
ASIA CUP : ಏಷ್ಯಾ ಕಪ್ 2025ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ಮತ್ತೆ ಸೂಪರ್–4 ಹಂತದ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಮ್ಯಾಚ್ ರೆಫರಿಯಾಗಿ ಆ್ಯಂಡಿ ಪೈಕ್ರಾಫ್ಟ್ ನೇಮಕಗೊಂಡಿದ್ದಾರೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೂ, ICC ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅವರುಗೆ ಮುಂದುವರೆಸಿದಂತೆಯೇ ಆದೇಶಿಸಿವೆ.
ಹಿಂದಿನ ಪಂದ್ಯದಲ್ಲಿ ಟಾಸ್ ನಂತರ ಹಾಗೂ ಪಂದ್ಯ ಬಳಿಕ ಆಟಗಾರರು ಹಸ್ತಲಾಘವ ಮಾಡದೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಇದರಿಂದ ಪಾಕಿಸ್ತಾನ ತಂಡದ ಅಭಿಪ್ರಾಯದಲ್ಲಿ ಕ್ರೀಡಾ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ಉಂಟಾಗಿದೆ. ಈ ವಿಷಯದ ಬೆನ್ನಲ್ಲೇ ಪಾಕಿಸ್ತಾನ ಭಾರತ ವಿರುದ್ಧ ಜಯ ಸಾಧಿಸಲು ಸರ್ವಶಕ್ತಿಯಿಂದ ಸಜ್ಜಾಗಿದೆ, ಆದರೆ ಭಾರತ ಮತ್ತೆ ಮೇಲುಗೈ ಸಾಧಿಸುವ ತವಕದಲ್ಲಿದೆ.




