Attempt To Murder Case : ಮಧುಗಿರಿ ಪಟ್ಟಣದಲ್ಲಿ ವ್ಯಕ್ತಿಯೋರ್ವನ ಮೇಲೆ ಏಕಾಏಕಿ ಚಾಕು ಇರಿದು ಕೊಲೆಗೆ ಯತ್ನಿಸಿರೋ ಘಟನೆ ನಡೆದಿದೆ.

ಮಧುಗಿರಿ ಪಟ್ಟಣದಲ್ಲಿ ವ್ಯಕ್ತಿಯೋರ್ವನ ಮೇಲೆ ಏಕಾಏಕಿ ಚಾಕು ಇರಿದು ಕೊಲೆಗೆ ಯತ್ನಿಸಿರೋ ಘಟನೆ ನಡೆದಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
ಮಧುಗಿರಿ ಪಟ್ಟಣದ ಡೂಂ ಲೈಟ್ ಸರ್ಕಲ್ ಬಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಿನ್ನೆ ಮಟ ಮಟ ಮಧ್ಯಾಹ್ನವೇ ವ್ಯಕ್ತಿಯೋರ್ವ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ.
ಹೊಟ್ಟೆ ಮತ್ತು ಕೈ ಭಾಗಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್
ಮಧುಗಿರಿ ಪಟ್ಟಣದ ಸಿಹಿ ನೀರು ಭಾವಿ ಸಮೀಪದ ನಿವಾಸಿಯಾಗಿರೋ ಚಾಲಕ ಅಜಾಂ ಪಾಷಾ ಎಂಬುವವನು ಮಾರುತಿ ಎಂಬವವನ ಹೊಟ್ಟೆ ಮತ್ತು ಕೈ ಭಾಗಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಮಾರುತಿ ಎಂಬಾತ ಮಧುಗಿರಿಯ ಪ್ರೈವೇಟ್ ಬಸ್ ನಿಲ್ದಾಣದ ಸಮೀಪ ಟೀ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ. ಅಜಾಂಪಾಷಾ ಬೈಕ್ನಲ್ಲಿ ಬಂದು ಮಾರುತಿಗೆ ಏಕಾಏಕಿ ಚಾಕು ಇರಿದು, ಚಾಕುವನ್ನು ಹಾಗೂ ಬೈಕ್ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಇದನ್ನು ಓದಿ : ಡಿಸಿಎಂ ಡಿಕೆಶಿಗೆ ಸಿಎಂ ಪಟ್ಟ ನೀಡಲು ಬೆಂಬಲಿಗರ ಆಗ್ರಹ
ಹಳೆ ದ್ವೇಷ ಹಿನ್ನೆಲೆ ಚಾಕು ಇರಿದು ಕೊಲೆ ಯತ್ನ
ಚಾಕು ಇರಿತದಿಂದ ತೀವ್ರ ಗಾಯಗೊಂಡಿರೋ ಗಾಯಾಳು ಮಾರುತಿಯನ್ನು ಮಧುಗಿರಿಯಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಹಳೆ ದ್ವೇಷ ಹಿನ್ನೆಲೆ ಚಾಕು ಇರಿದು ಕೊಲೆ ಯತ್ನ ನಡೆದಿದೆ ಎಂದು ಗಾಯಾಳು ಮಾರುತಿ ಪೊಲೀಸರ ಬಳಿ ಹೇಳಿಕೆ ನೀಡಿದ್ದು, ಪೊಲೀಸರು ಗಾಯಾಳು ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ದೇ ಕೊಲೆಗೆ ಯತ್ನಿಸಿರೋ ಆಜಾಂಪಾಷಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ DYSP ಜಿ ಮಂಜುನಾಥ್ ಭೇಟಿ
ಇನ್ನು ಘಟನಾಸ್ಥಳಕ್ಕೆ ಡಿವೈಎಸ್ಪಿ ಜಿ ಮಂಜುನಾಥ್, ಸಿಪಿಐ ಹನುಮಂತರಾಯಪ್ಪ ,ಪಿಎಸ್ಐ ಎಂ.ಎಸ್. ಚಂದ್ರಶೇಖರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಅದೇನೆ ಆಗಲಿ ದ್ವೇಷ ಇದೆ ಎಂದು ಈ ರೀತಿಯ ಚಾಕು ಚುಚ್ಚಿ ಕೊಲೆಗೆ ಯತ್ನಿಸಿರೋದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನು ನೋಡಿ : ಗೊಂದಲಗಳ ನಡುವೆಯೂ ಉದ್ಘಾಟನೆಗೆ ಸಿದ್ಧವಾಯ್ತು ಹೈಟೆಕ್ ರೇಷ್ಮೆ ಮಾರುಕಟ್ಟೆ




