ಮುಂದಿನ ವರ್ಷ IPL ಆಡದಿರಲು ನಿರ್ಧರಿಸಿದ ಪ್ಯಾಟ್ ಕಮಿನ್ಸ್!

ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಹಾಗೂ ಸನ್ರೈಸರ್ಸ್ ಹೈದರಾಬಾದ್ (SRH) ನಾಯಕ ಪ್ಯಾಟ್ ಕಮಿನ್ಸ್ ಅವರು ಮುಂದಿನ ವರ್ಷ ಆಸ್ಟ್ರೇಲಿಯಾ ಪರ ತಮ್ಮ ಕೆಲಸದ ಹೊರೆಯನ್ನು ನಿಭಾಯಿಸಲು 2027ರ IPL ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿರುವ ಸುಳಿವೊಂದನ್ನು ನೀಡಿದ್ದಾರೆ.
IPL ಆರಂಭಿಕ ಋತುವಿನ ಪಂದ್ಯಗಳಿಗೆ ಗೈರು
ಕಮ್ಮಿನ್ಸ್ ಕಳೆದ ಮೂರು ವರ್ಷಗಳಿಂದ ಎಸ್ಆರ್ಹೆಚ್ ಫ್ರಾಂಚೈಸಿಯ ಪ್ರಮುಖ ಆಟಗಾರರಾಗಿದ್ದು, 2024ರಲ್ಲಿ ತಂಡವನ್ನು ಫೈನಲ್ಗೆ ಕರೆದೊಯ್ದಿದ್ದರು.
2026ರಲ್ಲಿ ಅವರು ತಂಡವನ್ನು ಪ್ಲೇಆಫ್ಗೆ ತಲುಪಿಸಲು ಸಹಾಯ ಮಾಡಿದ್ದಾರೆ. ಆದರೆ ಈ ಬಾರಿಯ ಐಪಿಎಲ್ನಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣ ಆರಂಭಿಕ ಪಂದ್ಯಗಳನ್ನು ಕಳೆದುಕೊಂಡು ಕೇವಲ 8 ಪಂದ್ಯಗಳಲ್ಲಿ ಮಾತ್ರ ಆಡಿದ್ದು, 8 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ : Vaibhav Suryavanshi ಗೆ ಕ್ರಿಕೆಟ್ ಟಿಪ್ಸ್ ನೀಡಿದ Virat Kohli..!!

ಆಸ್ಟ್ರೇಲಿಯಾ ಕ್ರಿಕೆಟ್ ವೇಳಾಪಟ್ಟಿ ಒತ್ತಡ
ಮುಂದಿನ ವರ್ಷ ಆಸ್ಟ್ರೇಲಿಯಾದ ಬಿಡುವಿಲ್ಲದ ವೇಳಾಪಟ್ಟಿ ಹೊಂದಿದ್ದು, ಜನವರಿ–ಫೆಬ್ರವರಿಯಲ್ಲಿ ಭಾರತದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ, ನಂತರ 150 ವರ್ಷಗಳ ಟೆಸ್ಟ್ ಕ್ರಿಕೆಟ್ ಸ್ಮರಣಾರ್ಥ ಏಕೈಕ ಪಂದ್ಯ, ಹಾಗೂ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧ ವಿಶೇಷ ಟೆಸ್ಟ್ ನಡೆಯಲಿದೆ.
ಅದೇ ವೇಳೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ಹಾಗೂ ನಂತರ ಆಶಸ್ ಸರಣಿಯೂ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ವಿಶ್ವಕಪ್ಗೆ ಆದ್ಯತೆ ನೀಡಬೇಕೆಂದು ಕಮ್ಮಿನ್ಸ್ ಹೇಳಿದ್ದಾರೆ. “ಮುಂದಿನ ವರ್ಷದ ಟೆಸ್ಟ್ ಪಂದ್ಯಗಳು ಮತ್ತು ಏಕದಿನ ವಿಶ್ವಕಪ್ ಹಿನ್ನೆಲೆ ಕೆಲ ತ್ಯಾಗವನ್ನು ಮಾಡಲು ನಿರ್ಧರಿಸಿದ್ದೇನೆ.
ನಾನು ಆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇನೆ ಮತ್ತು ಅರ್ಥಪೂರ್ಣವಾದದ್ದನ್ನು ನೋಡಲು ಫ್ರಾಂಚೈಸಿಯೊಂದಿಗೆ ಕೆಲಸ ಮಾಡುತ್ತೇನೆ.
ವಿಷಯಗಳು ಬದಲಾಗಬಹುದು. ನನಗೆ ಒಂದೆರಡು ಗಾಯಗಳು ಕಾಣಿಸಿಕೊಂಡಿವೆ, ಆದ್ದರಿಂದ ನಾನು ನಿಜವಾಗಿಯೂ ಯಾವುದನ್ನೂ ಮುಚ್ಚಿಡಲು ಬಯಸುವುದಿಲ್ಲ” ಎಂದು ಕಮಿನ್ಸ್ ಹೇಳಿದ್ದಾರೆ.

ಫ್ರಾಂಚೈಸ್ vs ರಾಷ್ಟ್ರೀಯ ತಂಡ
ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ಗಳು ಜೋಶ್ ಹೇಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಕೂಡ ತಮ್ಮ ಕರಿಯರ್ನ ಕೊನೆಯ ಹಂತಕ್ಕೆ ಪ್ರವೇಶಿಸುತ್ತಿರುವುದರಿಂದ, ತಂಡವು ಆಟಗಾರರ ಕೆಲಸದ ಒತ್ತಡವನ್ನು ನಿರ್ವಹಿಸಲು ಹೊಸ ಯೋಜನೆಗಳನ್ನು ರೂಪಿಸುವ ಸಾಧ್ಯತೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




