
MALE MAHADESHWARA TEMPLE : ಇಂದು ಮಹಾಲಯ ಅಮಾವಾಸ್ಯೆಯ ಹಿನ್ನೆಲೆ ಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡು ಆಗಮಿಸುತ್ತಿದೆ. ಇಂದು ಮಾದಪ್ಪ ನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. ರಾತ್ರಿಯಿಂದಲೇ ಮಲೆ ಮಹದೇಶ್ವ ರ ಬೆಟ್ಟದಲ್ಲಿ ಭಕ್ತರು ಬೀಡುಬಿಟ್ಟಿದ್ದಾರೆ.
ಪ್ರಸಿದ್ಧ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಪ್ರಾಧಿಕಾರ ಕೈಗೊಂಡಿದೆ. ಭಕ್ತರ ದಾಸೋ ಹಕ್ಕಾಗಿ ಎರಡು ಲಕ್ಷ ಲಾಡುಗಳನ್ನು ತಯಾರಿಸ ಲಾಗಿದೆ. ಅಲ್ಲದೆ, ಭಕ್ತರಿಗೆ ಅನ್ನದಾನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಇನ್ನು ಬೆಟ್ಟದ ಸುತ್ತಮುತ್ತ ಮತ್ತು ದೇವಾಲಯದ ಆವರಣದಲ್ಲಿ ಲೈಟಿಂಗ್ ಅಲಂಕ ರಣದಿಂದ ಮಾದಪ್ಪ ನ ಸನ್ನಿಧಿ ಮತ್ತಷ್ಟು ಕಂಗೊಳಿಸುತ್ತಿದೆ.




