Political News : ಸಿದ್ದು ರಾಜೀನಾಮೆ ಬೆನ್ನಲ್ಲೇ ನಾಳೆ CLP ಮೀಟಿಂಗ್ – ಮಂತ್ರಿ ಸ್ಥಾನಕ್ಕಾಗಿ ಶಾಸಕರಿಂದ ಜೋರಾದ ಲಾಭಿ?

ನಿನ್ನೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಸಚಿವ ಸಂಪುಟ ವಿಸರ್ಜನೆ ಆಗಿದೆ. ನಾಳೆ ಸಂಜೆ 4 ಗಂಟೆಗೆ ವಿಧಾನಸೌಧದ 3ನೇ ಮಹಡಿಯಲ್ಲಿ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಹೊಸ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ಹಾಲಿ ಇದ್ದ ಸಚಿವರು ಮತ್ತು ಸ್ಥಾನ ಗಿಟ್ಟಿಸಲು ಹಿರಿಯ ಶಾಸಕರು ಪೈಪೋಟಿಗಿಳಿದಿದ್ದಾರೆ.

ಸಚಿವ ಸ್ಥಾನ ಸಿಗದ ನಾಯಕರು ಸಂಪುಟ ಸೇರಲು ಸರ್ಕಸ್
ಇನ್ನು ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ಜೋರಾಗುತ್ತಿದ್ದಂತೆ ಸಚಿವಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ. ಮಾಜಿ ಸಚಿವ ಬೋಸರಾಜು, ಶಾಸಕ ಶಿವಲಿಂಗೇಗೌಡ, MLC ಪುಟ್ಟಣ್ಣ ಸೇರಿದಂತೆ ಹಲವರು ಈಗಾಗಲೇ ದೆಹಲಿಗೆ ತೆರಳಿದ್ದು, ಡಿಕೆಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸದ್ಯ ಸಿದ್ದು ಸರ್ಕಾರದಲ್ಲಿ ಸಚಿವರಾಗಿದ್ದವರು ಮುಂದಿನ ಸಂಪುಟದಲ್ಲೂ ತಮ್ಮ ಸ್ಥಾನ ಉಳಿಸಿಕೊಳ್ಳಲು ನಾನಾ ಪ್ರಯತ್ನ ಮಾಡ್ತಾ ಇದ್ರೆ, ಮತ್ತೊಂದೆಡೆ ಹಿರಿಯ ಶಾಸಕರಾಗಿದ್ದೂ ಈವರೆಗೆ ಸಚಿವ ಸ್ಥಾನ ಸಿಗದ ನಾಯಕರು ಈ ಬಾರಿ ಸಂಪುಟ ಸೇರಲು ಸರ್ಕಸ್ ಆರಂಭಿಸಿದ್ದಾರೆ.

ಸಿದ್ದು ಸಂಪುಟ ಸಚಿವರು ಪುನಃ ಆಯ್ಕೆ?
ಇನ್ನು ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ 29 ಮಂದಿ ಸಚಿವರ ಪೈಕಿ 11 ರಿಂದ 13 ಮಂದಿ ಸಂಪುಟಕ್ಕೆ ಪುನಃ ಆಯ್ಕೆ ಆಗುವ ಸಾಧ್ಯತೆ ಇದೆ. ಹಾಗಾದ್ರೆ ಯಾರ್ ಯಾರು ಪುನಃ ಸಚಿವರಾಗಿ ಆಯ್ಕೆ ಆಗ್ತಾರೆ ಅಂತಾ ನೋಡೋದಾದ್ರೆ,
ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಕೆಜೆ ಜಾರ್ಜ್, ಈಶ್ವರ್ ಖಂಡ್ರೆ, ಎಂಬಿ ಪಾಟೀಲ್, ಡಾ.ಜಿ ಪರಮೇಶ್ವರ್, ಎಚ್ ಕೆ ಪಾಟೀಲ್, ಶಿವರಾಜ ತಂಗಡಗಿ, ಕೆ ಎಚ್ ಮುನಿಯಪ್ಪ, ಮಂಕಾಳ್ ವೈದ್ಯ, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್ಗೆ ಹೊಸ ಸರ್ಕಾರದಲ್ಲಿ ಮತ್ತೆ ಸಚಿವರಾಗುವ ಸಾಧ್ಯತೆ ಇದೆ. ಇವರನ್ನು ಹೊರತುಪಡಿಸಿ ಇನ್ನು ಹಲವರ ಹೆಸರನ್ನ ಡಿಕೆಸಿ ಲೀಸ್ಟ್ ಮಾಡಿಕೊಂಡಿದ್ದು, ಹೈಕಮಾಂಡ್ ಬಳಿ ಪ್ರಸ್ತಾಪ ಮಾಡಲಿದ್ದಾರೆ. ಹೈಕಮಾಂಡ್ ಒಪ್ಪಿಗೆ ಬೆನ್ನಲ್ಲೇ ಸಚಿವರು ಆಯ್ಕೆಯಾಗಲಿದ್ದಾರೆ.
ಇದನ್ನು ಓದಿ : Siddaramaiah ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಗೆಹ್ಲೋಟ್..!!

ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಕೆಲ ಕಂಡಿಷನ್ಸ್
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿಯನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಸತೀಶ್ ಜಾರಕಿಹೊಳಿಗೆ ಕರೆ ಮಾಡಿ ಈ ಆಫರ್ನನ್ನು ನೀಡಲಾಗಿದ್ಯಂತೆ. ಆದ್ರೆ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಕೆಲ ಕಂಡಿಷನ್ಸ್ ಹಾಕಿದ್ದಾರೆ ಎಂದು ಹೇಳಲಾಗಿದೆ.
ಡಿಸಿಎಂ ಸ್ಥಾನ ಪಡೆಯಲು ನಾಯಕರಲ್ಲಿ ಫೈಟ್
ಇನ್ನು ಸರ್ಕಾರ ರಚನೆ ಕಸರತ್ತು ಜೋರಾಗುತ್ತಿದ್ದಂತೆ ದೆಹಲಿಯಲ್ಲಿರುವ ಡಿಕೆಶಿ ಹಾಗೂ ಸಿದ್ದು ಅವರು ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇತ್ತ ನೂತನ ಸರ್ಕಾರದಲ್ಲಿ ನಾಲ್ವರಿಗೆ ಡಿಸಿಎಂ ಸ್ಥಾನ ರಚನೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಡಿಸಿಎಂ ಸ್ಥಾನ ಪಡೆಯಲು ನಾಯಕರಲ್ಲಿ ಫೈಟ್ ಶುರುವಾಗಿದೆ. ಸಮುದಾಯದ ಶಾಸಕರ ಬೆಂಬಲ ಪಡೆಯಲು ನಾಯಕರು ಮುಂದಾಗಿದ್ದು, ನಿನ್ನೆ ಲಿಂಗಾಯತ ಸಮಯದಾಯದ ಶಾಸಕರ ಜೊತೆ ಈಶ್ವರ್ ಖಂಡ್ರೆ ಸಭೆ ನಡೆಸಿ, ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ನೂತನ ಸಿಎಂ ಪದಗ್ರಹಣ ಯಾವಾಗ
ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿದ್ದು, ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ, ಡಿಸಿಎಂ ಹುದ್ದೆ ಸೃಷ್ಟಿಯಾಗುತ್ತಾ..? ಇಲ್ವಾ, ನೂತನ ಸಿಎಂ ಪದಗ್ರಹಣ ಯಾವಾಗ ಅನ್ನೋ ಪ್ರಶ್ನೆಗಳಿಗೆ ನಾಳೆ ಗೊತ್ತಾಗಲಿದೆ.
ಇದನ್ನು ನೋಡಿ : CM ಸ್ಥಾನಕ್ಕೆ SIDDRAMAIAH ರಾಜೀನಾಮೆ – SIDDU ನೆನೆದು DR.M.C.SUDHAKAR ಕಣ್ಣೀರು




