ಪಾವಗಡ:
ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ. ವೆಂಕಟಾಪುರ ಗ್ರಾಮದ ನಿವಾಸಿ 55 ವರ್ಷದ ಖಾಸಿಂ ಎಂಬುವರು ಮೃತ ದುರ್ದೈವಿಯಾಗಿದ್ದಾರೆ.
ತೋಟದ ಕೆಲಸಕ್ಕೆಂದು ಆಂದ್ರದ ಪೆನುಗೊಂಡಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇನ್ನು ಮೃತ ವ್ಯಕ್ತಿಯು ಅಣ್ಣನ ನಾಲ್ಕು ಜನ ಹೆಣ್ಣುಮಕ್ಕಳನ್ನು ಸಾಕ್ತಾ ಇದ್ದು, ಕುಟುಂಬಕ್ಕೆ ಆದಾರವಾಗಿದ್ದ ಮೃತ ಖಾಸಿಂನನ್ನ ಕಳೆದುಕೊಂಡು ಕಣ್ಣೀರಾಕ್ತಾ ಇದಾರೆ, ಅಲ್ದೇ ಅಪಘಾತದ ಬಗ್ಗೆ ಮೃತನ ಕುಟುಂಬಸ್ಥರು ಪೊಲೀಸ್ ಇಲಾಖೆಯವ್ರು ಸೂಕ್ತ ತನಿಖೆ ನಡೆಸಿ ಮೃತ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸ್ತಾ ಇದಾರೆ.
ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತ ವ್ಯಕ್ತಿಯ ಶವವನ್ನು ರವಾನಿಸಿದ್ದು. ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.