Bengaluru Crime News : ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ಲಿವಿಂಗ್ ರಿಲೇಶನ್ಶಿಪ್ ದುರಂತಕ್ಕೆ ಕಾರಣವೇನು? ಲಕ್ಷ್ಮೀನಾರಾಯಣ ಏಕೆ ಲಲಿತಾಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡರು?

BENGALURU ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ನಡೆದಿರುವ ದಾರೂಣ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಗಂಡ ಸಾವಿನ ಬಳಿಕ ಸಹವಾಸಕ್ಕಾಗಿ ಲಿವಿಂಗ್ ರಿಲೇಶನ್ಶಿಪ್ನಲ್ಲಿ ಇದ್ದ ಲಲಿತಾ (49) ಎಂಬ ಮಹಿಳೆಯನ್ನು, ಸಂಗಾತಿ ಲಕ್ಷ್ಮೀನಾರಾಯಣ (51) ಕೋಪದ ಜಗಳದ ನಂತರ ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಇಬ್ಬರೂ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರು ಹಾಗೂ ಕಳೆದ ಎರಡು ಮೂರು ವರ್ಷಗಳಿಂದ ಒಟ್ಟಿಗಿದ್ದರು ಎಂದು ತಿಳಿದುಬಂದಿದೆ.
ಘಟನೆ ಹೇಗೆ ಪತ್ತೆಯಾಗಿದೆ?
ಶನಿವಾರ ಬೆಳಿಗ್ಗೆ ಮನೆಯ ಬಾಗಿಲು ತೆರೆದಿದ್ದರೂ ಒಳಗೆ ಯಾರು ಕಾಣಿಸದ ಕಾರಣ ಪಕ್ಕದವರಲ್ಲಿ ಅನುಮಾನ ಮೂಡಿದೆ. ಮನೆಯೊಳಗೆ ಪ್ರವೇಶಿಸಿದಾಗ ಲಲಿತಾ ಕೊಲೆಯಾದ ಸ್ಥಿತಿಯಲ್ಲಿ ಕಾಣಿಸಿಕೊಂಡರೆ, ಲಕ್ಷ್ಮೀನಾರಾಯಣ ನೇಣು ಬಿಗಿದು ಮೃತಪಟ್ಟಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಮೊದಲಿನ ಮಾಹಿತಿ ಪ್ರಕಾರ, ಲಲಿತಾಳ ನಡತೆ ಕುರಿತು ಜಗಳ ಉಂಟಾಗಿ, ಲಕ್ಷ್ಮೀನಾರಾಯಣ ವೇಲ್ ಬಳಸಿ ಕುತ್ತಿಗೆ ಬಿಗಿದು ಉಸಿರುಗಟ್ಟಿ ಕೊಲೆ ಮಾಡಿದ್ದಾನೆ. ಬಳಿಕ ತಾನೇ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : Haveri|ಆಕಸ್ಮಿಕ ಬೆಂಕಿಗೆ 4 ಲಕ್ಷ ಮೌಲ್ಯದ ಮೆಕ್ಕೆಜೋಳದ ರಾಶಿ ಭಸ್ಮ
ಪೊಲೀಸ್ ತನಿಖೆ
ಘಟನೆ ಸ್ಥಳಕ್ಕೆ ತಕ್ಷಣವೇ ರಾಜಗೋಪಾಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಂಪತಿಯ ನಡುವಿನ ವೈಯಕ್ತಿಕ ಕಲಹ ಮತ್ತು ಕೊಲೆ-ಆತ್ಮಹತ್ಯೆಗೆ ಕಾರಣವಾದ ಪರಿಸ್ಥಿತಿಗಳನ್ನು ಹೆಚ್ಚಿನವಾಗಿ ಪರಿಶೀಲಿಸುತ್ತಿದ್ದಾರೆ.
ಇದನ್ನು ನೋಡಿ : ಮಂಡ್ಯ ಲೋಕಾಸಭಾ ಚುನಾವಣೆಯಲ್ಲಿ ಡಿಕೆಶಿ ಕತ್ತು ಕುಯ್ಯೋ ಕೆಲ್ಸ ಮಾಡಿದ್ರು




