ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಜೋಡಿಯಾಗಿ ನಟಿಸಿರುವ Landlord ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ.

Sandalwood ಸಲಗ ದುನಿಯಾ ವಿಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾದ ‘ನಿಂಗವ್ವ ನಿಂಗವ್ವ’ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ.
ಇನ್ನು ಈಗಾಗಲೇ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಹಾಡು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಪಕ್ಕಾ ಮಾಸ್ ಎಂಟರ್ಟೈನರ್
ಭೀಮ ಚಿತ್ರದ ನಂತರ ದುನಿಯಾ ವಿಜಯ್ ಅಭಿನಯಿಸುತ್ತಿರುವ ಹಾಗೂ ಗುರು ಶಿಷ್ಯರು ಸಿನಿಮಾದ ನಂತರ ಜಡೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ Landlard ಪಕ್ಕಾ ಮಾಸ್ ಎಂಟರ್ಟೈನರ್ ಆಗಿ ತೆರೆಗೆ ಬರಲಿದೆ.
ಇತ್ತೀಚೆಗಷ್ಟೇ ರಾಜ್ ಬಿ ಶೆಟ್ಟಿಯನ್ನು ಖಡಕ್ ವಿಲನ್ ಆಗಿ ಪರಿಚಯಿಸಿದ್ದ ಚಿತ್ರತಂಡ, ಇದೀಗ ರೊಮ್ಯಾಂಟಿಕ್ ಟಚ್ ಹೊಂದಿರುವ ‘ನಿಂಗವ್ವ ನಿಂಗವ್ವ’ ಹಾಡನ್ನು ರಿಲೀಸ್ ಮಾಡಿದೆ.

ಈ ಹಾಡನ್ನು ಲವ್ಲೀ ಸ್ಟಾರ್ ಪ್ರೇಮ್–ಪತ್ನಿ ಜೋಡಿ, ಡಾರ್ಲಿಂಗ್ ಕೃಷ್ಣ–ಮಿಲನ ಅಮೃತರಾಜ್ ಜೋಡಿ ಹಾಗೂ ತರುಣ್ ಸುಧೀರ್–ಸೋನಲ್ ಮೊಂತೇರೋ ಜೋಡಿ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕಾಂಬಿನೇಶನ್
ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ಈ ಹಾಡು, ಚಳಿಗಾಲದಲ್ಲಿ ಗಂಡ ಹೆಂಡತಿ ಅಥವಾ ಪ್ರಿಯತಮ–ಪ್ರಿಯತಮೆಗೆ ಹೇಳಿಕೊಳ್ಳುವ ಪ್ರೇಮವನ್ನು ಸುಂದರವಾಗಿ ಚಿತ್ರಿಸುತ್ತದೆ.
ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ವಿಜಯ್ ಪ್ರಕಾಶ್ ಅವರ ಕಂಠಸಿರಿ ಹಾಡಿಗೆ ಮತ್ತಷ್ಟು ಮಧುರತೆ ನೀಡಿದೆ.
ಇದನ್ನು ಓದಿ :

ಈ ಹಾಡು ಗ್ರ್ಯಾಂಡ್ ಸಕ್ಸಸ್ ಆಗುತ್ತೆ
ಹಾಡಿನ ಕುರಿತು ಮಾತನಾಡಿದ ದುನಿಯಾ ವಿಜಯ್, “ರಾಚಯ್ಯ ಗೆಟಪ್ ಹಾಕಿದಾಗ ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ ಇತ್ತು. ಆದರೆ ಈಗ ನೋಡಿದ್ರೆ ಈ ಹಾಡು ಗ್ರ್ಯಾಂಡ್ ಸಕ್ಸಸ್ ಆಗುತ್ತೆ ಅನ್ನೋ ನಂಬಿಕೆ ಬಂದಿದೆ. ವಿಜಯ್ ಪ್ರಕಾಶ್ ಸರ್ ಹಾಡಿಗೆ ಭಾರೀ ಎನರ್ಜಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ರೈತರ ಮನೆಯ ಪ್ರತಿನಿಧಿಯಾಗಿ ನಟಿಸಿದ್ದೀನಿ” ಎಂದು ಹೇಳಿದರು.
ಲ್ಯಾಂಡ್ ಲಾರ್ಡ್ ಚಿತ್ರವನ್ನು ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ನಿರ್ಮಾಣ ಮಾಡಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ.

ಇದನ್ನು ನೋಡಿ : ಕ್ಯಾನ್ಸರ್ ಕಾರಕ ವದಂತಿ ಬೆನ್ನಲ್ಲೇ ಅಲರ್ಟ್ – ಖಾಸಗಿ ಲ್ಯಾಬ್ನಲ್ಲಿ ಮೊಟ್ಟೆ ಟೆಸ್ಟ್ಗೆ ರಾಜ್ಯ ಸರ್ಕಾರ ಅದೇಶ




