CM – DCM Breakfast Meeting : ಸಿದ್ದರಾಮಯ್ಯ ಜೊತೆಯೇ ಮಾತುಕತೆಗೆ ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದು, ಇಂದು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆ ತಾರಕಕ್ಕೇರಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K Shivakumar) ಮುಖಾಮುಖಿಯಾಗಿದ್ಧಾರೆ. ಡಿಕೆಶಿ ಇಂದು ಸಿದ್ದರಾಮಯ್ಯರ ಅಧಿಕೃತ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದು, ಮುಖ್ಯಮಂತ್ರಿಗಳು ಆತ್ಮೀಯವಾಗಿ Welcome ಮಾಡಿದ್ದಾರೆ.
ಆತ್ಮೀಯವಾಗಿ ಸ್ವಾಗತಿಸಿದ ಸಿಎಂ
ಡಿಕೆಶಿ ಕಾವೇರಿ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಆತ್ಮೀಯವಾಗಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ ಬಳಿಕ Special Room ನಲ್ಲಿ ಕುಳಿತು ಬ್ರೇಕ್ಫಾಸ್ಟ್ ಶುರು ಮಾಡಿದ್ದಾರೆ. ಅಲ್ಲಿಯೇ ಬಳಿಕ ಒನ್ ಟು ಒನ್ ಮೀಟಿಂಗ್ ಶುರು ಮಾಡಿದ್ದು, ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಹೈಕಮಾಂಡ್ ಆದೇಶ
ಈಗ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಸಮಸ್ಯೆಯನ್ನ ನೀವಿಬ್ಬರೇ ಕುಳಿತು ಬಗೆಹರಿಸಿಕೊಳ್ಳಿ. ಪರಸ್ಪರ ಭೇಟಿಯಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬನ್ನಿ. ಕಿತ್ತಾಡಿಕೊಂಡು ಬಂದ್ರೆ ನಾವು ಸಂಧಾನ ಮಾಡಲ್ಲ ಎಂದು ಖುದ್ದು ಹೈಕಮಾಂಡ್ ನಾಯಕರೇ ಸೂಚಿಸಿದೆ. ಇಬ್ಬರೂ ಒಟ್ಟಿಗೆ ದೆಹಲಿಗೆ ಬನ್ನಿ ಅಂತ ರಾಹುಲ್ ಗಾಂಧಿ ಅವರು ಕಟ್ಟಾಜ್ಞೆ ಹೊರಡಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಬಿಗಿ ಭದ್ರತೆ
ಇನ್ನೂ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಕಾವೇರಿ ನಿವಾಸದ ಸುತ್ತ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ 3 ಕೆಎಸ್ಆರ್ಪಿ ತುಕಡಿಗಳು ಹಾಗೂ 2 ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿದೆ.
ಇದನ್ನು ಓದಿ : Dina Bhavishya|ದಿನಭವಿಷ್ಯ 29 ನವೆಂಬರ್ 2025

ನಾಯಕತ್ವ ಬದಲಾವಣೆ, ಇತರ ವಿಚಾರಗಳ ಬಗ್ಗೆ ಪ್ರಸ್ತಾವ
ಡಿಕೆಶಿ ಸಿದ್ದರಾಮಯ್ಯ ಅವರ ಮನೆಗೆ ಬರುವ ಸಂದರ್ಭದಲ್ಲಿ ಸಿಎಂ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಉಪಸ್ಥಿತರಿದ್ದರು. ಅವರನ್ನು ಹೊರತಾಗಿ ಇತರ ಶಾಸಕರು, ಸಚಿವರು ಅಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಇಬ್ಬರು ನಾಯಕರು ಉಪಹಾರ ಸೇವಿಸುತ್ತಿದ್ದಾರೆ. ಬಳಿಕ ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಹಾಗೂ ಇತರ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಕಾಂಗ್ರೆಸ್ನಲ್ಲಿ ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಅಧಿಕಾರ ಹಂಚಿಕೆ ವಿವಾದ, ನಾಯಕತ್ವ ಬದಲಾವಣೆ ಚರ್ಚೆಗಳು, ಮತ್ತು ಸಿಎಂ–ಡಿಸಿಎಂ ಗಲಾಟೆಗಳು ಇಂದು ಬ್ರೇಕ್ಫಾಸ್ಟ್ ಟೇಬಲ್ನಲ್ಲಿ ಅಂತ್ಯ ಕಾಣಬಹುದೆಂಬ ನಿರೀಕ್ಷೆಯಿದೆ.

ಇದನ್ನು ನೋಡಿ : ಆಕೆಗೆ ಹೆತ್ತವರಿಗಿಂತ ಪ್ರಿಯಕರನೇ ಹೆಚ್ಚಾಗಿ ಬಿಟ್ಟ- ಪೊಲೀಸ್ ಸ್ಟೇಷನ್ನಲ್ಲೇ ಒಂದಾದ ಪ್ರಣಯ ಪಕ್ಷಿಗಳು




