ಜಿಬಿಎ ಸಿಬ್ಬಂದಿ ಕೆಲಸಕ್ಕೆ ನಟಿ Aindrita Ray ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗೋಳು ಕೇಳೋರೇ ಇಲ್ಲ. Greater Bengaluru ಸಿಬ್ಬಂದಿ ಆಗಾಗ ಮಾಡುವ ಯಡವಟ್ಟುಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಐಂದ್ರಿತಾ ರೈ ಅಸಮಾಧಾನ
ಜಿಬಿಎ ಸಿಬ್ಬಂದಿಯ ಕಾರ್ಯವೈಖರಿಯ ವಿರುದ್ಧ ನಟಿ ಐಂದ್ರಿತಾ ರೈ (Aindrita Ray) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಬೆಂಗಳೂರಿನ ಆರ್.ಆರ್. ನಗರ ವ್ಯಾಪ್ತಿಯ ಐಡಿಯಲ್ ಹೋಮ್ ಲೇಔಟ್ನಲ್ಲಿ ವಾಸವಾಗಿದ್ದು, ಲೇಔಟ್ ಸುತ್ತಮುತ್ತ ಜಿಬಿಎ ಸಿಬ್ಬಂದಿ ಕಸ ಸ್ವಚ್ಛಗೊಳಿಸಿ ಅದನ್ನೇ ಸ್ಥಳದಲ್ಲೇ ಸುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : ಲ್ಯಾಂಡ್ ಲಾರ್ಡ್ ಚಿತ್ರದ `ನಿಂಗವ್ವ ನಿಂಗವ್ವ’ ಸಾಂಗ್ ರಿಲೀಸ್

ಸುತ್ತಮುತ್ತ ಕಸ ಕ್ಲೀನ್ ಮಾಡಿ ಕಸ ಸುಟ್ಟಿದ್ದಾರೆ
ಕಸ ಸುಟ್ಟ ಪರಿಣಾಮ ಉಂಟಾದ ಹೊಗೆಯಿಂದ ಮನೆ ಒಳಗೇ ಇರುವುದಕ್ಕೂ ತೊಂದರೆಯಾಗುತ್ತಿದೆ. ಸುಟ್ಟ ಕಸದ ಹೊಗೆ ಮನೆಯೊಳಗೆ ನುಗ್ಗುತ್ತಿದ್ದು, ರೆಸಿಡೆನ್ಶಿಯಲ್ ಪ್ರದೇಶದಲ್ಲಿ ಈ ರೀತಿಯ ಕಾರ್ಯಾಚರಣೆ ಯಾಕೆ ನಡೆಯುತ್ತಿದೆ ಎಂಬ ಪ್ರಶ್ನೆಯನ್ನು Aindrita Ray ಎತ್ತಿದ್ದಾರೆ.
ಕಂಟ್ರೋಲ್ ರೂಂಗೆ ಫೋನ್ ಮಾಡಿದ್ರು ನೋ ರೆಸ್ಪಾನ್ಸ್
ಜಿಬಿಎ ಕಂಟ್ರೋಲ್ ರೂಂಗೆ ಫೋನ್ ಮಾಡಿದ್ರು No Response. ಜಿಬಿಎ ಹೆಲ್ಫ್ ಲೈನ್ ಗೆ ಕಾಲ್ ಮಾಡಿದ್ರೆ ನಂಬರ್ ಸ್ಥಗಿತವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಹಾಯ ಮಾಡಿ ಎಂದು ವಿಡಿಯೋ ಮಾಡಿ ಶಾಸಕ ಮುನಿರತ್ನರನ್ನ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.

ಇದನ್ನು ನೋಡಿ : ಪವಿತ್ರ ಗೌಡಗೆ ಬಿಗ್ ಶಾಕ್.. ಆ ಬೇಡಿಕೆಗೆ ಸೊಪ್ಪು ಹಾಕದ ದರ್ಶನ್..!




