ರಾಜ್ಯ ಹೆದ್ದಾರಿಯಲ್ಲಿ ಏಕಾಏಕಿ Tempo Tyre Blast ಆಗಿದ್ದು, ಓರ್ವ ಸಾವನ್ನಪ್ಪಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿ ಏಕಾಏಕಿ ಟೆಂಪೋ ಟೈಯರ್ ಬ್ಲ್ಯಾಸ್ಟ್ ಆಗಿದ್ದು, ಓರ್ವ ಸಾವನ್ನಪ್ಪಿದ್ರೆ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮಧುಗಿರಿ ಪಟ್ಟಣದ ಬಡವನಹಳ್ಳಿ ರಸ್ತೆಯ ದಬ್ಬಘಟ್ಟ ಪದವಿ ಪೂರ್ವ ಕಾಲೇಜಿನ ಸಮೀಪ ನಡೆದಿದೆ. ಶಿರಾ-ಮಧುಗಿರಿ ರಾಜ್ಯ ಹೆದ್ದಾರಿಯಲ್ಲಿ ಟೈಲ್ಸ್ ತುಂಬಿಕೊಂಡು ಕೈಮರಕ್ಕೆ ತೆರಳುತ್ತಿದ್ದಾಗ ಟೆಂಪೋ ಟೈಯರ್ ಏಕಾಏಕಿ ಬ್ಲ್ಯಾಸ್ಟ್ ಆಗಿದೆ. ಬ್ಲ್ಯಾಸ್ಟ್ ಆಗಿದ ಪರಿಣಾಮ ಟೆಂಪೋ ಅಪಘಾತಕ್ಕೀಡಾಗಿದೆ.
ಇದನ್ನು ಓದಿ : ತಿರುಪತಿ-ಶಿರಡಿ ಎಕ್ಸ್ಪ್ರೆಸ್ಗೆ ಸಚಿವ Somanna ಚಾಲನೆ

ಟೆಂಪೋ ಟೈಯರ್ ಬ್ಲ್ಯಾಸ್ಟ್
ಟೆಂಪೋದಲ್ಲಿ 7 ಮಂದಿ ಪ್ರಯಾಣ ಮಾಡ್ತಾ ಇದ್ದು, ಟೆಂಪೋ ಮುಂಭಾಗದಲ್ಲು ಮೂವರು ಮಂದಿ ಹಾಗೂ ಟೆಂಪೋ ಹಿಂಭಾಗದಲ್ಲಿ ನಾಲ್ವರು ಮಂದಿ ಪ್ರಯಾಣ ಮಾಡ್ತಾ ಇದ್ರು ಎನ್ನಲಾಗಿದ್ದು, Tempo Tyre Blast ಆಗಿದ್ದು, ಟೆಂಪೋ ಹಿಂಭಾಗದಲ್ಲಿದ್ದ ಓರ್ವ ಮಂದಿ ಸಾವನ್ನಪ್ಪಿದ್ರೆ, ಮೂವರು ಮಂದಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹೊಸಕೆರೆ ಗ್ರಾಮದ ಬಸವನಹಳ್ಳಿ ಗ್ರಾಮದ ರಂಗನಾಥ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ರಮಕ್ಕೆ ಮುಂದಾಗಿದ್ರು. ಇತ್ತ ಅಪಘಾತದಲ್ಲಿ ವ್ಯಕ್ತಿ ದುರ್ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಇದನ್ನು ನೋಡಿ : RAID ON ICE- CREAM FACTORY | ಐಸ್ಕ್ರೀಮ್ & ಬಾದಾಮ್ ಮಿಲ್ಕ್ ಘಟಕಗಳಲ್ಲಿ ರೇಡ್ – ಅಧಿಕಾರಿಗಳು ಶಾಕ್




