Dina Bhavishya : 2026 ಜೂನ್ 26ರ ಶುಕ್ರವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..?

ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಶುಭ ದಿನವಾಗಿದ್ದು, ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲಿದ್ದೀರಿ.
ಮನೆಯಲ್ಲಿನ ಸಂತಸದ ವಾತಾವರಣ ಮನಸ್ಸಿಗೆ ನೆಮ್ಮದಿ ನೀಡಲಿದೆ. ಬಹುಕಾಲದ ಆಸೆಯೊಂದು ಈಡೇರುವ ಸೂಚನೆಗಳಿವೆ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿದ್ದು, ಉದ್ಯೋಗಸ್ಥರು ಕೆಲಸದಲ್ಲಿ ಸಣ್ಣ ತಪ್ಪುಗಳನ್ನೂ ತಪ್ಪಿಸಲು ಎಚ್ಚರಿಕೆ ವಹಿಸುವುದು ಉತ್ತಮ.
ವೃಷಭ ರಾಶಿ
ಇಂದು ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಅನುಭವ ಹಾಗೂ ಪ್ರತಿಭೆ ಜನರ ಮೆಚ್ಚುಗೆಗೆ ಪಾತ್ರವಾಗಲಿದೆ. ಸಣ್ಣ ಪ್ರಯಾಣದಿಂದ ಮುಂದಿನ ದಿನಗಳಲ್ಲಿ ಲಾಭವಾಗಬಹುದು.
ಅದೃಷ್ಟವೂ ನಿಮ್ಮ ಪರವಾಗಿದ್ದು, ಯಾವುದೇ ವಿಷಯದಲ್ಲಿ ಗಾಳಿಸುದ್ದಿಯನ್ನು ನಂಬದೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಮಿಥುನ ರಾಶಿ
ಇಂದು ಆದಾಯ-ಖರ್ಚಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ವಿವೇಕಪೂರ್ಣ ನಿರ್ಧಾರಗಳಿಂದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಪ್ರಯಾಣದಿಂದ ಉಪಯುಕ್ತ ಅನುಭವ ಸಿಗುವ ಸಾಧ್ಯತೆ ಇದೆ.
ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕೆಲಸದಲ್ಲಿ ಆತುರದ ನಿರ್ಧಾರಗಳನ್ನು ತಪ್ಪಿಸಿ. ಹಿಂದಿನ ಅನುಭವಗಳಿಂದ ಪಾಠ ಕಲಿದು ಮುಂದುವರಿದರೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ.
ಕಟಕ ರಾಶಿ
ಇಂದು ಕೆಲಸದ ಕ್ಷೇತ್ರದಲ್ಲಿ ಯಶಸ್ಸು ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಹಣಕಾಸಿನ ವಿಷಯಗಳಲ್ಲಿ ಪ್ರಾಮಾಣಿಕತೆ ನಿಮಗೆ ಲಾಭ ತರುತ್ತದೆ.
ಕೆಲ ಕೆಲಸಗಳಲ್ಲಿ ಸಣ್ಣ ಅಡಚಣೆಗಳಿದ್ದರೂ ತಾಳ್ಮೆಯಿಂದ ಮುಂದುವರಿದರೆ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳಿಗೆ, ವಿಶೇಷವಾಗಿ ವಿದೇಶಿ ಶಿಕ್ಷಣ ಬಯಸುವವರಿಗೆ, ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ.
ಸಿಂಹ ರಾಶಿ
ಇಂದು ತಾಳ್ಮೆ ಮತ್ತು ಸಂಯಮದಿಂದ ನಡೆದುಕೊಳ್ಳುವುದು ಮುಖ್ಯ. ಕುಟುಂಬದಲ್ಲಿ ಸಣ್ಣ ಏರಿಳಿತಗಳಿದ್ದರೂ ಅವು ತಾತ್ಕಾಲಿಕವಾಗಿರುತ್ತವೆ. ಯಾವುದೇ ನಿರ್ಧಾರವನ್ನು ಆತುರಪಡದೆ ಯೋಚಿಸಿ ತೆಗೆದುಕೊಳ್ಳಿ.
ಹಣಕಾಸಿನ ವಿಷಯಗಳಲ್ಲಿ ಎಚ್ಚರಿಕೆ ವಹಿಸಿ. ಆಧ್ಯಾತ್ಮಿಕ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡಲಿದ್ದು, ಹಿಂದಿನ ಅನುಭವಗಳು ಉತ್ತಮ ನಿರ್ಧಾರಕ್ಕೆ ನೆರವಾಗಲಿವೆ.
ಕನ್ಯಾರಾಶಿ
ಇಂದು ಅಪಾಯಕಾರಿಯಾದ ನಿರ್ಧಾರಗಳಿಂದ ದೂರವಿರುವುದು ಉತ್ತಮ. ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದ್ದರೂ, ಕೆಲ ಕಾರ್ಯಗಳಲ್ಲಿ ಸಣ್ಣ ಅಡಚಣೆಗಳು ಎದುರಾಗಬಹುದು. ಅಪರಿಚಿತರನ್ನು ಸುಲಭವಾಗಿ ನಂಬಬೇಡಿ.
ಕುಟುಂಬದಲ್ಲಿ ಶುಭ ಸಮಾರಂಭದ ಚರ್ಚೆಗಳು ಸಂತಸದ ವಾತಾವರಣ ಮೂಡಿಸಲಿವೆ. ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಗೌರವ ಮತ್ತು ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ.
ತುಲಾ ರಾಶಿ
ಇಂದು ಯೋಜಿತವಾಗಿ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗಲಿದೆ. ಆಸ್ತಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಲಾಭದ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಾಗಿ ಪ್ರಮುಖ ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳುವಿರಿ.
ವಾಹನಕ್ಕೆ ಸಂಬಂಧಿಸಿದ ಸಣ್ಣ ವೆಚ್ಚಗಳು ಎದುರಾಗಬಹುದಾದ್ದರಿಂದ ಹಣಕಾಸಿನಲ್ಲಿ ಸಮತೋಲನ ಕಾಪಾಡಿಕೊಳ್ಳಿ. ಅತ್ತೆ-ಮಾವಂದಿರ ಕಡೆಯಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಇಂದು ನಿಮ್ಮ ಪ್ರಗತಿಗೆ ಕೆಲವರು ಅಡ್ಡಿಯಾಗಲು ಪ್ರಯತ್ನಿಸಿದರೂ, ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆಯಿಂದ ಯಶಸ್ಸು ಸಾಧಿಸುವಿರಿ. ಬಹುಕಾಲದ ಸಮಸ್ಯೆಯೊಂದು ಪರಿಹಾರವಾಗುವ ಸಾಧ್ಯತೆ ಇದೆ.
ಮಕ್ಕಳ ಭವಿಷ್ಯದ ಚಿಂತೆ ಕಡಿಮೆಯಾಗಲಿದೆ. ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಧನು ರಾಶಿ
ಇಂದು ನಿಮ್ಮ ಸೌಮ್ಯ ಮಾತು ಮತ್ತು ವಿನಮ್ರತೆ ಯಶಸ್ಸಿಗೆ ಕಾರಣವಾಗಲಿದೆ. ಉದ್ಯೋಗ ಹಾಗೂ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ, ಹಣಕಾಸಿನಲ್ಲಿ ಎಚ್ಚರಿಕೆ ವಹಿಸಿ.
ಕುಟುಂಬದಲ್ಲಿ ಸಂತೋಷ ಮತ್ತು ಒಗ್ಗಟ್ಟು ಹೆಚ್ಚಾಗಲಿದೆ. ಹೊಸ ಪಾಲುದಾರಿಕೆ ಅಥವಾ ಆಸ್ತಿ ಖರೀದಿಸುವ ಮೊದಲು ಸಂಪೂರ್ಣ ಮಾಹಿತಿ ಪಡೆದು ಮುಂದುವರಿಯುವುದು ಉತ್ತಮ.
ಮಕರ ರಾಶಿ
ಇಂದು ವ್ಯವಹಾರದಲ್ಲಿ ಉತ್ತಮ ಅವಕಾಶಗಳು ದೊರೆಯಲಿದ್ದು, ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ಪ್ರಮುಖ ಒಪ್ಪಂದಗಳಲ್ಲಿ ತಾಳ್ಮೆ ವಹಿಸುವುದು ಅಗತ್ಯ. ಸಮಯ ಮತ್ತು ಹಣವನ್ನು ಸಮರ್ಪಕವಾಗಿ ನಿರ್ವಹಿಸಿ.
ಎಲ್ಲರನ್ನೂ ಸುಲಭವಾಗಿ ನಂಬದೇ ಎಚ್ಚರಿಕೆಯಿಂದ ನಡೆದುಕೊಳ್ಳಿ. ಕುಟುಂಬದಿಂದ ಸ್ವಲ್ಪ ಬೇಸರದ ಸುದ್ದಿ ಕೇಳಿಬರಬಹುದಾದರೂ, ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದರೆ ಎಲ್ಲವೂ ಸುಗಮವಾಗಲಿದೆ.
ಕುಂಭ ರಾಶಿ
ಇಂದು ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ದಿನವನ್ನು ಆರಂಭಿಸುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ಸಿಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದೊಂದಿಗೆ, ವಿಶೇಷವಾಗಿ ಮಕ್ಕಳೊಂದಿಗೆ ಸಂತಸದ ಸಮಯ ಕಳೆಯುವಿರಿ.
ಆನ್ಲೈನ್ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ದೊರೆಯಲಿದ್ದು, ಸ್ಥಗಿತಗೊಂಡಿದ್ದ ವ್ಯವಹಾರ ಒಪ್ಪಂದ ಪೂರ್ಣಗೊಂಡು ಆರ್ಥಿಕ ಸ್ಥಿತಿ ಬಲವಾಗುವ ಸಾಧ್ಯತೆ ಇದೆ.
ಮೀನ ರಾಶಿ
ಇಂದು ಸಂತೋಷದ ಸುದ್ದಿ ಮತ್ತು ಶುಭ ಬೆಳವಣಿಗೆಗಳು ಮನಸ್ಸಿಗೆ ನೆಮ್ಮದಿ ತರಲಿವೆ. ಕುಟುಂಬದ ಹಿರಿಯರೊಂದಿಗೆ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾಗಬಹುದಾದ್ದರಿಂದ ಮಾತಿನಲ್ಲಿ ತಾಳ್ಮೆ ವಹಿಸಿ.
ವೈವಾಹಿಕ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವ ಗುಣ ಮುಖ್ಯವಾಗಿರುತ್ತದೆ. ತಪ್ಪುಗಳಿದ್ದರೆ ಒಪ್ಪಿಕೊಂಡು ಮುಂದುವರಿದರೆ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ. ಪ್ರೀತಿ ಮತ್ತು ಶಾಂತಿಯಿಂದ ನಡೆದುಕೊಂಡರೆ ದಿನ ಯಶಸ್ವಿಯಾಗಿ ಸಾಗಲಿದೆ.




