Gold Rate ಗ್ರಾಮ್ಗೆ 85 ರೂ ಕಡಿಮೆ – ಬೆಳ್ಳಿ ಬದಲಾವಣೆ ಇಲ್ಲ

ಕಳೆದ ಎರಡು-ಮೂರು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಕಡಿಮೆಯಾಗಿದೆ. ಸೋಮವಾರ 24 ಕ್ಯಾರಟ್ ಹಾಗೂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 850 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ದರ ಮಾತ್ರ ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿಯಲ್ಲಿದೆ.
ಇಂದಿನ ಚಿನ್ನದ ದರ
- 24 ಕ್ಯಾರಟ್ ಚಿನ್ನ (10 ಗ್ರಾಂ): ₹1,43,020
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,31,100
- ಬೆಳ್ಳಿ (100 ಗ್ರಾಂ): ₹24,000
ಬೆಂಗಳೂರಿನಲ್ಲಿಯೂ ಇದೇ ದರ ಮುಂದುವರಿದಿದೆ. 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ 14,302 ರೂಪಾಯಿ, 22 ಕ್ಯಾರಟ್ ಚಿನ್ನದ ಒಂದು ಗ್ರಾಂ 13,110 ರೂಪಾಯಿ ಹಾಗೂ ಬೆಳ್ಳಿ ಒಂದು ಗ್ರಾಂಗೆ 240 ರೂಪಾಯಿ ಇದೆ.

ಬೆಂಗಳೂರಿನ ಚಿನ್ನದ ದರ
- 24 ಕ್ಯಾರಟ್ – ₹14,302 (1 ಗ್ರಾಂ)
- 22 ಕ್ಯಾರಟ್ – ₹13,110 (1 ಗ್ರಾಂ)
- ಬೆಳ್ಳಿ – ₹240 (1 ಗ್ರಾಂ)
ದೇಶದ ಪ್ರಮುಖ ನಗರಗಳ ಪೈಕಿ ಚೆನ್ನೈನಲ್ಲಿ 22 ಕ್ಯಾರಟ್ Gold Rate ಅತಿ ಹೆಚ್ಚು, ಒಂದು ಗ್ರಾಂಗೆ 13,330 ರೂಪಾಯಿ ಇದೆ. ದೆಹಲಿ, ಜೈಪುರ ಹಾಗೂ ಲಕ್ನೋದಲ್ಲಿ 13,125 ರೂಪಾಯಿ ಇದ್ದರೆ, ಬೆಂಗಳೂರು, ಮುಂಬೈ, ಕೋಲ್ಕತ್ತಾ, ಕೇರಳ ಮತ್ತು ಭುವನೇಶ್ವರದಲ್ಲಿ 13,110 ರೂಪಾಯಿ ಇದೆ.
ಇದನ್ನು ಓದಿ : ಚಿನ್ನದ ದರದಲ್ಲಿಂದು ಯಥಾಸ್ಥಿತಿ – ಎಷ್ಟಿದೆ ಬೆಲೆ?

ಪ್ರಮುಖ ನಗರಗಳ ಚಿನ್ನದ ದರ
- ಚೆನ್ನೈ – ₹13,330
- ದೆಹಲಿ – ₹13,125
- ಬೆಂಗಳೂರು – ₹13,110
- ಮುಂಬೈ – ₹13,110
- ಕೋಲ್ಕತ್ತಾ – ₹13,110
ವಿದೇಶಗಳಲ್ಲಿಯೂ ಚಿನ್ನದ ಬೆಲೆ ತುಸು ಇಳಿಕೆಯಾಗಿದೆ. ದುಬೈನಲ್ಲಿ ಒಂದು ಗ್ರಾಂ 24 ಕ್ಯಾರಟ್ ಚಿನ್ನ ಸುಮಾರು 12,655 ರೂಪಾಯಿಗೆ ದೊರೆಯುತ್ತಿದ್ದರೆ, ಅಮೆರಿಕದಲ್ಲಿ 12,734 ರೂಪಾಯಿ, ಸಿಂಗಾಪುರದಲ್ಲಿ 13,118 ರೂಪಾಯಿ ಹಾಗೂ ಮಲೇಷ್ಯಾದಲ್ಲಿ 12,673 ರೂಪಾಯಿ ಇದೆ.

ವಿದೇಶಗಳ Gold Rate
- ದುಬೈ – ₹12,655
- ಅಮೆರಿಕ – ₹12,734
- ಸಿಂಗಾಪುರ – ₹13,118
- ಮಲೇಷ್ಯಾ – ₹12,673
ಸತತ ಏರಿಕೆಯಿಂದ ಕಂಗಾಲಾಗಿದ್ದ ಚಿನ್ನ ಖರೀದಿದಾರರಿಗೆ ಇಂದು ಕೊಂಚ ನೆಮ್ಮದಿ ಸಿಕ್ಕಿದೆ. ಆದರೆ ಆಭರಣ ಖರೀದಿಸುವ ವೇಳೆ ಚಿನ್ನದ ದರದ ಜೊತೆಗೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಇತರೆ ಶುಲ್ಕಗಳು ಕೂಡ ಅನ್ವಯವಾಗುವುದರಿಂದ ಖರೀದಿಗೆ ಮುನ್ನ ದರವನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

ಇದನ್ನು ನೋಡಿ : ಶಾಸಕ PRADEEP ESHWAR ಹೆಸರು ಹೇಳ್ತಿದ್ದಂತೆ ಕೈ ಮುಗಿದು ನಮಸ್ಕಾರ ಎಂದ HDK




