BBK S12 : Bigg Boss Kannada 12 ಮನೆಯಲ್ಲಿ ಗಿಲ್ಲಿ ವಿರುದ್ಧ ಸ್ಪರ್ಧಿಗಳ ದೂರುಗಳು ಹೆಚ್ಚಳ. ರಜತ್, ಉಗ್ರಂ ಮಂಜು ಸೇರಿದಂತೆ ಹಲವಾರು ಜನ ಗಿಲ್ಲಿಯನ್ನು ಜಗಳದ ಮೂಲ ಎಂದು ಆರೋಪಿಸಿದರು.

BBK S12 : Bigg Boss Kannada 12 Latest Update: ఈ ವಾರ ಬಿಗ್ ಬಾಸ್ ಮನೆಯಲ್ಲಿ ಜಗಳ, ಗದ್ದಲ, ವಾದ-ವಿವಾದಗಳು ನಿರಂತರವಾಗಿದ್ದವು. ವಿಶೇಷವಾಗಿ ಗಿಲ್ಲಿ (Gilli) ನಡೆ-ನುಡಿ ಕುರಿತಾಗಿ ಬಹುತೇಕ ಸ್ಪರ್ಧಿಗಳು ದೂರು ನೀಡಿದ್ದು, ಕಿಚ್ಚ ಸುದೀಪ್ ಅವರ ಮುಂದೆ ಎಲ್ಲರ ದೂರು ಒಂದೇ ದಿಕ್ಕಿನಲ್ಲಿ ತಿರುಗಿತು.
ರೆಸಾರ್ಟ್ ಟಾಸ್ಕ್ ಗದ್ದಲಕ್ಕೆ ತಿರುವಾಯಿತು
ಈ ವಾರ ಸ್ಪರ್ಧಿಗಳಿಗೆ Resort Task ನೀಡಲಾಗಿತ್ತು. ಆದರೆ,
- ಸ್ಪರ್ಧಿಗಳು ಟಾಸ್ಕ್ನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ,
- ನಿಯಮಗಳನ್ನು ಅರ್ಥಮಾಡಿಕೊಳ್ಳದೆ,
- ದಿನವಿಡೀ ವಾದ-ವಿವಾದ ಮತ್ತು ಜಗಳಗಳಲ್ಲಿ ಸಮಯ ಕಳೆಯಲಾಯಿತು.
ಈ ಬಗ್ಗೆ ಸುದೀಪ್ (Sudeep) ಅವರು ನೇರವಾಗಿ ಮನದಟ್ಟು ಮಾಡಿದರು, “ಟಾಸ್ಕ್ ಅರ್ಥ ಮಾಡಿಕೊಂಡು ಆಡಬೇಕು” ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Nelamangala | Accident | ಮೂರು ವರ್ಷದ ಮಗುವಿಗೆ ಎರ್ಸ್ಟಿಗಾ ಕಾರು ಡಿಕ್ಕಿ..!
ಗಿಲ್ಲಿ—ಜಗಳದ ಮೂಲ ಕಾರಣ?
ಮನೆಯೊಳಗಿನ ಜಗಳಗಳಿಗೆ ಗಿಲ್ಲಿಯೇ ಕಾರಣ ಎಂದು ಬಹುತೇಕ ಸ್ಪರ್ಧಿಗಳು ಮತ್ತು ಅತಿಥಿಗಳು ಆರೋಪಿಸಿದರು.
ರಜತ್ ಹಾಗೂ ಉಗ್ರಂ ಮಂಜು (Ugram Manju) ಅವರು ಅತಿಥಿಗಳಾಗಿ ಬಂದು ಗಿಲ್ಲಿಯ ವಿರುದ್ಧವೇ ಮಾತನಾಡಿದರು.
ಮನೆಯ ಕ್ಯಾಪ್ಟನ್ ಅಭಿ, ಜೊತೆಗೆ ರಘು ಮತ್ತು ಸ್ಪಂದನಾ ಕೂಡ ಗಿಲ್ಲಿಯ ನಡೆ ಸರಿಯಿಲ್ಲ ಎಂದು ದೂರು ನೀಡಿದರು.
ತಪ್ಪನ್ನು ಒಪ್ಪಿಕೊಂಡ ಗಿಲ್ಲಿ
ಗಿಲ್ಲಿ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡು ಹೇಳಿದರು ಅತಿಥಿಗಳು ಉದ್ದೇಶಪೂರ್ವಕವಾಗಿ ನನ್ನನ್ನು ಮಾತನಾಡಿಸುವಂತೆ ಮಾಡಿದರು.ನನ್ನನ್ನು ಪ್ರಚೋದನೆ ಮಾಡಲು ಹಲವಾರು ಬಾರಿ ಪ್ರಯತ್ನಿಸಿದರು.
ಸ್ಪರ್ಧಿ ಕಾವ್ಯಾ ಕೂಡ “ಅತಿಥಿಗಳಿಗೆ ಗಿಲ್ಲಿಯನ್ನು ಕಂಟ್ರೋಲ್ ಮಾಡುವ ಉದ್ದೇಶವೇ ಇದ್ದಂತೆ ಕಂಡಿತು” ಎಂದು ಹೇಳಿದ್ರು.
ಅವರು ಗಿಲ್ಲಿಯನ್ನು ಕೆದಕುತ್ತಿರುವುದನ್ನು ಹಲವು ಬಾರಿ ನೋಡಿದ್ದಾಗಿ ಹೇಳಿದರು.
ಸುದೀಪ್ ಮತ್ತೆ ಮೂಲಕ್ಕೆ ಹೋದರು
ಸುದೀಪ್ ಅವರು ಉದಾಹರಣೆ ನೀಡುತ್ತಾ, “ಇದೆಲ್ಲ ಆರಂಭವಾಗಿದ್ದು ಎಲ್ಲಿ?” ಎಂದು ಪ್ರಶ್ನಿಸಿದಾಗ, ಬಹುತೇಕರು “ಗಿಲ್ಲಿಯಿಂದಲೇ” ಎಂದು ಉತ್ತರಿಸಿದರು.ವಿಟಿ ಪ್ಲೇನಲ್ಲಿ ನಡೆದ ಒಂದು ಘಟನೆ ನೆನಪಿಗೆ ತಂದು, ಗಿಲ್ಲಿ ಹಾಲ್ನಲ್ಲಿ ಕುಳಿತಿದ್ದಾಗ, ಮಂಜು ಅವರು “ಎಷ್ಟನೇ ಮದುವೆ?” ಎಂದು ಕೇಳಿದ್ದು, ನಂತರ “ಬಿಟ್ಟಿ ಊಟಕ್ಕೆ ಬಂದಿದ್ದೀರಾ?” ಎಂದು ಪ್ರಶ್ನಿಸಿದದ್ದು ಜಗಳಕ್ಕೆ ಮೂಲ ಎಂದು ಸುದೀಪ್ ಹೇಳಿದರು.




