Actor Darshan : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ ಬಳಸಲಾಗಿದೆ ಎಂದು ಶಂಕೆಯಿರುವ 82 ಲಕ್ಷ ರೂ. ನಗದು ಕುರಿತು ನಟ ದರ್ಶನ್ ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

Actor Darshan : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕೆ 82 ಲಕ್ಷ ರೂ. ನಗದು ಸಂಗ್ರಹಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ನಟ ದರ್ಶನ್ ವಿರುದ್ಧ ಐಟಿ ಇಲಾಖೆ ವಿಚಾರಣೆ ನಡೆಸಿದೆ. ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಮನೆಯಲ್ಲಿದ್ದ 82 ಲಕ್ಷ ರೂ. ನಗದಿನ ಬಗ್ಗೆ ಹೇಳಿಕೆ ಪಡೆಯಲಾಗಿದೆ.
ಐಟಿ ಅಧಿಕಾರಿಗಳ ಮುಂದೆ ದರ್ಶನ್ ತಮ್ಮ ಹೇಳಿಕೆಯಲ್ಲಿ ಈ ಹಣ ಕೃಷಿ ಮತ್ತು ಪಶು ಸಂಗೋಪನೆಯಿಂದ ಬಂದಿದೆಯೆಂದು ತಿಳಿಸಿದ್ದಾರೆ. ಆದರೆ ಈ ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ತೋರಿಸಲು ದರ್ಶನ್ ವಿಫಲರಾದರು. “ಐಟಿ ರಿಟರ್ನ್ಸ್ ಸಮಯದಲ್ಲಿ ವಿವರ ಸಲ್ಲಿಸುತ್ತೇನೆ” ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
Must Read : Devil Trailer : “ಎಕ್ಸ್ಕ್ಯೂಸ್ ಮೀ PC… AC ಹಾಕಮ್ಮ”ಡೆವಿಲ್ ಟ್ರೇಲರ್ನಲ್ಲಿ ಗಿಲ್ಲಿ ಪಾತ್ರದ ಝಲಕ್ ..

ಸಾಲಕೊಟ್ಟಿದ್ದು–ಸಾಲಪಡೆದ ಬಗ್ಗೆ ಪ್ರಶ್ನಿಸಿದಾಗ, ದರ್ಶನ್ “ಮೋಹನ್ ರಾಜ್ಗೆ ಒಂದು ವೇಳೆ ಮಾತ್ರ ನಾನು ಸಾಲವಾಗಿ ಹಣ ನೀಡಿದ್ದೆ. 2024 ಫೆಬ್ರವರಿಯಲ್ಲಿ ಕೊಟ್ಟು ಮೇ ತಿಂಗಳಲ್ಲಿ ಹಿಂತಿರುಗಿಸಿಕೊಂಡಿದ್ದೆ” ಎಂದು ಹೇಳಿದರು. ಇದನ್ನು ಹೊರತುಪಡಿಸಿ ಕಳೆದ ಆರು ವರ್ಷಗಳಲ್ಲಿ ಯಾರಿಗೂ ನಗದು ಸಾಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಮೂರು ವರ್ಷಗಳಿಂದ ಕೃಷಿಗೆ 25 ಲಕ್ಷ ರೂ. ವೆಚ್ಚ ಮಾಡಿದ್ದಾಗಿ, ಹುಟ್ಟುಹಬ್ಬಕ್ಕೆ 15 ಲಕ್ಷ ರೂ. ಗಿಫ್ಟ್ ರೂಪದಲ್ಲಿ ಪಡೆದಿದ್ದಾಗಿ ದರ್ಶನ್ ಹೇಳಿಕೆ ನೀಡಿದ್ದಾರೆ. ಉಳಿದ ನಗದು ಹಣದ ಮೂಲವನ್ನರಿಯದಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ದರ್ಶನ್, ವಿಜಯಲಕ್ಷ್ಮಿ, ಪ್ರಧೋಷ್, ನಿಖಿಲ್ ಹಾಗೂ ಕೇಶವಮೂರ್ತಿ ಅವರ ಮನೆಗಳಲ್ಲಿ ಒಟ್ಟು 82 ಲಕ್ಷ ರೂ. ನಗದು ಪತ್ತೆಯಾಗಿದ್ದು, ಇದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ನಾಶಕ್ಕೆ ಬಳಸಲ್ಪಟ್ಟಿದೆ ಎಂಬ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.




