ಮುಖ್ಯಮಂತ್ರಿ DK Shivakumar ಬೆಂಗಳೂರಿನ ‘ಕೃಷ್ಣಾ’ ಗೃಹಕಚೇರಿಯಲ್ಲಿ ಅಜ್ಜಯ್ಯನ ಫೋಟೋ ಇರಿಸಿ ವಿಶೇಷ ಪೂಜೆ ಸಲ್ಲಿಸಿ ಅಧಿಕೃತ ಕಾರ್ಯಾರಂಭ ಮಾಡಿದರು.

ರಾಜ್ಯದ ಮುಖ್ಯಮಂತ್ರಿ DK Shivakumar ಅವರು ಬೆಂಗಳೂರಿನ ಕುಮಾರಪಾರ್ಕ್ನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಗೃಹಕಚೇರಿ ‘ಕೃಷ್ಣಾ’ದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಅಧಿಕೃತ ಕಾರ್ಯಾರಂಭ ಮಾಡಿದರು. ಈ ವೇಳೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜೆ ನೆರವೇರಿಸಿ ಗಮನ ಸೆಳೆದರು.
ಅಜ್ಜಯ್ಯನ ಫೋಟೋಗೆ ವಿಶೇಷ ಸ್ಥಾನ
ಪ್ರಮಾಣವಚನ ಸ್ವೀಕಾರದ ವೇಳೆ ಅಜ್ಜಯ್ಯನ ಹೆಸರನ್ನು ಉಲ್ಲೇಖಿಸಿದ್ದ ಸಿಎಂ ಡಿ.ಕೆ. ಶಿವಕುಮಾರ್, ಇದೀಗ ತಮ್ಮ ಗೃಹಕಚೇರಿಯಲ್ಲೂ ಅಜ್ಜಯ್ಯನ ಫೋಟೋ ಇರಿಸಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಕಚೇರಿಯಲ್ಲಿಯೂ ಅಜ್ಜಯ್ಯನ ಫೋಟೋ ಅಳವಡಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ.
MUST READ : ಗೋಲ್ಡ್ ಪ್ರಿಯರಿಗೆ ಗುಡ್ನ್ಯೂಸ್ – ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಬುಧವಾರ ಬೆಳಗ್ಗೆ ಗೃಹಕಚೇರಿಗೆ ಆಗಮಿಸಿದ ಮುಖ್ಯಮಂತ್ರಿಗಳಿಗೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತ್ಮೀಯ ಸ್ವಾಗತ ಕೋರಿದರು. ಬಳಿಕ ಪೂಜೆ ನೆರವೇರಿಸಿದ ಅವರು, ಅಧಿಕಾರಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಗೃಹಕಚೇರಿಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡರು.
ರಾಜಕೀಯ ವಲಯದಲ್ಲಿ ಚರ್ಚೆ
ಸಿಎಂ ಡಿ.ಕೆ. ಶಿವಕುಮಾರ್ ಅವರ ಈ ನಡೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ನಂಬಿಕೆ ಹಾಗೂ ವೈಯಕ್ತಿಕ ಭಕ್ತಿಗೆ ಮಹತ್ವ ನೀಡಿರುವ ಈ ಬೆಳವಣಿಗೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
MUST WATCH : ಹೆಣ ಹೊರೋಕೆ 20 ಜನರು ಬೇಕು – ಮಳೆ ಬಂದ್ರೆ ರಸ್ತೆ ಅಲ್ಲ… ಕೆಸರು ಗದ್ದೆ | NEWS |




