Hair Care : ಎಣ್ಣೆ, ಶಾಂಪೂ ಬಿಡಿ, ಇವುಗಳನ್ನ ತಿನ್ನಿ! ದಟ್ಟವಾದ ಕೂದಲು ನಿಮ್ಮದಾಗಿಸಿ ಕೊಳ್ಳಿ!

ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಲು, ತಲೆಯಲ್ಲಿ ಕೂದಲಿರುವುದು ಬಹಳ ಮುಖ್ಯ. ಆದರಲ್ಲೂ ಕೂದಲು ದಪ್ಪ, ಉದ್ದ ಮತ್ತು ಕಪ್ಪಾಗಿದ್ದರೆ ಯಾರಿಗಾದರೂ ಹೆಚ್ಚಿನ ಸೌಂದರ್ಯವನ್ನು ತರುತ್ತದೆ. ಆದರೆ ಈಗಿನ ಕಾಲದಲ್ಲಿ ಉದ್ದ ಕೂದಲಲ್ಲ, ಇರುವ ಕೂದಲನ್ನು ಹೇಗೆ ಉಳಿಸುವುದು ಬೇಕು ಎಂಬ ಪರಿಸ್ಥಿತಿ. ಎಷ್ಟೋ ಜನ ತಮ್ಮಲ್ಲಿ ಉಳಿದಿರುವ ಅಲ್ಪ ಸ್ವಲ್ಪ ಕೂದಲನ್ನು ಉಳಿಸಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಮಾಡಿ ನಾನಾ ಬಗೆಯ ಎಣ್ಣೆ, ಕ್ರೀಮ್ ಗಳನ್ನು ಬಳಸುತ್ತಾರೆ.
ಕೂದಲುದುರುವ ಸಮಸ್ಯೆ
ಆದರೆ ಇಷ್ಟೆಲ್ಲಾ ಮಾಡಿದರೂ ಕೂದಲು ಬೆಳೆಯವುದಿಲ್ಲ. ಉದ್ದ ಮತ್ತು ದಟ್ಟ ಕೂದಲು ಹೊಂದಬೇಕೆಂಬುದು ಪ್ರತಿಯೊಬ್ಬರ ಬಯಕೆಯಾಗಿದ್ದು, ಇಂದಿನ ದಿನಮಾನಗಳಲ್ಲಿ ಎಲ್ಲರಿಗೂ ಕೂದಲುದುರುವ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ.
ಇತ್ತಿಚೆಗೆ ಹಲವು ಸಂದರ್ಭದಲ್ಲಿ ಅತಿಯಾಗಿ ಕೂದಲುದುರುವಂತಹ ಸಮಸ್ಯೆ ಎದುರಿಸುತ್ತಿರುವವರು ವಿಗ್ ಹಾಗೂ ಕೃತಕ ಕೂದಲುಗಳ ಚಿಕಿತ್ಸೆಯನ್ನು ಪಡೆಯುತ್ತಾರೆ. ಆದರೆ ಇವು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ ಆದರೂ ಇವುಗಳಿಂದ ದೀರ್ಘ ಸಮಯಗಳಿಗೆ ಪರಿಹಾರ ಸಿಗುವುದಿಲ್ಲ. ಆದರೆ, ಇದಕ್ಕೆ ಇಲ್ಲಿದೆ ಉತ್ತರ. ಕೂದಲು ಚೆನ್ನಾಗಿ ಬೆಳೆಯಬೇಕೆಂದರೆ, ಮನುಷ್ಯರು ಆಹಾರದ ಕಡೆ ಹೆಚ್ಚು ಗಮನ ಕೊಡಬೇಕು.
ಇದನ್ನು ನೋಡಿ : PRE-WEDDING ಮುಗಿಸಿ ಬಾರದ ಊರಿಗೆ! ಮದುವೆಗೂ ಮುನ್ನ ಜೋಡಿ ಜೀವನದಲ್ಲಿ ಏನಾಯ್ತು..?
ಕೂದಲು ಬೆಳವಣಿಗೆಗೆ ಆಹಾರಗಳು
ಒಣಹಣ್ಣುಗಳು:
ಅಂಜೂರ, ಖರ್ಜೂರ ಮತ್ತು ಒಣದ್ರಾಕ್ಷಿಯಲ್ಲಿ ಕಬ್ಬಿಣ, ಮೆಗ್ನೀಸಿಯಮ್ ಹಾಗೂ ವಿಟಮಿನ್ ಸಿ ಹೆಚ್ಚು. ಬೆಳಿಗ್ಗೆ ಉಪಾಹಾರ ದೊಂದಿಗೆ ಇವುಗಳನ್ನು ಸೇವಿಸಿದರೆ ಕೂದಲು ಉದುರುವಿಕೆ ತ್ವರಿತವಾಗಿ ಕಡಿಮೆಯಾಗುತ್ತದೆ.
ವಾಲ್ನಟ್:
ಬಯೋಟಿನ್ ಸಮೃದ್ಧವಾಗಿರುವ ವಾಲ್ನಟ್ ಕೂದಲನ್ನು ಬಲಪಡಿಸಿ, ಉದುರುವಿಕೆಯನ್ನು ತಗ್ಗಿಸುತ್ತದೆ. ನಿಯಮಿತ ಸೇವನೆ ಕೂದಲನ್ನು ದಟ್ಟವಾಗಿಸುತ್ತದೆ.
ರಾಗಿ:
ಉಕ್ಕಿನಂಶ, ಕ್ಯಾಲ್ಸಿಯಂ ಮತ್ತು ಫೋಲೇಟ್ ಹೆಚ್ಚು ಇರುವ ರಾಗಿ ಕೂದಲು ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ರಾಗಿ ದೋಸೆ, ರಾಗಿ ಸೂಪ್ ಮುಂತಾದವುಗಳ ಮೂಲಕ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ದಾಳಿಂಬೆ:
ವಿಟಮಿನ್ ಸಿ, ಕಬ್ಬಿಣ ಹಾಗೂ ಪೊಟ್ಯಾಶಿಯಂ ಪ್ರಚುರವಾಗಿರುವ ದಾಳಿಂಬೆ ರಕ್ತದಲ್ಲಿ ಕಬ್ಬಿಣದ ಮಟ್ಟ ಹೆಚ್ಚಿಸಿ, ಕೂದಲು ಉದುರುವಿಕೆಯನ್ನು ತಡೆದು ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
ಇದನ್ನು ಓದಿ : ಹೆತ್ತ ತಾಯಿಯನ್ನೇ ಅತ್ಯಾಚಾರ ಮಾಡಿದ ಮಗನಿಗೆ ಜೀವಾವಧಿ ಶಿಕ್ಷೆ..!




