Vijayapura : ಗಂಡು ಮಗುವಿಗಾಗಿ ಮಾಟಗಾತಿಯ ಸಲಹೆ ಅನುಸರಿಸಿದ ಪತಿ ಮತ್ತು ಅತ್ತೆ ಮೇಲೆ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ.

Vijayapura : ವಿಜಯಪುರ ಜಿಲ್ಲೆಯ ಹೊನ್ನುಟಗಿ ಗ್ರಾಮದಲ್ಲಿ ಮೂಢನಂಬಿಕೆಯ ಘೋರ ಘಟನೆ ಬೆಳಕಿಗೆ ಬಂದಿದೆ. ಗಂಡು ಮಗು ಬೇಕೆಂಬ ಆಸೆಗಾಗಿ, ಮಾಟಗಾತಿಯ ಮಾತನ್ನು ನಂಬಿದ ಪತಿ ಮತ್ತು ಅತ್ತೆ ಸೇರಿ ಮೂರು ಹೆಣ್ಣು ಮಕ್ಕಳ ತಾಯಿಯಾದ ಮಹಿಳೆಯ ಕೂದಲು ಬಲವಂತವಾಗಿ ಕತ್ತರಿಸಿದ್ದಾರೆ.
ಮಹಿಳೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ನಂತರ ದೂರು ನೀಡಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡು ಮಗು ಹೆರದ ಕಾರಣಕ್ಕೆ ಪತ್ನಿಗೆ ಕಿರುಕುಳ
ಜ್ಯೋತಿ ದಳವಾಯಿ ಮತ್ತು ಡುಂಡೇಶ್ ಸುಮಾರು 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳು ಇದ್ದರು.
ಗಂಡು ಮಗು ಬೇಕೆಂಬ ಆಸೆಯಿಂದ ಡುಂಡೇಶ್ ಮತ್ತು ಅವನ ತಂದೆ–ತಾಯಿ ಜ್ಯೋತಿಗೆ ನಿರಂತರ ಕಿರುಕುಳ ನೀಡುತ್ತಿದ್ದರು.
ಇದನ್ನೂ ಓದಿ : ಪತಿಯೊಂದಿಗೆ ಗಲಾಟೆ ಹಿನ್ನೆಲೆ ಮನನೊಂದು ಗೃಹಿಣಿ Suicide!
ಇದೇ ಕಾರಣಕ್ಕೆ, ಅವರು ಕೊಲ್ಹಾರ ತಾಲೂಕಿನ ಮುಳಗಾಡ ಮೂಲದ ಮಂಗಳಾ ಎಂಬ ಮಾಟಗಾತಿಯ ಬಳಿ ಸಹಾಯಕ್ಕಾಗಿ ಹೋಗಿದರು.
ಮಂಗಳಾದ ಮಾತನ್ನು ನಂಬಿದ ಕುಟುಂಬವು ಜ್ಯೋತಿಯ ಮೇಲೆ ಅಮಾನವೀಯ ವರ್ತನೆ ಮುಂದುವರೆಸಿದ ಆರೋಪ ಕೇಳಿಬಂದಿದೆ.
ಪತ್ನಿ ಕೂದಲು ಕತ್ತರಿಸಿ ಸ್ಮಶಾನದಲ್ಲಿ ಸುಟ್ಟ ಪತಿ
ಮೂರು ಹೆಣ್ಣು ಮಕ್ಕಳ ನಂತರ ಗಂಡು ಮಗು ಬೇಕೆಂಬ ಮೂಢನಂಬಿಕೆಗೆ ಬಲಿಯಾದ ಮಹಿಳೆಯಾದ ಜ್ಯೋತಿ ದಳವಾಯಿಯ ಮೇಲೆ ಪತಿ ದುಂಡೇಶ್ ಮತ್ತು ಅವನ ಕುಟುಂಬ ಕ್ರೂರತೆ ಎಸಗಿದರು.
ಕೊಲ್ಹಾರ ಮೂಲದ ಮಾಟಗಾತಿ ಮಂಗಳಾ “ಜ್ಯೋತಿಯ ಮೈಯಲ್ಲಿ ದೆವ್ವವಿದೆ, ಗಂಡು ಮಗು ಬರಬೇಕಾದರೆ ಆಕೆಯ ನೆತ್ತಿಗೆ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕು” ಎಂದು ಹೇಳಿದಳು.
ಇದನ್ನು ನಂಬಿದ ದುಂಡೇಶ್, ಜ್ಯೋತಿಯ ಕೂದಲನ್ನು ಬಲವಂತವಾಗಿ ಕತ್ತರಿಸಿ, ಮಾಟಗಾತಿಯ ಸೂಚನೆಂತೆ ಸ್ಮಶಾನದಲ್ಲಿ ಸುಟ್ಟಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ಜ್ಯೋತಿ ಚಿಕಿತ್ಸೆ ಪಡೆದ ನಂತರ ದೂರು ದಾಖಲಿಸಿದ್ದು, ಪ್ರಕರಣ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆಯ ನಂತರ ತೀವ್ರ ರಕ್ತಸ್ರಾವದಿಂದ ಬಳಲಿದ ಜ್ಯೋತಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದ ಬಳಿಕ ತವರು ಮನೆಗೆ ತೆರಳಿದರು. 12 ದಿನಗಳ ಬಳಿಕ, ಜ್ಯೋತಿ ಮತ್ತು ಕುಟುಂಬಸ್ಥರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
MUST WATCH: ಅತ್ತೆ ಮಗಳನ್ನೇ ಕೊಲೆಗೈದ ಮಾವ – ಹಂತಕನ ಬಂಧಿಸಿದ್ದೇ ರಣರೋಚಕ




