Bengaluru News : ಕೇರಳದಿಂದ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಎಂಬಿಎ ವಿದ್ಯಾರ್ಥಿ, ಪೋಷಕರ ಕನಸು ನೆರವೇರಿಸಲು ಚೆನ್ನಾಗಿ ಓದುತ್ತಿದ್ದನು. ಆದರೆ ಒಂದು ವಿಡಿಯೋ ಕಾಲ್ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿನ ಮೊದಲು ಬರೆದ ಡೆತ್ ನೋಟ್ನಲ್ಲಿ ವಿವರಗಳು ಪತ್ತೆಯಾಗಿವೆ.

Bengaluru News : ಬೆಂಗಳೂರು ಹೊರವಲಯದ ಹೆಸರುಘಟ್ಟ ರಸ್ತೆ, ಶಾಂತಿನಗರದಲ್ಲಿ ಖಾಸಗಿ ಕಾಲೇಜಿನ ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಜಗನ್ ಮೋಹನ್ (25) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೆರಳ ಮೂಲದ ಜಗನ್, ಕಾಲೇಜು ಸಮೀಪದ ಬಾಡಿಗೆಯ ರೂಂನಲ್ಲಿ ವಾಸಿಸುತ್ತಿದ್ದನು. ಅಲ್ಲಿ ಡೆತ್ ನೋಟ್ ಬರೆದು, ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮೂಲ ವಿವರಗಳ ಪ್ರಕಾರ, ವಿಡಿಯೋ ಕಾಲ್ ಬೆದರಿಕೆಗೆ ಹೆದರಿ ಈ ದುರಂತಕ್ಕೆ ಶರಣಾಗಿದ್ದಾನೆ.
ಇದನ್ನು ಓದಿ : 2 ಸರ್ಕಾರಿ ಬಸ್, ಜೀಪ್ ಮಧ್ಯೆ ಸರಣಿ ಅಪಘಾತ – 3 ಮಂದಿ ಸಾವು
ಡೆತ್ನೋಟ್ನಲ್ಲಿ 3 ಫೋನ್ ನಂಬರ್ ಉಲ್ಲೇಖ..
ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ನಲ್ಲಿ ಮೃತ ವಿದ್ಯಾರ್ಥಿ ಮೂರು ಫೋನ್ ನಂಬರ್ಗಳನ್ನು ಬರೆದಿದ್ದಾನೆ. ತನಿಖೆ ಪ್ರಕಾರ, ಫೇಕ್ ವಿಡಿಯೋ ಕಾಲ್ ಮೂಲಕ ಹಣ ಕಳೆದುಕೊಂಡಿರುವುದು ತಿಳಿದುಬಂದಿದ್ದು, ಆತ ₹25,000 ವರ್ಗಾವಣೆ ಮಾಡಿದ್ದಾನೆ. ಜೊತೆಗೆ ಬೆತ್ತಲೆ ಫೋಟೋ ಮತ್ತು ವೀಡಿಯೋಗಳನ್ನು ವೈರಲ್ ಮಾಡುತ್ತೇವೆ ಎಂದು ಬೆದರಿಕೆಯೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಸಾವಿನ ಹಿಂದೆ ಬೆತ್ತಲೆ ಜಗತ್ತು..
ಡೆತ್ ನೋಟ್ನಲ್ಲಿ ಉಲ್ಲೇಖಿತ ನಂಬರ್ಗಳ ಪರಿಶೀಲನೆಗೂಡಿ, ಜಗನ್ ಫೇಕ್ ವಿಡಿಯೋ ಕಾಲ್ ಮೂಲಕ ಬೆತ್ತಲೆ ಫೋಟೋಗಳ ಬೆದರಿಕೆಯ ಶಿಕಾರನಾಗಿದ್ದಾನೆ. ₹25,000 ಹಣ ವರ್ಗಾವಣೆ ಮಾಡಿಕೊಂಡಿದ್ದರೂ, ಮತ್ತಷ್ಟು ಹಣಕ್ಕೆ ಬೇಡಿಕೆ ಇರುತ್ತಿರೋ ಶಂಕೆಯಿಂದ ಹೆದರಿದ ಜಗನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ BNS 106 ಅಡಿ ದಾಖಲಾಗಿದೆ.
ಇದನ್ನು ನೋಡಿ : ರೈತರಿಗೆ SHAKTIMAN ಕಂಪನಿಯಿಂದ ಭರ್ಜರಿ GOOD NEWS – ರೈತರ ಕೆಲಸ ಮಾಡಲು ಬಂದಿದೆ ಹೊಸ ಯಂತ್ರ




