Mandya: ಹಳೆಯ ದ್ವೇಷಕ್ಕೆ ನಡುರಾತ್ರಿಯಲ್ಲಿ ರೌಡಿಶೀಟರ್ನನ್ನು ಲಾಂಗ್ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದ ಬಳಿ ನಡೆದಿದೆ.

Mandya: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದ ಬಳಿ ಹಳೆಯ ದ್ವೇಷಕ್ಕೆ ಸಂಬಂಧಿಸಿದಂತೆ ಭೀಕರ ಕೊಲೆ ನಡೆದಿದೆ. ಮೃತನನ್ನು ಲಕ್ಷ್ಮೀಸಾಗರ ಗ್ರಾಮದ ಮಹೇಶ್ (40) ಎಂದು ಗುರುತಿಸಲಾಗಿದೆ.
ಮಂಡ್ಯದಲ್ಲಿ ಹಳೆಯ ದ್ವೇಷಕ್ಕೆ ಭೀಕರ ಕೊಲೆ
ಮಹೇಶ್ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಲ್ಲಿ ರೌಡಿಶೀಟರ್ ಆಗಿ ದಾಖಲಾಗಿದ್ದ, ಮತ್ತು ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದವರು. ಕಳೆದ ಎರಡು ದಿನಗಳ ಹಿಂದೆ ಕೋರ್ಟ್ಗೆ ಹೋಗಬೇಕೆಂದು ತಮ್ಮ ಗ್ರಾಮದ ಲಕ್ಷ್ಮೀಸಾಗರಕ್ಕೆ ಬಂದಿದ್ದರು.
ಮಧ್ಯರಾತ್ರಿಯಲ್ಲೇ ಲಾಂಗ್ನಿಂದ ಹಲ್ಲೆ
ಕೊನೆಯವರೆಗೂ ರಾತ್ರಿ ಜಕ್ಕನಹಳ್ಳಿಯ ಬಾರ್ನಲ್ಲಿ ತನ್ನ ಸ್ನೇಹಿತರ ಮರಿಗೌಡ, ಕಿರಣ್ ಜತೆ ಎಣ್ಣೆ ಪಾರ್ಟಿ ನಡೆಸಿದ್ದರು. ಬಳಿಕ ಮೂವರು ಬೈಕ್ನಲ್ಲಿ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಮಧ್ಯರಾತ್ರಿ 12:30 ಕ್ಕೆ ಕಾರಿನಲ್ಲಿ ಬಂದ ನಾಲ್ಕು ಜನರು ಲಾಂಗ್ನಿಂದ ಮಹೇಶ್ ಮೇಲೆ ಹಲ್ಲೆ ಮಾಡಿ ಸ್ಥಳದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಮದುವೆಗೆ ಒಂದು ಗಂಟೆ ಇರುವಾಗಲೇ ವರನಿಂದ ವಧು ಹತ್ಯೆ..!
ಮೇಲುಕೋಟೆ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ
ಇನ್ನು ಪೊಲೀಸರು ಭೀಮ, ರೋಹಿತ್, ಕೇಶವ, ಸಿದ್ದರಾಜು ಎಂಬುವರನ್ನ ಶಂಕಿಸಿದ್ದು, ಈ ನಾಲ್ವರು ಮಹೇಶ್ ವಿರುದ್ಧ ಹಳೆಯ ವೈಷಮ್ಯವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.
MUST WATCH: ದಲಿತ ವ್ಯಕ್ತಿಯನ್ನ ಅಟ್ಟಾಡಿಸಿ ಕೊಂದ್ರಾ..? ಕೊಲೆ ಮಾಡಿ ಕಥೆ ಕಟ್ಟಿದ್ದು ಯಾಕೆ..?




