Accident : ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ರಸ್ತೆ ಅಪಘಾತ – ದ್ವಿಚಕ್ರ ವಾಹನ ಸವಾರ ಸಾವು.

Accident : ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ನೆನ್ನೆ (ಗುರುವಾರ) ಸಂಜೆ ಸುಮಾರು 7 ಗಂಟೆಗೆ ಮಧುಗಿರಿ ಪಟ್ಟಣದಲ್ಲಿ ನಡೆದಿದೆ.
ಇದನ್ನು ನೋಡಿ : ಗುಬ್ಬಿಯಲ್ಲಿ ಕಳ್ಳರ ಗ್ಯಾಂಗ್ ಫುಲ್ ಆಕ್ಟಿವ್- ಹಾಡಹಗಲೇ ಚಿನ್ನದಂಗಡಿ ದೋಚಲು ಮುಂದಾದ ಕಳ್ಳರು
Accident – ಬೈಕ್ ಸವಾರ ದಾರುಣ ಸಾವು
ಮಧುಗಿರಿ–ಶಿರಾ ರಸ್ತೆಯ ಗೌರಿಪಾಳ್ಯದ ಸಮೀಪ ಲಾರಿ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಹಾವೇಕಟ್ಟೆ ನಿವಾಸಿ ಕಾಂತರಾಜು (52) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಇನ್ನು ಅಪಘಾತ ನಡೆದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಧುಗಿರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನು ಓದಿ : Devil Trailer|ಹೊಸ ಅವತಾರದಲ್ಲಿ ಮಿಂಚಿದ ದರ್ಶನ್.. ‘ಡೆವಿಲ್’ ಟ್ರೇಲರ್ ರಿಲೀಸ್ ..!




