ಬೀದರ್:‌ ಕುಂಭಮೇಳಕ್ಕೆ ತೆರಳಲು 140 ವಿಶೇಷ ರೈಲುಗಳು..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀದರ್‌

ಬೀದರ್:

ಸುಮಾರು 144 ವರ್ಷಗಳ ನಂತರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಲು ದಕ್ಷಿಣ ಮಧ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ ಒಟ್ಟು 140 ವಿಶೇಷ ರೈಲುಗಳನ್ನು ಸಂಚರಿಸುತ್ತಿದ್ದು, ಈಗಾಗಲೇ ಸುಮಾರು 70ಕ್ಕೂ ಅಧಿಕ ಸ್ಥಳಗಳಿಂದ ವಿಶೇಷ ರೈಲುಗಳು ಸಂಚರಿಸಿವೆ. ಬಹುತೇಕ ಎಲ್ಲಾ ರೈಲುಗಳು ಪ್ರಯಾಗ್ ರಾಜನ ಛೋಕಿ, ಪ್ರಯಾಗ್‌ ರಾಜ್‌ ಹಾಗೂ ವಾರಣಾಸಿ ಮೂಲಕ ಸಂಚಾರ ಮಾಡುತ್ತಿವೆ. ಸಿಕಂದರಾಬಾದ್ ನ ದಕ್ಷಿಣ ಮಧ್ಯ ರೈಲ್ವೆ ವಲಯದ ಮೂಲಕ 39 ರೈಲುಗಳು ವಿವಿಧ ಸ್ಥಳಗಳಿಂದ ಹಾದು ಹೋಗುತ್ತಿವೆ.

ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮೈಸೂರು ಮತ್ತು ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲುಗಳು ಸರಾಸರಿ ಶೇ.149ರಷ್ಟು ಆಕ್ಯುಪೆನ್ಸಿಯೊಂದಿಗೆ ಓಡುತ್ತಿವೆ. ಫೆ.10ರಂದು ಸುಮಾರು 1.3 ಲಕ್ಷ ಪ್ರಯಾಣಿಕರು ಕಾಯ್ದಿರಿಸಿದ ವಸತಿ ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ಎಸ್‌ಸಿಆರ್‌ನಿಂದ ನಡೆಸಲ್ಪಡುವ ವಿಶೇಷ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಬೀದರ್‌ನಿಂದ ಸುಮಾರು 450 ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿ ಪ್ರಯಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಕಿಂದರಾಬಾದ್‌ನ ದಕ್ಷಿಣ ಮಧ್ಯ ರೈಲ್ವೆ ವಲಯದ ಮೂಲಕ 39 ರೈಲುಗಳು ವಿವಿಧ ಸ್ಥಳಗಳಿಂದ ಹಾದು ಹೋಗುತ್ತಿವೆ. ವಿಶೇಷ ರೈಲು ಸೇರಿ ಒಟ್ಟು 179 ರೈಲು ಗಳು ಸಂಚರಿಸುತ್ತಿವೆ. ಈ ರೈಲುಗಳು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ರೈಲುಗಳು ಸಂಚರಿಸಲಿವೆ.

Author:

...
Editor

ManyaSoft Admin

Ads in Post
share
No Reviews