SIRA: 110 ಗ್ರಾಮಗಳಿಗೆ ಕುಡಿಯೋ ನೀರಿಲ್ಲ | 35 ಕೋಟಿ ರೂಪಾಯಿ ಎಲ್ಲೊಯ್ತು?

ಶಿರಾ: 

ರ್ಕಾರಗಳು ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದಕ್ಕೆಂದೆ ಕೋಟ್ಯಾಂತರ  ರೂಪಾಯಿಗಳನ್ನು  ಕೂಡ ವೆಚ್ಚ ಮಾಡುತ್ತುದೆ.  ಇನ್ನು ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಹಾಹಾಕಾರ ಆಗಬಾರ್ದು ಅಂತಾನೇ ಗ್ರಾಮೀಣ ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಿದೆ. ಇದಕ್ಕೆಂದು ಹಣ ಮೀಸಲಿಟ್ಟು ಜನರ ದಾಹ ತಣಿಸುವ ಕೆಲ್ಸ ಮಾಡ್ತಿದೆ. ಆದರೆ ಅಧಿಕಾರಿ ಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇಂತಹ ಯೋಜನೆಯೊಂದು ಹಳ್ಳ ಹಿಡಿದು ಜನ್ರ ಹಣ ಪೋಲಾಗ್ತಿದೆ. ಇತ್ತ 110 ಗ್ರಾಮಗಳಲ್ಲಿ  ಕುಡಿಯುವ  ನೀರಿಲ್ಲದೆ ಜನ್ರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೇವಲ ಐದು, ಹತ್ತು ಗ್ರಾಮಗಳಿಗಲ್ಲ ಬರೋಬ್ಬರಿ 110 ಗ್ರಾಮಗಳಿಗೆ ಕುಡಿಯುವ ನೀರು ಸಪ್ಲೈ ಮಾಡಬೇಕಾದ ಯೋಜನೆ. ಅಧಿಕಾರಿಗಳ  ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದು ಕೋಟ್ಯಾಂತರ ರೂಪಾಯಿ ನಷ್ಟವಾಗ್ತಿದೆ. ಇಂತಹ ದೊಡ್ಡಮಟ್ಟದಲ್ಲಿ  ತೊಂದ್ರೆ ಆಗಿರೋದು  ಬೇರೆ  ಎಲ್ಲೂ  ಅಲ್ಲ . ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ.ಟಿ.ಬಿ.ಜಯಚಂದ್ರ ಅವ್ರ ಕ್ಷೇತ್ರ ಶಿರಾದಲ್ಲಿ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ, ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ  ತಾಲೂಕುಗಳಲ್ಲಿ ಅನುಷ್ಠಾನವಾಗುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ  ವರ್ಷಗಳ ಕಳೆದ್ರು  ಫಲಾನುಭವಿಗಳಿಗೆ ದಕ್ಕದೆ ಮುಳ್ಳಿನ ಪರದೆಯ ಹಿಂದೆ ಅಡಗಿ ಕೂತಿವೆ.

ಹೌದು, ಶಿರಾ ಐತಿಹಾಸಿಕವಾಗಿ ಪ್ರಸಿದ್ಧತೆ ಪಡೆದಿರೋ ತಾಲೂಕು. ಈ ತಾಲೂಕಿನ ಜನ್ರ ನೀರಿನ  ಸಮಸ್ಯೆಯನ್ನು ನಿವಾರಿಸೋ  ನಿಟ್ಟಿನಲ್ಲಿ  2016  ರಲ್ಲಿ ಶಿರಾ ತಾಲೂಕಿನ ಯಲಿಯೂರಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿತ್ತು. ಇನ್ನು ಗ್ರಾಮೀಣ  ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ವತಿಯಿಂದ ಕಾಮಗಾರಿ ಜಾರಿ ಮಾಡಲಾಗಿತ್ತು. ಒಟ್ಟು 35 ಕೋಟಿ ರೂಪಾಯಿ  ವೆಚ್ಚದಲ್ಲಿ ಈ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು. ಆದ್ರೆ, ಇದುವರೆವಿಗೂ  ಆ ಯೋಜನೆಯ  ಒಂದು  ತೊಟ್ಟು  ನೀರು ಜನ್ರಿಗೆ ಉಪಯೋಗವಾಗ್ತಿಲ್ಲ. ಕುಡಿಯುವ ನೀರಿನ ಘಟದ ಸುತ್ತಮುತ್ತ ಗಿಡಗೆಂಟೆಗಳು ಬೆಳೆದು, ನೀರಿನ ಟ್ಯಾಂಕ್‌ ಮತ್ತು ಪೈಪ್‌ ಗಳು ತುಕ್ಕು ಹಿಡಿದು ಆಗ್ಲೋ ಈಗ್ಲೋ ಅನ್ನುತ್ತಿವೆ.

