Nelamangala : ಮನೆಯ ಬಳಿ ಆಟವಾಡುತ್ತಿದ್ದ ಬಾಲಕನ (Boy) ಮೇಲೆ ಕಾರು (Car) ಹರಿದ ಪರಿಣಾಮ ಬಾಲಕ ತೀವ್ರ ಗಾಯಗೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ನೆಲಮಂಗಲ ನಗರದಲ್ಲಿ ನಡೆದಿದೆ.

Nelamangala : ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಕಾರು ಹರಿದ ಘಟನೆ ನಡೆದಿದೆ. ಮಾರುತಿ ಎರ್ಟಿಗಾ ಕಾರು ತಿರುವಿನಲ್ಲಿ ಅತಿವೇಗದಲ್ಲಿ ಬಂದು ಬಾಲಕನ ಮೇಲೆ ಹರಿದ ಪರಿಣಾಮ, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೂರು ವರ್ಷದ ಮಗುವಿಗೆ ಎರ್ಸ್ಟಿಗಾ ಕಾರಿನ ಢಿಕ್ಕಿ
ದಕ್ಷಿತ್ ಎಂಬ ಮೂರು ವರ್ಷದ ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ, ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಮಗುವಿನ ಮೇಲೆ ಕಾರನ್ನು ಹರಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಬಾಲಕನ ಚೀರಾಟ ಕೇಳಿ ಓಡಿಬಂದ ಮನೆ ಮಂದಿ
ಬಾಲಕನ ಚೀರಾಟ ಕೇಳಿ ಮನೆಯವರೂ, ನೆರೆಹೊರೆಯವರೂ ಹೊರಗೆ ಓಡಿ ಬಂದಿದ್ದು, ಮಗುವನ್ನು ತಕ್ಷಣವೇ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: Accident: ಹೊಸ ಕಾರು ಡೆಲಿವರಿ ಪಡೆದ 24 ಗಂಟೆಯಲ್ಲೇ ಅಪಘಾತವಾಗಿ ಡ್ಯಾನ್ಸರ್ ಸಾವು..!
ಸಿಸಿಟಿವಿಯಲ್ಲಿ ಸೆರೆಯಾದ ದಾರುಣ ದೃಶ್ಯ
ಘಟನೆಯ ವೇಳೆ ಬಾಲಕನ ತಲೆ, ಮುಖ ಮತ್ತು ಬೆನ್ನಿನ ಮೇಲೆ ಕಾರು ಹರಿದಿದೆ. ತಕ್ಷಣ ಚಿಕಿತ್ಸೆ ದೊರೆತ ಕಾರಣ ಜೀವಕ್ಕೆ ಅಪಾಯ ತಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರು ಚಾಲಕನ ವಿರುದ್ಧ ಪ್ರಕರಣ
ಈ ಸಂಬಂಧ ಎರ್ಟಿಗಾ ಕಾರಿನ ಚಾಲಕನ ವಿರುದ್ಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗವೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.
MUST WATCH: NELAMANGALA | ACCI**NT | VOLVO CAR | ಭೀಕರ ಅಪ**ತ- ಒಂದೇ ಕುಟುಂಬದ 6 ಮಂದಿ ಧಾರುಣ ಸಾ*




