ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ – ಕೇಂದ್ರದ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿವಂತೆ ಸೂಚನೆ.

ತುಮಕೂರಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆ ನಡೆಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಪಾಲ್ಗೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಅನುಷ್ಠಾನದ ಸ್ಥಿತಿಯನ್ನು ವಿವರಿಸಿದರು. ಕೇಂದ್ರದಿಂದ ಬರುವ ಸವಲತ್ತುಗಳು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಎಷ್ಟರ ಮಟ್ಟಿಗೆ ತಲುಪುತ್ತಿವೆ ಎಂಬುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಸಭೆ ಗಂಭೀರ ಚರ್ಚೆಗಳಿಂದ ಕೂಡಿತ್ತು.
ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ DC
ಇನ್ನು ಸಭೆಯಲ್ಲಿ ಕೃಷಿ, ತೋಟಗಾರಿಕಾ, ರೇಷ್ಮೆ, ಅಲ್ಪಸಂಖ್ಯಾತ, ಮಹಿಳಾ–ಮಕ್ಕಳ ಅಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳ ಯೋಜನೆಗಳು ನೆಲದಮಟ್ಟದಲ್ಲಿ ಹೇಗೆ ಜಾರಿಯಾಗುತ್ತಿವೆ ಎಂಬುದರ ಕುರಿತು ಅಧಿಕಾರಿಗಳು ಪ್ರಗತಿ ವರದಿ ನೀಡಿದರು. ವಿಶೇಷವಾಗಿ ಕೃಷಿ ಸಿಂಚಾಯಿ ಯೋಜನೆಗಳನ್ನು ಮುಖ್ಯವಾಗಿ ಚರ್ಚೆ ಆಯಿತು. ಕೆಲವು ಇಲಾಖೆಗಳು ನಿಗದಿತ ಗುರಿ ತಲುಪಿಲ್ಲ ಎಂದು DC ಗಂಭೀರ ಸೂಚನೆ ನೀಡಿದರು.
ಕನಿಷ್ಠ 75% ಟಾರ್ಗೆಟ್ ರೀಚ್ ಮಾಡುವಂತೆ ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಲಾಯಿತು. ಸ್ಲಂ ಬೋರ್ಡ್ ಇಲಾಖೆಗೆ ವಿಶೇಷವಾಗಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಗುರಿ ಸಾಧನೆಯನ್ನು ಹೆಚ್ಚಿಸುವಂತೆ ಕಠಿಣ ನಿರ್ದೇಶನ ಜಿಲ್ಲಾಧಿಕಾರಿಗಳು ನೀಡಿದರು.
ಇದನ್ನು ಓದಿ : ಇನ್ನೆರಡೇ ವಾರದಲ್ಲಿ ಮದುವೆಯಾಗಬೇಕಿದ್ದ ಜೋಡಿ ಭೀಕರ ರಸ್ತೆ ಅಪಘಾತದಲ್ಲಿ ಸಾವು

ಸಭೆಯಲ್ಲಿ ಭರವಸೆ
ಸಭೆಯಲ್ಲಿ ಸದಸ್ಯರು ತಮ್ಮ ಪ್ರದೇಶಗಳ ಅನೇಕ ಸಾರ್ವಜನಿಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮುಖ್ಯವಾಗಿ ಜಿಲ್ಲೆಯಲ್ಲಿ ಹಲವಾರು ಉರ್ದು ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ವಿಚಾರ ಪ್ರಸ್ತಾಪವಾಯಿತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಎಷ್ಟು ಉರ್ದು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಸಂಪೂರ್ಣ ವರದಿ DDPI ಯಿಂದ ತಕ್ಷಣ ಸಂಗ್ರಹಿಸುವಂತೆ ಸೂಚಿಸಿದರು. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಲಾಯಿತು.
ಒಟ್ಟಿನಲ್ಲಿ, ವಿವಿಧ ಇಲಾಖೆಗಳ ಗುರಿ ಸಾಧನೆ, ನಿಧಿಗಳ ಬಳಕೆ ಹಾಗೂ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆಗಳು ನಡೆದ ಈ ಪ್ರಗತಿ ಪರಿಶೀಲನಾ ಸಭೆ, ಜಿಲ್ಲೆಯ ಅಭಿವೃದ್ಧಿ ಗತಿ ಹೆಚ್ಚಿಸಲು ಮಹತ್ವದ ವೇದಿಕೆಯಾಯಿತು.

ಇದನ್ನು ನೋಡಿ : ದೊಡ್ಡಪ್ಪ ಅಂತಾನು ನೋಡದೆ ಆಸ್ತಿ ವಿಚಾರವಾಗಿ ಕೊಂದೇ ಬಿಟ್ಟ ಪಾಪಿ ಮಗ..!




