ತೆರೆಮರೆಯಲ್ಲಿ K.N Rajanna – ಡಿಕೆ ಶಿವಕುಮಾರ್ ಸಂಧಾನ

ತುಮಕೂರು ಪಾಲಿಗೆ ಮತ್ತೊಂದು ಸಚಿವ ಸ್ಥಾನ ಸಿಗುತ್ತಾ ಅನ್ನೋ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಗರಿಗೆದರಿದೆ. ಅದರಲ್ಲೂ ಅಚ್ಚರಿ ಎನ್ನುವಂತೆ K.N Rajanna ಪುತ್ರ ಎಂಎಲ್ಸಿ ಆರ್.ರಾಜೇಂದ್ರಗೆ ಸಿಎಂ ಡಿಕೆ ಶಿವಕುಮಾರ್ ಕ್ಯಾಬಿನೇಟ್ ನಲ್ಲಿ ಸಚಿವ ಸ್ಥಾನ ಸಿಗುತ್ತಾ ಅನ್ನೋ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ರಾಜೇಂದ್ರಗೆ ಒಲಿಯುತ್ತಾ ಸಚಿವ ಸ್ಥಾನ?
ಈ ಚರ್ಚೆಗೆ ಕಾರಣ ಡಿಕೆ ಶಿವಕುಮಾರ್ ಹಾಗೂ ಎಂಎಲ್ಸಿ ರಾಜೇಂದ್ರ ಅವರ ದೆಹಲಿಯ ಭೇಟಿ. ಹೌದು, ಕಳೆದು ಮೂರು ದಿನಗಳಿಂದ ದೆಹಲಿಯಲ್ಲಿರುವ ಎಎಂಲ್ಸಿ ರಾಜೇಂದ್ರ, ನಿನ್ನೆ ಸಿಎಂ ಡಿಕೆ ಶಿವಕುಮಾರ್ ರನ್ನ ಭೇಟಿಯಾಗಿ ಕೆಲಹೊತ್ತು ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜೇಂದ್ರಗೆ ಈ ಬಾರಿ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಇದನ್ನು ಓದಿ : ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದ K.N. Rajanna..!!

ರಾಜಣ್ಣ – ಡಿಕೆ ಶಿವಕುಮಾರ್ ಸಂಧಾನ
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಡಿಕೆ ಶಿವಕುಮಾರ್ ಮೇಲೆ ಕೆ.ಎನ್.ರಾಜಣ್ಣ ತಮ್ಮ ಅಸಮಾಧಾನವನ್ನ ಮುಂದಿವರೆಸಿಕೊಂಡೇ ಬಂದಿದ್ದರು. ಹಲವು ಬಾರಿ ಡಿಕೆ ಶಿವಕುಮಾರ್ ವಿರುದ್ದ ಬಹಿರಂಗವಾಗಿಯೇ ರಾಜಣ್ಣ ವಾಗ್ದಾಳಿ ಕೂಡ ನಡೆಸಿದ್ದರು. ಡಿಕೆ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂದು ರಾಜಣ್ಣ ಇತ್ತೀಚೆಗಷ್ಟೆ ಟಾಂಗ್ ನೀಡಿದ್ದರು. ಆದ್ರೆ ಇದೀಗ ಪುತ್ರ ರಾಜೇಂದ್ರಗೆ ಸಚಿವ ಸ್ಥಾನ ಸಿಗಬೇಕು ಅನ್ನೋ ನಿಟ್ಟಿನಲ್ಲಿ ರಾಜಣ್ಣ ಅವರು ಡಿಕೆ ಶಿವಕುಮಾರ್ ಮೇಲಿನ ಮುನಿಸು ಮರೆತು ಸಂಧಾನದ ನಡೆಗೆ ಮುಂದಾಗಿದ್ದಾರೆ ಅನ್ನೋದರ ಬಗ್ಗೆ ಚರ್ಚೆಯಾಗ್ತಿದೆ.

ಪುತ್ರನಿಗೆ ಮಂತ್ರಿ ಸ್ಥಾನ ನೀಡುವಂತೆಯೂ K.N Rajanna ಡಿಮ್ಯಾಂಡ್
ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿರೋ ಎಂಎಲ್ಸಿ ರಾಜೇಂದ್ರ,ಕೆ.ಎನ್.ರಾಜಣ್ಣ ಹಾಗೂ ಡಿಕೆ ಶಿವಕುಮಾರ್ ನಡುವೆ ಸೇತುವೆಯಾಗಿ ಸಂಧಾನದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ವಾಲ್ಮೀಕಿ ಸಮುದಾಯದ ಕೋಟಾದಲ್ಲಿ ಕೆ.ಎನ್.ರಾಜಣ್ಣ ಅವರು ತಮ್ಮ ಪುತ್ರನಿಗೆ ಮಂತ್ರಿ ಸ್ಥಾನ ನೀಡುವಂತೆಯೂ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿರೋ ಕೆ.ಎನ್.ರಾಜಣ್ಣ ಅವರ ಪುತ್ರ ಎಂಎಲ್ಸಿ ರಾಜೇಂದ್ರಗೆ ಸಚಿವ ಸ್ಥಾನ ಸಿಕ್ಕಲ್ಲಿ ತುಮಕೂರು ಜಿಲ್ಲೆಯ ಕಾಂಗ್ರೆಸ್, ಮತ್ತಷ್ಟು ಬಲಿಶ್ಠವಾಗುವಲ್ಲಿ ಯಾವುದೇ ಅನುಮಾನವಿಲ್ಲಾ ಎನ್ನಬಹುದಾಗಿದೆ.

ಇದನ್ನು ನೋಡಿ : PARAMಗೆ CM ಸ್ಥಾನ ಕೈತಪ್ಪಿದ್ದರ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ KUMARASWAMY

![60g4cogpmdn2aq2dyathindra-siddaramaiah[1]](https://prajashakthitv.com/wp-content/uploads/2026/06/60g4cogpmdn2aq2dyathindra-siddaramaiah1.avif)


