Bengaluru ದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ 2026 ಅಭಿಯಾನದ ಮೊದಲ ದಿನವೇ 11.06 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ.

Bengaluru ದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ 2026 ಅಭಿಯಾನದ ಮೊದಲ ದಿನವೇ ಐದು ವರ್ಷದೊಳಗಿನ 11,06,535 ಮಕ್ಕಳಿಗೆ ಪೋಲಿಯೋ ಹನಿಗಳನ್ನು ಯಶಸ್ವಿಯಾಗಿ ನೀಡಲಾಗಿದೆ. ಈ ಮೂಲಕ ಮೊದಲ ದಿನದಲ್ಲೇ ಶೇ.96.4ರಷ್ಟು ಗುರಿ ಸಾಧನೆ ಮಾಡಲಾಗಿದೆ.
ಜುಲೈ 1ರವರೆಗೆ ಅಭಿಯಾನ ಮುಂದುವರಿಕೆ
ಜೂನ್ 28ರಿಂದ ಜುಲೈ 1ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ 11,47,872 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲ ದಿನ ಯಾವುದೇ ಮನೆ-ಮನೆ ಭೇಟಿ ನಡೆಸದೇ, ಕೇವಲ ಲಸಿಕಾ ಕೇಂದ್ರಗಳ ಮೂಲಕವೇ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

ವಲಯವಾರು ಲಸಿಕಾ ಅಂಕಿಅಂಶಗಳು
ಬೆಂಗಳೂರು ವಿವಿಧ ವಲಯಗಳಲ್ಲಿ ಲಸಿಕೆ ಪಡೆದ ಮಕ್ಕಳ ಸಂಖ್ಯೆ ಹೀಗಿದೆ:
- ಕೇಂದ್ರ ವಲಯ: 1,59,106 ಮಕ್ಕಳು
- ಪೂರ್ವ ವಲಯ: 1,73,781 ಮಕ್ಕಳು
- ಪಶ್ಚಿಮ ವಲಯ: 2,81,369 ಮಕ್ಕಳು
- ಉತ್ತರ ವಲಯ: 2,78,880 ಮಕ್ಕಳು
- ದಕ್ಷಿಣ ವಲಯ: 2,13,399 ಮಕ್ಕಳು
MUST READ : ರಾಜ್ಯದ ವಿದ್ಯಾರ್ಥಿಗಳಿಗೆ Bus Pass ಶುಲ್ಕ ಮರುಪಾವತಿ – ಇಲ್ಲಿದೆ ಸಂಪೂರ್ಣ ಮಾಹಿತಿ

ಯಾವೆಲ್ಲ ಕೇಂದ್ರಗಳಲ್ಲಿ ಲಸಿಕೆ ನೀಡಲಾಯಿತು?
ಒಟ್ಟು 10,27,347 ಮಕ್ಕಳು ವಿವಿಧ ವಾರ್ಡ್ಗಳಲ್ಲಿನ ಪೋಲಿಯೋ ಬೂತ್ಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (UPHCs), ನಮ್ಮ ಕ್ಲಿನಿಕ್ಗಳು, ಹೆರಿಗೆ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಪೋಲಿಯೋ ಹನಿಗಳನ್ನು ಪಡೆದಿದ್ದಾರೆ.
ಇನ್ನೂ 73,987 ಮಕ್ಕಳಿಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಮೇಳಗಳು ನಡೆದ ಸ್ಥಳಗಳಂತಹ ಸಾರಿಗೆ ಮತ್ತು ಸಾರ್ವಜನಿಕ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ.

ಮುಂದಿನ ಮೂರು ದಿನ ಮನೆ-ಮನೆ ಭೇಟಿ
ಮುಂದಿನ ಮೂರು ದಿನಗಳ ಕಾಲ ಆರೋಗ್ಯ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ, ಇನ್ನೂ ಪೋಲಿಯೋ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಿ ಅವರಿಗೆ ಪೋಲಿಯೋ ಹನಿಗಳನ್ನು ನೀಡಲಿದ್ದಾರೆ.
MUST WATCH : DUDHAKAR ON PRADEEP ESHWAR | ವೇದಿಕೆಲಿ ಬೆಕ್ಕಿನಂತೆ ಇದ್ದು ಹೊರಗಡೆ ಬಂದು ಪೌರುಷ ತೋರಿಸಿದ್ರೆ ಜನ ಸುಮ್ನಿರ್ತಾರಾ.




