ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕು, ಹಾರಗೊಪ್ಪ ಗ್ರಾಮದಲ್ಲಿ ಮಲತಂದೆಯಿಂದ 3 ವರ್ಷದ ಬಾಲಕನ ಬರ್ಬರ ಹತ್ಯೆ ನಡೆದಿದೆ. ಮಗುವಿನ ತಾಯಿ ರಂಗೀಲಾ ಎಂಬುವವರು ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದ ಬಿಹಾರ ಮೂಲದ ಮಹೇಶ್ವರ್ ಮಾಂಜಿ, ಶ್ರೀನಾಥ್ ಮಾಂಜಿ, ರಾಕೇಶ್ ಮಾಂಜಿ, ಹಾಗೂ ಮಹೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರೂಗೂಪ್ಪ ಬಳಿಯ ಹತ್ತಿ ಪ್ಯಾಕ್ಟರಿಯಲ್ಲಿ ಮಹಿಳೆ ಮತ್ತು ಎರಡನೇ ಗಂಡ ಇಬ್ಬರು ಕೆಲಸ ಮಾಡುತ್ತಿದ್ದರು. ಇವಳು ತನ್ನೊಟ್ಟಿಗೆ 3 ವರ್ಷದ ಮಗುವನ್ನು ಕರೆದುಕೊಂಡು ಬಂದಿದ್ದಾಳೆ.
ಮಹೇಶ್ವರ ಮಾಂಜಿ ಎಂಬಾತನನ್ನು ರಂಗೀಲಾ 2ನೇ ಮದುವೆ ಆಗಿದ್ದರು. ದಂಪತಿಯು ಕೆಲಸಕ್ಕೆಂದು ಹಾರಗೊಪ್ಪಗೆ ಹೋಗಿದ್ದು, ಮಗುವನ್ನು ಯಾಕೆ ಕರೆದುಕೊಂಡು ಬಂದೇ ಎಂದು ಜಗಳವಾಡಿದ್ದಾರೆ. ಈ ವೇಳೆಗೆ ಮಹೇಶ್ವರ್‌ಗೆ ಅವನ ಸ್ನೇಹಿತರು ಕೂಡ ಜಗಳಕ್ಕೆ ಸಾಥ್ ನೀಡಿದ್ದು, ನಾಲ್ವರು ಸೇರಿ ರಂಗೀಲಾ ಮೇಲೆ ಹಲ್ಲೆಗೆ ಮುಂದಾಗಿದ್ದು, ರಂಗೀಲಾ ಹದರಿ ಮಗುವನ್ನು ಬಿಟ್ಟು ಓಡಿ ಹೋಗಿದ್ದಾಳೆ. ಕಟ್ಟಿಗೆಯಿಂದ ಮಗುವಿನ ಮೇಲೆ ಹಲ್ಲೆ ನಡೆಸಿ, ಬಳಿಕ ಬೆಂಕಿಯಿಂದ ಎಲ್ಲೆಂದರಲ್ಲಿ ಸುಟ್ಟಿದ್ದಾರೆ. ರಂಗೀಲಾ ವಾಪಸ್ ಮನೆಗೆ ಬಂದು ನೋಡಿದಾಗ ಮಗು ಸತ್ತಿರೋದು ಗೊತ್ತಾಗಿದೆ. ತಕ್ಷಣಕ್ಕೆ ಅಕ್ಕಪಕ್ಕದ ಜನರನ್ನು ಮಗುವಿನ ತಾಯಿ ಸೇರಿದ್ದಾರೆ. ಆದರೆ ಅಷ್ಟು ಹೋತ್ತಿಗೆ ಮಗುವಿನ ಪ್ರಾಣ ಹೋಗಿದೆ. ಇನ್ನು ಘಟನೆಯು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.