Karnataka Cyber Crime : ಇತ್ತೀಚಿನ ದಿನಗಳಲ್ಲಿ 19 min, 40 min, 55 min ಎನ್ನುವ ಶೀರ್ಷಿಕೆಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ಪ್ರಮೋಟ್ ಮಾಡುತ್ತಿದ್ದ ಖಾತೆಗಳ ವಿರುದ್ಧ ಕಠಿಣ ಕ್ರಮ ಆರಂಭವಾಗಿದೆ.

Karnataka Cyber Crime : ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಪ್ರಚಾರಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ 19 min, 40 min, 55 min ಎನ್ನುವ ಶೀರ್ಷಿಕೆಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ಪ್ರಮೋಟ್ ಮಾಡುತ್ತಿದ್ದ ಖಾತೆಗಳ ವಿರುದ್ಧ ಕಠಿಣ ಕ್ರಮ ಆರಂಭವಾಗಿದೆ.
ಸೋಶಿಯಲ್ ಮೀಡಿಯಾದ ದುರುಪಯೋಗ ಹೆಚ್ಚಳ
“ಬೆಳೆಯುವ ಸಿರಿ ಮೊಳಕೆಯಲ್ಲೇ” ಎಂಬ ಮಾತಿಗೆ ವಿರುದ್ಧವಾಗಿ, ಓದುತ್ತಿರುವ ಕಿರಿಯ ವಯಸ್ಸಿನ ಮಕ್ಕಳೇ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ದಾರಿಗೆ ಹೋಗುತ್ತಿರುವುದು ಆತಂಕ ತಂದಿದೆ.
ಮೀಸೆ ಚಿಗುರಿರದ ವಯಸ್ಸಿನಲ್ಲೇ ಕೆಲವರು ಅಶ್ಲೀಲ ವಿಡಿಯೋಗಳ ಸ್ಕ್ರೀನ್ಶಾಟ್ಗಳನ್ನು ಪೋಸ್ಟ್ ಮಾಡಿ,
“ಫುಲ್ ವಿಡಿಯೋ ಬೇಕಿದ್ರೆ ಕಾಮೆಂಟ್ / ಡಿಎಂ ಮಾಡಿ”
ಎಂದು ಪ್ರಚಾರ ಮಾಡುತ್ತಿರುವುದು ಗಂಭೀರ ಸಮಸ್ಯೆಯಾಗಿದೆ.
“ವಿಡಿಯೋ ಬೇಕಿದ್ರೆ DM” – FIRಗೆ ಕಾರಣ
ಸೋಶಿಯಲ್ ಮೀಡಿಯಾವನ್ನು 18+ ಮಾತ್ರವಲ್ಲ, ಪ್ರಾಥಮಿಕ ಶಾಲಾ ಮಕ್ಕಳು ಕೂಡ ಬಳಸುತ್ತಿರುವ ಸಂದರ್ಭದಲ್ಲಿ, ಇಂತಹ ಪೋಸ್ಟ್ಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಕುತೂಹಲದಿಂದ ಲಿಂಕ್ ಕ್ಲಿಕ್ ಮಾಡಿದರೆ ನೇರವಾಗಿ ಅಶ್ಲೀಲ ವೆಬ್ಸೈಟ್ಗೆ ರೀಡೈರೆಕ್ಟ್ ,ಮಕ್ಕಳು ಹಾಗೂ ಯುವಕರು ತಪ್ಪು ದಾರಿಗೆ ಸೆಳೆಯಲ್ಪಡುವ ಅಪಾಯ ಈ ಹಿನ್ನೆಲೆ ಖಾಸಗಿ ದೂರಿನ ಆಧಾರದ ಮೇಲೆ ಸೆಂಟ್ರಲ್ ಸೆನ್ ಠಾಣೆಯಲ್ಲಿ FIR ದಾಖಲಾಗಿದೆ.
ಆರೋಪಿಗಳ ವಿರುದ್ಧದ ಆರೋಪಗಳು
- ಅಶ್ಲೀಲ ವಿಡಿಯೋಗಳ ಸ್ಕ್ರೀನ್ಶಾಟ್ಗಳನ್ನು ಖಾತೆಯಲ್ಲಿ ಪೋಸ್ಟ್
- “ಕಮೆಂಟ್ / ಡಿಎಂ ಮಾಡಿ” ಎಂದು ಆಮಿಷ
- “Link in Bio” ಮೂಲಕ ಅಶ್ಲೀಲ ವೆಬ್ಸೈಟ್ಗೆ ಸಂಪರ್ಕ
- ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ನಲ್ಲಿ ನಿರಂತರ ಪ್ರಚಾರ
- ಫಾಲೋವರ್ಸ್ ಹೆಚ್ಚಿಸಿಕೊಳ್ಳಲು 19min, 40min, 55min ಎಂಬ ಶೀರ್ಷಿಕೆ ಬಳಕೆ
28 ಖಾತೆಗಳ ಮೇಲೆ FIR – ತನಿಖೆ ಆರಂಭ
ಈ ರೀತಿಯ ಅಶ್ಲೀಲ ಕಂಟೆಂಟ್ ಪ್ರಚಾರದಿಂದ ಸಮಾಜಕ್ಕೆ ಆಗುವ ದುಷ್ಪರಿಣಾಮಗಳನ್ನು ಗಮನಿಸಿ,
ಒಟ್ಟು 28 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ FIR ದಾಖಲಾಗಿದೆ . ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ .




