Salumarada Timmakka : ಸುಮಾರು ನಾಲ್ಕು ಸಾವಿರಕ್ಕಿಂತ ಹೆಚ್ಚಿನ ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಸುಪ್ರಸಿದ್ಧರಾಗಿದ್ದ ಪದ್ಮಶ್ರೀ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಮೇಲ್ಮನೆಯಲ್ಲಿ ಸಂತಾಪ ಸಲ್ಲಿಸಲಾಯಿತು.

Salumarada Timmakka : ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಮೃತರ ಗೌರವಾರ್ಥ ಎಲ್ಲ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನಾಚರಿಸಿದರು.
ಇದನ್ನು ಓದಿ : ಇನ್ನೆರಡೇ ವಾರದಲ್ಲಿ ಮದುವೆಯಾಗಬೇಕಿದ್ದ ಜೋಡಿ ಭೀಕರ ರಸ್ತೆ ಅಪಘಾತದಲ್ಲಿ ಸಾವು
1911ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಸಾಳುಮರದ ತಿಮ್ಮಕ್ಕ ಅವರು 2025ರ ನವೆಂಬರ್ 14ರಂದು ನಿಧನರಾದರು. ತಾಯಿಯಾಗುವ ಅವಕಾಶ ಸಿಗದೆ, ಅವರು ಹುಲಿಕಲ್ ರಸ್ತೆ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಮಕ್ಕಳಂತೆ ಸಾಕಿದರು. ಈ ಪ್ರೇರಣೆಯಿಂದ “ತಿಮ್ಮಕ್ಕ ಮಾತು 284 ಮಕ್ಕಳು” ಎಂಬ ಸಾಕ್ಷ್ಯಚಿತ್ರವು ತಯಾರಾಗಿ 2000ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶಿತವಾಯಿತು.
ಔಪಚಾರಿಕ ಶಿಕ್ಷಣವಿಲ್ಲದಿದ್ದರೂ, ಪರಿಸರ ಸಂರಕ್ಷಣೆಗೆ ಅಪರೂಪದ ಸೇವೆ ಸಲ್ಲಿಸಿದ ಅವರಿಗೆ ಪದ್ಮಶ್ರೀ ಸೇರಿದಂತೆ ಅನೇಕ ರಾಷ್ಟ್ರ–ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಅವರು 2020ರಲ್ಲಿ ಗೌರವ ಡಾಕ್ಟರೇಟ್ಗೂ ಭಾಜನರಾದರು.
ಇದನ್ನು ನೋಡಿ : ದೊಡ್ಡಪ್ಪ ಅಂತಾನು ನೋಡದೆ ಆಸ್ತಿ ವಿಚಾರವಾಗಿ ಕೊಂದೇ ಬಿಟ್ಟ ಪಾಪಿ ಮಗ..!




