Ramanagar : ಪ್ರೀತಿಸಿದ (Love) ಯುವಕ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.

Ramanagar : ತನ್ನನ್ನು ಪ್ರೀತಿಸಿದ ಯುವಕ ಮದುವೆಗೆ ನಿರಾಕರಿಸಿದ್ದಾನೆಂಬ ನೋವಿಗೆ ಮನನೊಂದು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸಿದ ಯುವಕನಿಂದ ಮದುವೆಗೆ ನಿರಾಕರಣೆ
ವಿಭೂತಿಕೆರೆ ಗ್ರಾಮದ ನಿವಾಸಿ 22 ವರ್ಷದ ವರ್ಷಿಣಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಯಾಗಿದ್ದಾಳೆ. ವರ್ಷಿಣಿ ಭಾನುವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ : ಯುವತಿ ವಿಚಾರಕ್ಕೆ ಮಚ್ಚಿನಿಂದ ಕೊಚ್ಚಿ ಯುವಕನ ಹತ್ಯೆ

ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವತಿ
ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ದೇವರದೊಡ್ಡಿ ಗ್ರಾಮದ ಅಭಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು, ಆದರೆ ಯುವಕ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಡೆತ್ನೋಟ್ ನಲ್ಲಿ ವರ್ಷಿಣಿ, ತನಗಾದ ಮೋಸವನ್ನು ಬಿಚ್ಚಿಟ್ಟಿದ್ದು, ಸಾಯುತ್ತಿರೋದಕ್ಕೆ ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗೂ ತನ್ನ ಸಾವಿಗೆ ಕಾರಣವಾಗಿರುವ ಅಭಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.
ವರ್ಷಿಣಿ ಬರೆದ ಡೆತ್ನೋಟ್ ಹೀಗಿದೆ
ಅಮ್ಮಾ, ಸಾಧ್ಯವಾದ್ರೆ ನನ್ನನ್ನು ಕ್ಷಮಿಸು. ಅಭಿ ನನ್ನನ್ನು ನಂಬಿಸಿಬಿಟ್ಟ. ಬ್ಲಾಕ್ಮೇಲ್ ಮಾಡಿ ರಿಂಗ್ ಮತ್ತು ಎಲ್ಲಾ ಹಣ ತಗೊಂಡ. ನಾನು ಪ್ರೆಗ್ನಂಟ್ ಆದೆ. ನಂತರ ಅವನು ಗರ್ಭಪಾತ ಮಾಡಿಸಿದ. ಇವನನ್ನು ಮಾತ್ರ ಸುಮ್ಮನೇ ಬಿಡಬೇಡಿ.
ನಿನ್ನ ನಂಬಿಕೆಗೆ ನಾನು ಮೋಸ ಮಾಡಿದ್ದೇನೆ. ಸಾಧ್ಯವಾದ್ರೆ ನನ್ನನ್ನು ಕ್ಷಮಿಸು ಅಮ್ಮ. ಸಾಯೋದಕ್ಕೆ ಭಯ ಆಗ್ತಿದೆ ಅಮ್ಮಾ. Sorry ಸಾಯೋದನ್ನು ಬಿಟ್ಟು ಬೇರೆ ಯಾವ ದಾರಿಯೂ ಗೊತ್ತಾಗುತ್ತಿಲ್ಲ. ನಾನು ಅಭಿಯನ್ನು ನಂಬಬಾರದಿತ್ತು.
ನೀವು ನನ್ನನ್ನು ತುಂಬಾ ನಂಬಿದ್ರಿ. ಆದ್ರೆ ಇದೊಂದು ತಪ್ಪಿಂದ ಅದನ್ನೆಲ್ಲಾ ಹಾಳು ಮಾಡಿಬಿಟ್ಟ. ಅವನನ್ನು ಮಾತ್ರ ಸುಮ್ಮನೇ ಬಿಡಬೇಡಿ. ದಯವಿಟ್ಟು ಯಾರೂ ನನ್ನ ಹಾಗೆ ಮಾಡಿಕೊಳ್ಳಬೇಡಿ. ಈ ರೀತಿ ಇರೋ ನಾಯಿಗಳನ್ನು ನಂಬಿ ಮೋಸ ಹೋಗಬೇಡಿ.

ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸದ್ಯ ವಿಷಯ ತಿಳಿದು ರಾಮನಗರ ಗ್ರಾಮಾಂತರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ ಯುವತಿಯ ಮೃತದೇಹವನ್ನ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಆಸ್ಪತ್ರೆ ಆವರಣದಲ್ಲಿ ವರ್ಷಿಣಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಭಿಯನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
MUST WATCH : DUSHYANTH | ಮಗ ದುಷ್ಯಂತರ ಗತವೈಭವ ನೋಡಿ – ಗುಬ್ಬಿ ವಾಸಣ್ಣ ಏನಂದ್ರಂತೆ ಗೊತ್ತಾ.?




