Kerala ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಚಾತನೂರು ಕ್ಷೇತ್ರದಲ್ಲಿ ಖಾತೆ ತೆರೆದಿದೆ. ಬಿ.ಬಿ. ಗೋಪಕುಮಾರ್ 3,686 ಮತಗಳಿಂದ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

Kerala ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆದಿದ್ದು, ಕೊಲ್ಲಂ ಜಿಲ್ಲೆಯ ಚಾತನೂರು ಕ್ಷೇತ್ರದಲ್ಲಿ ಬಿ.ಬಿ. ಗೋಪಕುಮಾರ್ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ಬಾರಿ ಶೂನ್ಯ ಸಾಧನೆ ಮಾಡಿದ್ದ ಬಿಜೆಪಿ, ಈ ಬಾರಿ ತನ್ನ ಅಸ್ತಿತ್ವವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಈ ಕ್ಷೇತ್ರದಲ್ಲಿ ಗೋಪಕುಮಾರ್ ಅವರು ಸಿಪಿಐ ಅಭ್ಯರ್ಥಿ ಆರ್. ರಾಜೇಂದ್ರನ್ ವಿರುದ್ಧ ಕಠಿಣ ಪೈಪೋಟಿ ನಡೆಸಿದರು. ಅಂತಿಮವಾಗಿ ಅವರು 3,686 ಮತಗಳ ಅಂತರದಿಂದ ಜಯಗಳಿಸಿದ್ದು, ಗೋಪಕುಮಾರ್ ಅವರಿಗೆ 46,567 ಮತಗಳು ಬಂದರೆ, ರಾಜೇಂದ್ರನ್ ಅವರಿಗೆ 42,881 ಮತಗಳು ದೊರಕಿವೆ. ಇದು ಬಿಜೆಪಿ ಪರ ಮಹತ್ವದ ರಾಜಕೀಯ ಗೆಲುವಾಗಿದೆ.
MUST READ : Davanagere ದಕ್ಷಿಣದಲ್ಲಿ ಕಾಂಗ್ರೆಸ್ ಗೆಲುವು..!!

ಚಾತನೂರು ಕ್ಷೇತ್ರವು 2006ರಿಂದ ಸಿಪಿಐನ ಭದ್ರಕೋಟೆಯಾಗಿದ್ದು, ಈ ಬಾರಿ ಅದನ್ನು ಭೇದಿಸುವಲ್ಲಿ ಗೋಪಕುಮಾರ್ ಯಶಸ್ವಿಯಾಗಿದ್ದಾರೆ. 2021ರ ಚುನಾವಣೆಯಲ್ಲಿ ಸಿಪಿಐನ ಜಯಲಾಲ್ ಅವರು 17,206 ಮತಗಳ ಅಂತರದಿಂದ ಗೆದ್ದಿದ್ದರು. ಆಗ ಗೋಪಕುಮಾರ್ ಸೋಲು ಕಂಡಿದ್ದರೂ, 2016ರಿಂದ ನಿರಂತರವಾಗಿ ಸ್ಪರ್ಧಿಸುತ್ತಾ ಬಂದ ಅವರು ಈ ಬಾರಿ ಗೆಲುವು ಸಾಧಿಸಿದ್ದಾರೆ.
ಕೇರಳದಲ್ಲಿ ಬಿಜೆಪಿ ತನ್ನ ನೆಲೆಯನ್ನು ಬಲಪಡಿಸಲು ಹಲವು ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ. 2016ರಲ್ಲಿ ಓ. ರಾಜಗೋಪಾಲ್ ಅವರು ನೇಮಮ್ ಕ್ಷೇತ್ರದಲ್ಲಿ ಗೆದ್ದು ಬಿಜೆಪಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿತ್ತು. ಆದರೆ 2021ರಲ್ಲಿ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರು ತ್ರಿಶೂರ್ನಿಂದ ಗೆದ್ದು ಕೇರಳದ ಮೊದಲ ಬಿಜೆಪಿ ಸಂಸದರಾಗಿದ್ದರು.

ಇತ್ತೀಚೆಗೆ ನಡೆದ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ನೀಡಿದ್ದು, 101 ವಾರ್ಡ್ಗಳ ಪೈಕಿ 50 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರಕ್ಕೆ ಏರಿದೆ. ಒಟ್ಟಾರೆ, ಚಾತನೂರಿನಲ್ಲಿ ಬಿಜೆಪಿ ಗೆಲುವು ಕೇರಳ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸುವ ಸೂಚನೆ ನೀಡುತ್ತಿದೆ.
MUST WATCH : KORATAGERE DEVELOPMENTಆಗಿದ್ಯಾ..? PARAM ಕೆಲಸದ ಬಗ್ಗೆ ಜನ ಏನಂದ್ರು?