2016-17 ರಲ್ಲಿ ಜಾರಿಗೆ ತಂದಿದ್ದ ಈ ಯೋಜನೆಗೆ ಸ್ವತಃ ಸಿಎಂ ಸಿದ್ದರಾಮ್ಯನವರೇ ಚಾಲನೆ ನೀಡಿದ್ರು. ಆದ್ರೆ ಇಂದಿಗೂ ಕೂಡ ಇದು ಜನರ ಬಳಕೆಗೆ  ಬರದೆ  ತುಕ್ಕು ಹಿಡಿಯುತ್ತಿರುವುದು ಶೋಚನೀಯ ಸಂಗತಿ. 2016-17 ಅವಧಿಯಲ್ಲಿ ಹೇಮಾವತಿ ನೀರಿನ ಲಭ್ಯತೆ  ಆಧಾರದಲ್ಲಿ  ಕಳ್ಳಂಬೆಳ್ಳ  ವ್ಯಾಪ್ತಿಯ 23 ಗ್ರಾಮಗಳು, ಯಲಿಯೂರು ವ್ಯಾಪ್ತಿಯ 22 ಗ್ರಾಮ ಮತ್ತು ತಾವರೆಕೆರೆ ವ್ಯಾಪ್ತಿಯ 65 ಗ್ರಾಮಗಳು ಸೇರಿ  ಒಟ್ಟು  110 ಗ್ರಾಮಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. ಆದ್ರೆ  ಇಂತಹ  ಮಹತ್ವಾಕಾಂಕ್ಷೆಯ ಯೋಜನೆಯು ಜನ್ರ ಉಪಯೋಗಕ್ಕೆ ಬಾರದೆ ಹಳ್ಳ ಹಿಡಿಯುತ್ತಿರುವುದು ಶೋಚನೀಯ ಸಂಗತಿ. ಕುಡಿಯುವ ನೀರಿನ  ವ್ಯವಸ್ತೆ ಮಾಡಲು ನಿರ್ಮಿಸಿದ್ದ ಕಟ್ಟಡ ಪಾಳುಬಿದ್ದ ಕೊಂಪೆಯಾಗಿದ್ರೆ. ಅತ್ತ ಕಾಮಗಾರಿಗೆ  ಬಳಸಲಾದ ವಸ್ತುಗಳು  ಕೂಡ ತುಕ್ಕು  ಹಿಡಿಯುತ್ತಿವೆ.

ಯಾವುದೇ ಇಲಾಖೆ ಯೋಜನೆಯನ್ನು ರೂಪಿಸೋದು ಮುಖ್ಯವಲ್ಲ. ಅದನ್ನು  ಜಾರಿ ಮಾಡಿದ ನಂತ್ರ ಅದು  ಸಾರ್ವಜನಿಕರಿಗೆ  ಎಷ್ಟರ ಮಟ್ಟಿಗೆ  ಉಪಯೋಗಕ್ಕೆ ಬರ್ತಿದೆ ಅಂತ ಒಮ್ಮೆ ನೋಡಬೇಕಾಗಿದೆ. ಇಲ್ಲವಾದಲ್ಲಿ ಇದೇ ರೀತಿ ಅದೆಷ್ಟೋ  ಯೋಜನೆಗಳು  ಉಪಯೋಗ ಕ್ಕೆ ಬಾರದೆ ಹಳ್ಳಹಿಡಿಯುತ್ತಿವೆ. ಇನ್ನು ಸಂಬಂಧಪಟ್ಟ  ಅಧಿಕಾರಿಗಳು ಕೂಡಲೇ ಇತ್ತ  ಗಮನಹರಿಸಿ ಕೋಟ್ಯಾಂತರ  ರೂಪಾಯಿ ಖರ್ಚು  ಮಾಡಿ ಕಟ್ಟಿರುವ ಯೋಜನೆಗೆ ಮರು ಜೀವ ಕೊಡುವ ಮೂಲಕ ಸಾರ್ವಜನಿಕರಿಗೆ ನೀರೊದಗಿಸುವ ಕೆಲಸ ಮಾಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews