Devil Trailer : ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿದ್ದಾರೆ. ಅವರು ಇಲ್ಲದೆ ಅಭಿಮಾನಿಗಳು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿದೆ.

Devil Trailer : ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಇದಕ್ಕೂ ಒಂದು ವಾರ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಕಂಡಿದೆ. ‘ಡೆವಿಲ್’ ಸಿನಿಮಾ ಯಾವ ರೀತಿ ಇರಲಿದೆ ಎಂಬುದರ ಝಲಕ್ ಸಿಕ್ಕಿದೆ.
ಹೊಸ ಅವತಾರದಲ್ಲಿ ದರ್ಶನ್ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸಿನಿಮಾ ಬಗ್ಗೆ ಇರುವ ನಿರೀಕ್ಷೆಯನ್ನು ಟ್ರೇಲರ್ ಹೆಚ್ಚಿಸಿದೆ.
ದರ್ಶನ್ ಅವರು ಟ್ರೇಲರ್ನಲ್ಲಿ ಹಲವು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ಗಮನ ಸೆಳೆಯುವಂತಿದೆ. ‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದೀನಿ ಚಿನ್ನ’ ಎಂದು ದರ್ಶನ್ ಡೈಲಾಗ್ ಹೇಳುವಾಗ ರಿಲೀಸ್ ದಿನಾಂಕ ತೋರಿಸಲಾಗುತ್ತದೆ.
ವಿನಯ್ ಗೌಡ, ಅಚ್ಯುತ್ ಕುಮಾರ್ ಹಾಗೂ ಗಿಲ್ಲಿ ನಟ ಮೊದಲಾದವರನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
‘ಡೆವಿಲ್’ ನಿರ್ದೇಶಕ ಮಿಲನ ಪ್ರಕಾಶ್ ಚಿತ್ರರಂಗದಲ್ಲಿ ಕಳೆದ 22 ವರ್ಷಗಳಿಂದ ಇದ್ದಾರೆ. ‘ಖುಷಿ’ ಅವರು ನಿರ್ದೇಶನ ಮಾಡಿದ ಮೊದಲ ಚಿತ್ರ. ಈ ಸಿನಿಮಾ 2003ರಲ್ಲಿ ಬಂತು. 2007ರಲ್ಲಿ ಬಂದ ‘ಮಿಲನ’ ಸೂಪರ್ ಹಿಟ್ ಆಯಿತು. ಪುನೀತ್ ರಾಜ್ಕುಮಾರ್ ಹಾಗೂ ಪಾರ್ವತಿ ಮೆನನ್ ಈ ಸಿನಿಮಾದಲ್ಲಿ ನಟಿಸಿದ್ದರು. ದರ್ಶನ್ ಜೊತೆ ಅವರು ಈ ಮೊದಲು ‘ತಾರಕ್’ ಅಲ್ಲಿ ಕೆಲಸ ಮಾಡಿದ್ದರು. ಈಗ ಇಬ್ಬರೂ ‘ಡೆವಿಲ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
MUST READ : ʻಗತವೈಭವʼದ ವೈಭವವನ್ನ ಮತ್ತಷ್ಟು ಹೆಚ್ಚಿಸಿದ ಸಿಂಪಲ್ ಸುನಿ
ಈ ಚಿತ್ರದ ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ಜೊತೆಗೆ ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ, ಶೋಭರಾಜ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನವನ್ನು ಅಜನೀಶ್ ಲೋಕನಾಥ್ ಕೈಗೊಂಡಿದ್ದಾರೆ. ಚಿತ್ರವನ್ನು ಪ್ರಕಾಶ್ ಮತ್ತು ಜಯಮ್ಮ ನಿರ್ಮಿಸಿದ್ದಾರೆ.
ದರ್ಶನ್ ಅಭಿಮಾನಿಗಳು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿದೆ.
ಇದನ್ನು ನೋಡಿ : ಕತ್ತು ಸೀಳಿ ಮಹಿಳೆಯ ಬರ್ಬರ ಹ* ಕೇಸ್ಗೆ BIG TWIST - ಆರೋಪಿ ಬಂಧನವೇ ರೋಚಕ | GUBBI MUR*ER CASE




