಇಲ್ಲದಿರುವ ಕಾರಣ ಬೆಂಕಿ ನಿಯಂತ್ರಣಕ್ಕೆ ತರಲಾಗಿಲ್ಲ.

 

Author:

...
Sub Editor

ManyaSoft Admin

share
No Reviews