Bengaluru : ಬೆಂಗಳೂರಿನಲ್ಲಿ ನಟೋರಿಯಸ್ ಟ್ರಾಫಿಕ್ (Traffic) ಇದೆ, ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ ಎಂದು ಸಮಾಜವಾದಿ ಪಕ್ಷದ ಎಂಪಿ ರಾಜೀವ್ ರೈ (Rajeev Rai) ಬೆಂಗಳೂರು ಟ್ರಾಫಿಕ್ ವಿರುದ್ಧ ಎಕ್ಸ್ನಲ್ಲಿ ಕಿಡಿಕಾರಿದ್ದಾರೆ.

Bengaluru : ಬೆಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆ ಬಗ್ಗೆ ಸಮಾಜವಾದಿ ಪಕ್ಷದ ಎಂಪಿ ರಾಜೀವ್ ರೈ ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರ ಏರ್ಪೋರ್ಟ್ಗೆ ತೆರಳಲು ಪ್ರಯತ್ನಿಸುತ್ತಿದ್ದ ಅವರು ರಾಜ್ ಸಮಾಧಿ ರಸ್ತೆಯ ಬಳಿ ಒಂದು ಗಂಟೆಗಳ ಕಾಲ ಜಾಮ್ನಲ್ಲಿ ಸಿಕ್ಕಿಹಾಕಿಕ್ಕೊಂಡಿದ್ದರು, ಇದರಿಂದ ವಿಮಾನ ಮಿಸ್ ಆಗುವ ಸಾಧ್ಯತೆ ಉಂಟಾಗಿ ಸಿಟ್ಟಾಗಿದ್ದಾರೆ.
ಇದನ್ನೂ ಓದಿ : Bengaluru: ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿ ತಾಯಿ ಆತ್ಮಹತ್ಯೆ!
ಟ್ರಾಫಿಕ್ ವ್ಯವಸ್ಥೆ ಬಗ್ಗೆ ರಾಜೀವ್ ರೈ ಎಕ್ಸ್ನಲ್ಲಿ ಪ್ರತಿಭಟನೆ
ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಪೊಲೀಸರು ಸಂಪರ್ಕಿಸಿದ್ದರೂ ಕರೆ ಸ್ವೀಕರಿಸಲಾಗಲಿಲ್ಲ, ಸುತ್ತಮುತ್ತ ಟ್ರಾಫಿಕ್ ಪೊಲೀಸರು ಕಾಣಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ರಾಜೀವ್ ರೈ ಸಿಎಂ ಸಿದ್ಧರಾಮಯ್ಯ ಅವರನ್ನು ಎಕ್ಸ್ನಲ್ಲಿ ಟ್ಯಾಗ್ ಮಾಡಿ ಹರಿಹಾಯ್ದಿದ್ದಾರೆ.

ಬೆಂಗಳೂರು ಟ್ರಾಫಿಕ್ ಕುರಿತು ಎಂಪಿ ಜೊತೆ ಚರ್ಚೆ
ಈ ಸಂಬಂಧ ಡಿಸಿಎಂ ಡಿಕೆಶಿ ಅವರು “ನಾನು ಅವರೊಂದಿಗೆ ದೆಹಲಿಯಲ್ಲಿ ಭೇಟಿ ಮಾಡಿ ಮಾತನಾಡುತ್ತೇನೆ, ಬೆಂಗಳೂರು ಮಹತ್ವದ ನಗರ, ಇದನ್ನು ಕುರಿತು ಸ್ಪಷ್ಟನೆ ನೀಡುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.
MUST WATCH: BANGLORE INCIDENT | ಕಾಲ್ತುಳಿತ ದುರಂತದಲ್ಲಿ ಅಮಾಯಕ ಬಲಿಗೆ, ಸರ್ಕಾರಕ್ಕೆ ಹೈಕೋರ್ಟ್ ಚಾಟಿ




