ಡಿಕೆ ಶಿವಕುಮಾರ್ ಸಿಎಂ ಆದ್ರೆ, ಅವರ ಸಂಪುಟದಲ್ಲಿ ನಾನು ಸಚಿವ ಆಗೋದಿಲ್ಲ – K.N Rajanna

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವ ವೇಳೆ, ಮಾಜಿ ಸಚಿವ ಕೆ.ಎನ್ ರಾಜಣ್ಣ (K.N. Rajanna) ಮಹತ್ವ ಹೇಳಿಕೆಯನ್ನು ನೀಡಿದ್ದಾರೆ.
ತುಮಕೂರಿನಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಾಜಣ್ಣ, “ನನಗೆ ಅಧಿಕಾರದ ದಾಹ ಇಲ್ಲ. ನಾನು ಮೊದಲೇ ಹೇಳಿದ್ದೇನೆ ಶಿವಕುಮಾರ್ ಸಿಎಂ ಆದ್ರೆ ಅವರ ಸಂಪುಟದಲ್ಲಿ ಸಚಿವ ಆಗೋಲ್ಲ ಮತ್ತೆ ಅದನ್ನೇ ಹೇಳ್ತೀನಿ” ಎಂದಿದ್ದಾರೆ.
ಇದನ್ನು ಓದಿ : BBK S12|ಗಿಲ್ಲಿ ತಿಳಿದೂ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ ಸುದೀಪ್
ಅಧಿಕಾರ ಹುಡುಕಿ ಹೋದವನಲ್ಲ
ಯಾರೆಲ್ಲಾ ನನ್ನ ಪರವಾಗಿ ಅಭಿಪ್ರಾಯ, ವಿಶ್ವಾಸ ವ್ಯಕ್ತಪಡಿಸ್ತಾರೆ ಅವರಿಗೆ ಆಭಾರಿಯಾಗಿದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ, ಅಧಿಕಾರ ಬೇಕು ಅಂತಾ ಸಂಪೂರ್ಣ ಅಪೇಕ್ಷೇ ಪಡೋನು ಅಲ್ಲಾ ಅಂತ K.N Rajanna ಹೇಳಿದ್ದಾರೆ.
ಡಿಕೆಶಿ ಸಂಪುಟದಲ್ಲಿ ನನಗೆ ಸ್ಥಾನ ಬೇಡ
ಮತ್ತೆ ಹೇಳ್ತೀನಿ ಡಿಕೆಶಿ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ ನನಗೆ ಸಾಕು ಇನ್ನೋಬ್ಬರಿಗೆ ಅವಕಾಶ ಕೊಡಲಿ ಅಂತ ಕೆಎನ್ Rajanna ಹೇಳಿದ್ದಾರೆ. “ನಾನು ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿಲ್ಲ. ಆದ್ರೆ ಅದೇನು ಆಗೇ ಬಿಡ್ತಾರೆ ಅಂದು ಕೊಂಡಿದ್ದೀರಾ? ಅಂತ ರಾಜಣ್ಣ ಪ್ರಶ್ನಿಸಿದ್ದಾರೆ.
ಇದನ್ನು ನೋಡಿ : SURESH GOWDA | ತೊಡೆತಟ್ಟಿ ಹೇಳ್ತೀನಿ ಕಾಂಗ್ರೆಸ್ ಬೀಳುತ್ತೆ ಶಾಸಕ ಸುರೇಶ್ ಗೌಡ್ರು ಖಡಕ್ ಮಾತು




