Viral News : ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಹೆಣ್ಣು ಮಕ್ಕಳು ಕೂಡ ಈ ಆಸ್ತಿಯ ಹುಚ್ಚನ್ನು ಹಿಡಿಸಿಕೊಂಡಿದ್ದಾರೆ.

Viral News : ಇಷ್ಟು ದಿನಗಳ ಕಾಲ ಗಂಡು ಮಕ್ಕಳು ತಂದೆ ತಾಯಿಯನ್ನ ಆಸ್ತಿಗಾಗಿ ಹೊಡೆಯೋದು, ಬಡಿಯೋದು ಕೊನೆಗೆ ಕೊಲೆಗಳನ್ನು ಕೂಡ ಮಾಡುತ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅದ್ಯಾಕೋ ಹೆಣ್ಣು ಮಕ್ಕಳು ಕೂಡ ಈ ಆಸ್ತಿಯ ಹುಚ್ಚನ್ನು ಹಿಡಿಸಿಕೊಂಡಿದ್ದಾರೆ.
ಇದನ್ನು ಓದಿ : JJM Karnataka Progress|ಜಲ ಜೀವನ್ ಮಿಷನ್ ನಿಧಿ ಬಿಡುಗಡೆ: ಕೇಂದ್ರಕ್ಕೆ ಪ್ರಿಯಾಂಕ್ ಖರ್ಗೆ ಪತ್ರ
ತಾಯಿಗೆ ಚಪ್ಪಲಿಯಿಂದ ಹೊಡೆದ ಸಾಕು ಮಗಳು
ಇದೇ ಕಾರಣಕ್ಕೆ ಹೆತ್ತ ತಂದೆ ತಾಯಿಯನ್ನ ಮನೆಯಿಂದ ಹೊರಹಾಕೋದು, ಆಸ್ತಿ ಬರೆದುಕೊಡಲು ಹಿಂದೇಟು ಹಾಕಿದ್ರೆ ಸಾಯಿಸುವ ಹಂತಕ್ಕೆ ತಲುಪುತ್ತಿದ್ದಾರೆ. ಸಾಕು ಮಗಳು ತನ್ನ ತಾಯಿಗೆ ಊರಿಗೆ ಕರೆದುಕೊಂಡು ಹೋಗುವ ನೆಪದಲ್ಲಿ ಸಾಕು ತಾಯಿಯನ್ನ ತಳ್ಳಿ, ಚಪ್ಪಲಿಯಿಂದ ಹೊಡೆದು, ಬಿದ್ದರು ಬಿಡದೆ ಹೊಡೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಚಿಕ್ಕಮಗಳೂರು ಜಿಲ್ಲೆ ಎನ್ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾಕು ಮಗಳಿಂದಲೇ ಈಗ ಹೊಡೆಸಿಕೊಳ್ಳುತ್ತಿರುವ ತಾಯಿಯನ್ನು 62 ವರ್ಷದ ಕುಸುಮ ಎನ್ನಲಾಗಿದೆ. ಈಗ ತನ್ನನ್ನ ಸಾಕಿದ ತಾಯಿಯನ್ನು ಹೊಡೆದಿರುವ ಯುವತಿಯನ್ನು 35 ವರ್ಷದ ಸುಧಾ ಎನ್ನಲಾಗಿದೆ. ಆದ್ರೆ ಅಲ್ಲಿದ್ದವರು ಆ ವೃದ್ಧೆಯನ್ನು ಬಿಡಿಸದೆ ವಿಡಿಯೋ ಮಾಡುತ್ತಿದ್ದಾರೆ ಎಂದು ನೆಟ್ಟಿಗರೂ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಯುವತಿಯ ವಿರೋದ ಎಲ್ಲೆಡೆ ಆಕ್ರೋಶ ಕೂಡ ಕೇಳಿಬಂದಿದೆ.
ಇದನ್ನು ನೋಡಿ : ಭಾರತಿ ವಾಸಣ್ಣರ ಮೇಲೆ ಎನ್ ಡಿ ಎ ಆಕ್ರೋಶ, ಚೇಲಾಗಳಿಂದ ಕೆಲಸ ಮಾಡಿಸ್ತಿದ್ದಾರೆಂದು ಕಿಡಿ




