ರಾಜ್ಯ ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ, ಸಚಿವರಿಗೆ ಹಂಚಿಕೆಯಾಗಿದ್ದ ಸರ್ಕಾರಿ ವಾಹನಗಳು (Car) ವಾಪಸ್!

ಕುರ್ಚಿ ಸಮರಕ್ಕೆ ತೆರೆಬಿದ್ದಿದೆ. ನಿನ್ನೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಡಿಕೆ ಶಿವಕುಮಾರೇ ಮುಂದಿನ ಸಿಎಂ ಎನ್ನುವುದರ ಸುಳಿವು ನೀಡಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎನ್ನುವುದು ಬಹುತೇಕ ಖಚಿತಗೊಂಡಂತಿದ್ದರೂ ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕವೇ ಸಿಎಂ ಯಾರೆಂಬುದು ಬಹಿರಂಗವಾಗಲಿದೆ.
ರಾಜ್ಯ ಸಚಿವ ಸಂಪುಟ ಅಧಿಕೃತವಾಗಿ ವಿಸರ್ಜನೆ
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟ ಅಧಿಕೃತವಾಗಿ ವಿಸರ್ಜನೆಗೊಂಡಿದೆ. ನಿನ್ನೆ ಮುಖ್ಯಮಂತ್ರಿಗಳು ನೀಡಿದ್ದ ರಾಜೀನಾಮೆಯನ್ನು ಇಂದು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಪ್ರಮುಖ ರಾಜಕೀಯ ಸ್ಥಿತ್ಯಂತರದ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿನಲ್ಲಿ ಆಡಳಿತಾರೂಢ ಸಚಿವರ ಅಧಿಕೃತ ಸೌಲಭ್ಯಗಳನ್ನು ಹಿಂಪಡೆಯುವ ಪ್ರಕ್ರಿಯೆ ಬಿರುಸಿನಿಂದ ಆರಂಭವಾಗಿದೆ.

ಸರ್ಕಾರಿ ವಾಹನಗಳು ವಾಪಸ್!
ಸಚಿವ ಸಂಪುಟ ವಿಸರ್ಜನೆಯಾಗುತ್ತಿದ್ದಂತೆ, ಈವರೆಗೆ ಸಚಿವರಿಗೆ ಹಂಚಿಕೆಯಾಗಿದ್ದ ಅಧಿಕೃತ ಸರ್ಕಾರಿ ವಾಹನಗಳನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆದಿದೆ. ಇನ್ನು ಇದ್ರಿಂದಾಗಿ ಹಾಲಿ ಸಚಿವರಾಗಿದ್ದ ನಾಯಕರುಗಳು ಇದೀಗ ಮಾಜಿಗಳಾಗಿದ್ದು, ತಮ್ಮ ಅಧಿಕೃತ ಸರ್ಕಾರಿ Car ಗಳನ್ನು ಬಿಟ್ಟು ಖಾಸಗಿ ವಾಹನಗಳಿಗೆ ಶಿಫ್ಟ್ ಆಗುತ್ತಿದ್ದಾರೆ. ಸಚಿವರ ನಿವಾಸಗಳ ಮುಂದೆ ನಿಲ್ಲುತ್ತಿದ್ದ ಕಾರುಗಳು ಇದೀಗ ಸಚಿವಾಲಯ ಮತ್ತು ಸಂಬಂಧಿತ ಇಲಾಖೆಗಳ ವಶಕ್ಕೆ ಮರಳುತ್ತಿವೆ.
ಇದನ್ನು ಓದಿ : ಕೊನೆಗೂ ಸಿಎಂ ಸ್ಥಾನದಿಂದ ಕೆಳಗಳಿದ ಸಿದ್ದರಾಮಯ್ಯ – ಸುದ್ದಿಗೋಷ್ಠಿಯಲ್ಲಿ ಭಾವುಕರಾದ ಟಗರು
ಸರ್ಕಾರಿ ನಿವಾಸಗಳ ಮುಂದಿನ ನಾಮಫಲಕಗಳನ್ನು ತೆರವು
ಇನ್ನೊಂದೆಡೆ, ಸಚಿವರಿಗೆ ನೀಡಲಾಗಿದ್ದ ಸರ್ಕಾರಿ ನಿವಾಸಗಳ ಮುಂದಿನ ನಾಮಫಲಕಗಳನ್ನು ತೆರವುಗೊಳಿಸುವ ಕಾರ್ಯವೂ ವೇಗ ಪಡೆದಿದೆ.
ಕೆಲ ಮಾಜಿ ಸಚಿವರು ತಮ್ಮ ಹೆಸರಿನ ಬೋರ್ಡ್ಗಳನ್ನು ತೆಗೆಸುತ್ತಿದ್ದಾರೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿದ್ದ ನಾಮಫಲಕ ಕೂಡ ತೆಗೆದುಹಾಕಲಾಗಿದೆ.

ಮುಂದಿನ CM ಯಾರು..?
ಯಾವ ನಿವಾಸಗಳಲ್ಲಿ ನಾಮಫಲಕಗಳನ್ನು ತಕ್ಷಣ ತೆಗೆಯಲು ಸಾಧ್ಯವಾಗಿಲ್ಲವೋ, ಅಲ್ಲಿ ಸಿಬ್ಬಂದಿಗಳು ಸಚಿವರ ಹೆಸರಿನ ಫಲಕಗಳನ್ನು ಪೇಪರ್ ಅಂಟಿಸಿ ಮುಚ್ಚುತ್ತಿದ್ದಾರೆ.
ಅಧಿಕಾರ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಸಚಿವರ ಬಂಗಲೆಗಳ ವಾತಾವರಣವೇ ಬದಲಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇನ್ನು ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲದ ನಡುವೆ, ಮಾಜಿ ಸಚಿವರುಗಳು ಇದೀಗ ಸಾಮಾನ್ಯ ಶಾಸಕರಾಗಿ ತಮ್ಮ ಖಾಸಗಿ ನಿವಾಸ ಹಾಗೂ ವಾಹನಗಳತ್ತ ಮುಖ ಮಾಡಿದ್ದಾರೆ.
ಇದನ್ನು ನೋಡಿ : ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವೆಂಕಟರಮಣಪ್ಪ ಇನ್ನಿಲ್ಲ

ಇದನ್ನು ನೋಡಿ : FINANCE ಸಿಬ್ಬಂದಿಯಿಂದ ಅವಮಾನ – ಆತ್ಮಹ* ಗೆ ಶರಣಾದ ಯುವ ರೈತ.!




