ಸಿಲಿಕಾನ್ ಸಿಟಿ Bangalore ನಲ್ಲಿ ಸಚಿವರ ಮಗನೆಂದು ಹೇಳಿಕೊಂಡು ಮಹಿಳೆಯರಿಗೆ ಮದುವೆ ಭರವಸೆ ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಮದುವೆ ಮಂಟಪದಲ್ಲೇ ಬಂಧಿಸಿದ್ದಾರೆ.

Bangalore ಸಿಲಿಕಾನ್ ಸಿಟಿಯಲ್ಲಿ ಗಂಭೀರ ಲವ್ ದೋಖಾ ಪ್ರಕರಣ ಬೆಳಕಿಗೆ ಬಂದಿದೆ. ಸಚಿವರ ಮಗನೆಂದು ಸುಳ್ಳು ಪರಿಚಯ ನೀಡಿ ಹಲವಾರು ಮಹಿಳೆಯರಿಗೆ ಮದುವೆ ಭರವಸೆ ನೀಡಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಮದುವೆ ಮಂಟಪದಲ್ಲೇ ಬಂಧಿಸಿದ್ದಾರೆ. ಹಲವಾರು ಮಹಿಳೆಯರಿಂದ ದೂರುಗಳು ಬಂದ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದ್ದರು.

ತನಿಖೆಯ ವೇಳೆ ಆರೋಪಿ ಮತ್ತೊಂದು ಮದುವೆಗೆ ಸಜ್ಜಾಗಿದ್ದಾಗಲೇ ಮದುವೆ ಮಂಟಪದಲ್ಲೇ ಬಂಧನ ನಡೆದಿದೆ. ಆರೋಪಿ ಮೊದಲಿಗೆ ಮಹಿಳೆಯರ ವಿಶ್ವಾಸ ಗಳಿಸಿ, ತನ್ನನ್ನು ಸಚಿವರ ಮಗನೆಂದು ಪರಿಚಯಿಸಿಕೊಂಡು ಮದುವೆ ಭರವಸೆ ನೀಡುತ್ತಿದ್ದ ಎನ್ನಲಾಗಿದೆ. ಬಳಿಕ ಭಾವನಾತ್ಮಕ ಹಾಗೂ ದೈಹಿಕ ಸಂಬಂಧ ಬೆಳೆಸಿ ನಂತರ ಅವರನ್ನು ತ್ಯಜಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
MUST READ : ರೇಣುಕಾಸ್ವಾಮಿ ಕೊಲೆ ಪ್ರಕರಣ – ನಾಳೆ ನಟ ದರ್ಶನ್ಗೆ ಬಿಗ್ ಡೇ

ಇದಲ್ಲದೆ, ಆತ ಹಲವಾರು ಮಹಿಳೆಯರನ್ನು ಇದೇ ರೀತಿ ಗುರಿಯಾಗಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದು, ಮತ್ತಷ್ಟು ದೂರುಗಳು ಹಾಗೂ ಸಾಕ್ಷ್ಯಗಳ ಆಧಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಮತ್ತು ಪರಿಚಯಗಳ ಮೂಲಕ ಪ್ರೀತಿ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸೂಚಿಸಿದ್ದಾರೆ.
MUST WATCH : TUMAKURU |ಪಕ್ಷೇತರ ಅಭ್ಯರ್ಥಿಯಾಗಿ MADHUSWAMY ಸ್ಪರ್ಧೆ..?! – ಸ್ಪರ್ಧೆ ಬಗ್ಗೆ ಮಾಧುಸ್ವಾಮಿ ಶಾಕಿಂಗ್ ಹೇಳಿಕೆ




