Chikkaballapura : ತಾಯಿಯನ್ನ ಅತ್ಯಾಚಾರ ಮಾಡಿದ್ದ ಮಗನಿಗೆ ಚಿಕ್ಕಬಳ್ಳಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡವನ್ನ ಹಾಕಿ ಜೀವಾವಧಿ ಶಿಕ್ಷೆಯನ್ನ ವಿಧಿಸಿದೆ.

Chikkaballapura : ಅತ್ಯಂತ ಕ್ರೂರ, ಮಾನವೀಯತೆಯನ್ನು ನಾಚಿಸುವಂತೆಯೇ ಹೆತ್ತ ತಾಯಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಮಗನಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿ ಬಂಡೆಯಲ್ಲಿ ಪಾಪಿ ಮಗನೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಪ್ರಕರಣ ಸಂಬಂಧ ಇಂದು ತೀರ್ಪು ಪ್ರಕಟವಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡವನ್ನು ಕೋರ್ಟ್ ವಿಧಿಸಿದೆ.
ಅಶೋಕ ಎಂಬ ಆರೋಪಿ ತನ್ನ ತಾಯಿ ರಾಮಕ್ಕ (65) ಅವರನ್ನು ತಿಪ್ಪೆಗೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಅಮಾನುಷ ಘಟನೆ ಕಳೆದ ವರ್ಷ 5 ಆಗಸ್ಟ್ 2024 ರಂದು ನಡೆದಿತ್ತು. ನಂತರ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ತ್ವರಿತ ತನಿಖೆ
ಘಟನೆ ನಂತರ ಪೊಲೀಸರು ಶೀಘ್ರ ತನಿಖೆ ನಡೆಸಿ, ದೋಷಾರೋಪಣ ಪತ್ರ (ಚಾರ್ಜ್ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಸಾಕ್ಷ್ಯಾಧಾರಗಳನ್ನು ಪ್ರಸ್ತುತ ಪಡಿಸಿದ್ದರು. ವಾದ- ಪ್ರತಿ ವಾದ ಆಲಿಸಿದ ನ್ಯಾಯಾಧೀಶ ಶ್ರೀ ಕಾಂತರಾಜು ಎಸ್.ವಿ. ಅವರು ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ : ಪತ್ನಿಯ ಶೀಲ ಶಂಕಿಸಿ ಗಂಡನಿಂದ ಕೊಲೆ ಪತಿಗೆ ಕೋರ್ಟ್ ಏನ್ಮಾಡ್ತು ಗೊತ್ತಾ

ನ್ಯಾಯಾಲಯದ ಕಠಿಣ ತೀರ್ಪು
ವಿಚಾರಣೆ ನಡೆಸಿ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಧೀಶರು ಆರೋಪಿಯ ಕ್ರೂರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ,ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 25,000 ರೂಪಾಯಿ ದಂಡವನ್ನು ವಿಧಿಸಿವಂತೆ ಆದೇಶ ನೀಡಿದ್ದಾರೆ.
ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ಈ ಘಟನೆ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ನ್ಯಾಯಾಲಯ ನೀಡಿದ ಈ ಕಠಿಣ ತೀರ್ಪು ಮುಂದೆ ಇಂತಹ ಅಮಾನವೀಯ ಕೃತ್ಯಗಳಿಗೆ ಎಚ್ಚರಿಕೆಯಾಗಲಿದೆ.
MUST WATCH : ಹೆಂಡ್ತಿಯ ಶೀಲಾ ಶಂಕಿಸಿ ಪಾಪಿ ಗಂಡ ಕೊ* ಮಾಡ್ದಾ – ಕೋರ್ಟ್ ನಿಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ




