Abhishek sharma : ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಮುಂದುವರೆದಿದೆ. ಈ ಬಾರಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

Abhishek Sharma : ಟಿ20 ಕ್ರಿಕೆಟ್ನಲ್ಲಿ ಯುವ ದಾಂಡಿಗ ಅಭಿಷೇಕ್ ಶರ್ಮಾ ಅವರ ಸಿಡಿಲಬ್ಬರ ಮತ್ತೊಮ್ಮೆ ಕ್ರೀಡಾಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸಿದೆ.
ಈ ಬಾರಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಕೇವಲ 32 ಎಸೆತಗಳಲ್ಲಿ ಸಿಡಿಸಿದ ಸ್ಫೋಟಕ ಶತಕದ ಮೂಲಕ ಅಭಿಷೇಕ್ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪಂಜಾಬ್ vs ಬಂಗಾಳ: ಜಿಮ್ಖಾನ ಮೈದಾನದಲ್ಲಿ ರನ್ ಮಳೆ
ಹೈದರಾಬಾದ್ನ ಜಿಮ್ಖಾನ ಮೈದಾನದಲ್ಲಿ ನಡೆದ ಪಂಜಾಬ್– ಬಂಗಾಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಪಂಜಾಬ್ ಪರ ಅಭಿಷೇಕ್ ಶರ್ಮಾ ಮತ್ತು ಪ್ರಭ್ ಸಿಮ್ರಾನ್ ಸಿಂಗ್ ಜೋಡಿ ಬಂಗಾಳ ಬೌಲರ್ಗಳ ಮೇಲೆ ಚಂಡಮಾರುತವೇಬ್ಬಿಸಿದರು.
ಅಭಿಷೇಕ್ ಶರ್ಮಾದಿಂದ ಅಪರೂಪದ ವಿಶ್ವ ದಾಖಲೆ
ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು, ನಂತರ 32 ಎಸೆತಗಳಲ್ಲಿ ಶತಕ ಸಿಡಿಸಿದ್ದು, 35 ಎಸೆತಗಳೊಳಗೆ ಎರಡು ಟಿ20 ಶತಕ ಬಾರಿಸಿದ ವಿಶ್ವದ 2ನೇ ಬ್ಯಾಟರ್ ಗರಿಮೆ ಅಭಿಷೇಕ್ ಶರ್ಮಾಗೆ ಸಿಕ್ಕಿದೆ.

ಇದನ್ನೂ ಓದಿ : Cricket : ಸುದೀರ್ಘ ವಿರಾಮದ ಬಳಿಕ ಕೊಹ್ಲಿ–ರೋಹಿತ್ ಬ್ಯ್ಲೂ ಜೆರ್ಸಿಗೆ ಮರಳಲು ಸಜ್ಜು!
35 ಎಸೆತಗಳೊಳಗೆ ಶತಕ ಬಾರಿಸಿದ ಅಭಿಷೇಕ್ ಶರ್ಮಾ
ಇದಕ್ಕೂ ಮುನ್ನ 2024ರಲ್ಲಿ ಮಧ್ಯಪ್ರದೇಶ ವಿರುದ್ಧ 28 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದರೊಂದಿಗೆ 35 ಎಸೆತಗಳೊಳಗೆ 2 ಟಿ20 ಶತಕ ಬಾರಿಸಿದ ವಿಶ್ವದ ಮೊದಲ ಎಡಗೈ ಬ್ಯಾಟರ್ ಎನಿಸಿದ್ದಾರೆ.
SMAT ನಲ್ಲಿ ರನ್ ಚಂಡಮಾರುತ
ಅಭಿಷೇಕ್ ಶರ್ಮಾಗೂ ಮುನ್ನ 2024 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೇ ಉರ್ವಿಲ್ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಸರ್ವಿಸಸ್ ವಿರುದ್ಧದ ಪಂದ್ಯದಲ್ಲಿ ಉರ್ವಿಲ್ 31 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಾರೆ.
MUST WATCH: ಕ್ರೀಡಾಲೋಕದ ಕಂಪ್ಲೀಟ್ ರೌಂಡಪ್-ಈ ಕ್ಷಣದ ಅಪ್ ಡೇಟ್ಸ್




