Chamarajanagar : ಚಾಮರಾಜನಗರದ ತೇರಂಬಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಕಾಂಗ್ರೆಸ್ ಯುವ ಮುಖಂಡ ಸುನೀಲ್ ಮೇಲೆ ರಾಜಣ್ಣ ಎಂಬಾತ ಚಾಕು ಇರಿದ ಘಟನೆ ನಡೆದಿದೆ.

Chamarajanagar : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಯುವ ಮುಖಂಡ ಸುನೀಲ್ ಮೇಲೆ ರಾಜಣ್ಣ ಎಂಬ ವ್ಯಕ್ತಿ ಚಾಕುವಿನಿಂದ ದಾಳಿ ಮಾಡಿದ ಘಟನೆ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಉಲ್ಬಣಗೊಂಡು, ರಾಜಣ್ಣ ಸುನೀಲ್ ಮೇಲೆ ಚಾಕು ಇರಿದ ಪರಿಣಾಮ ಗಂಭೀರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಗಾಯಾಳುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಅಗರ–ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ.
ಇದನ್ನೂ ಓದಿ: Shivamogga : ಕರ್ತವ್ಯ ನಿರತ KSRTC ಚಾಲಕ ಹೃದಯಾಘಾತದಿಂದ ಸಾವು
ಗದಗನಲ್ಲಿ ಯುವಕನ ಮೇಲೆ ತಲ್ವಾರ್ನಿಂದ ಇರಿದು ಹಲ್ಲೆ ..!!
ಇದೇ ವೇಳೆ, ಇತ್ತೀಚೆಗೆ ಗದಗ ನಗರದಲ್ಲಿ ದುರ್ಗಾ ಬಾರ್ ಎದುರು ನಡೆದ ಮತ್ತೋರ್ವ ಯುವಕನ ಮೇಲೆ ತಲ್ವಾರ್ ಮತ್ತು ಬಿಯರ್ ಬಾಟಲ್ ಬಳಸಿ ಮಾರಣಾಂತಿಕ ಹಲ್ಲೆಯ ಪ್ರಕರಣವೂ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತ ಚಿಂತೆಯನ್ನು ಹೆಚ್ಚಿಸಿದೆ. ಅರುಣ್ ಕುಮಾರ್ ಕೋಟೆಕಲ್ ಎಂಬ ಯುವಕನ ಮೇಲೆ ಸಾಹಿಲ್, ಮುಸ್ತಾಕ್ ಹಾಗೂ ಅಭಿಷೇಕ್ ಇರಿತದ ದಾಳಿ ನಡೆಸಿ 25ಕ್ಕೂ ಹೆಚ್ಚು ಗಾಯಗಳನ್ನುಂಟುಮಾಡಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಬಂಧನಕ್ಕೆ ಒಳಗಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
MUST WATCH: HEART ATTACK | ಕೆಲಸ ಮಾಡ್ತಾ ಇದ್ದ ವೇಳೆಯೇ ಹಾರ್ಟ್ ಅಟ್ಯಾಕ್




