ಚಿಕ್ಕಮಗಳೂರು : ರಾಜ್ಯದಲ್ಲಿ ಮುಂಗಾರು ಆರಂಭದಲ್ಲೇ ಭಾರೀ ಗಾಳಿ ಮಳೆಯ ಪರಿಣಾಮದಿಂದ ಮೂಡಿಗೆರೆಯಲ್ಲಿ ಎರಡು ವಿಭಿನ್ನ ಘಟನೆಯಲ್ಲಿ ಕಾರುಗಳು ನದಿಗೆ ಬಿದ್ದಿರುವ ಘಟನೆ ನಡೆದಿದೆ.
ಚಕ್ಕಮಕ್ಕಿ ಗ್ರಾಮದ ಬಳಿ ಒಂದು ಕಾರು ಹೇಮಾವತಿ ನದಿಯ ಉಪನದಿಗೆ ಬಿದ್ದರೆ, ಮತ್ತೊಂದು ಕಾರು ಬಣಕಲ್ ಸಮೀಪದ ಹಳ್ಳಕ್ಕೆ ಬಿದ್ದಿದೆ. ತೀವ್ರ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ಚಾಲಕರು ನಿಯಂತ್ರಣ ಕಳೆದು, ಕಾರುಗಳು ಪಲ್ಟಿಯಾಗಿ ನದಿಗೆ ಹಾಗೂ ಹಳ್ಳಕ್ಕೆ ಬಿದ್ದಿವೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸ್ಥಳೀಯ ಸಮಾಜ ಸೇವಕ ಆರೀಫ್ ಅವರು ಸಾಹಸ ಮೆರೆದಂತೆ ಹಗ್ಗದ ಸಹಾಯದಿಂದ ಹಳ್ಳಕ್ಕೆ ಇಳಿದು ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಳೆಯ ತೀವ್ರತೆ ಇನ್ನೂ ಹೆಚ್ಚಾದರೆ ಪರಿಸ್ಥಿತಿ ಹೇಗೆ ಇರುವದು ಎಂಬ ಆತಂಕ ಜನರಲ್ಲಿ ಉಂಟಾಗಿದೆ. ಮುಂಗಾರು ಆರಂಭದಲ್ಲೇ ಈ ರೀತಿಯ ಘಟನೆಗಳು ನಡೆದಿರುವುದು ಕೂಡಾ ಆತಂಕಕಾರಿ ಬೆಳವಣಿಗೆಯಾಗಿದೆ.