BBK S12 : Bigg Boss Kannada 12 ಪ್ರೋಮೋದಲ್ಲಿ ಗಿಲ್ಲಿ ವರ್ತನೆಗೆ ಸೀಸನ್ 11 ಸ್ಪರ್ಧಿಗಳ ಅಸಮಾಧಾನ. ಉಗ್ರಂ ಮಂಜು ಗಿಲ್ಲಿಗೆ ಹೊಸ ರೂಲ್ಸ್ ಮಾಡಿ ಅಬ್ಬರ. ಮನೆಯೊಳಗಿನ ಘರ್ಷಣೆ ಹೆಚ್ಚಿದೆ.

Bigg Boss Kannada 12 Latest Promo: ಮನೆಯೊಳಗಿರುವ ಟಾಸ್ಕ್ ವೇಳೆ ಗಿಲ್ಲಿ ಹಾಗೂ ಉಗ್ರಂ ಮಂಜು ನಡುವೆ ಉದ್ವಿಗ್ನತೆ ತಾರಕಕ್ಕೇರಿದೆ. ಅತಿಥಿ ಸತ್ಕಾರ ಟಾಸ್ಕ್ನಲ್ಲಿ ಗಿಲ್ಲಿಯ ವರ್ತನೆ ಅತಿಥಿಗಳಾದ ಸೀಸನ್ 11 ಸ್ಪರ್ಧಿಗಳಿಗೆ ಇಷ್ಟವಾಗದೇ, ಅವರ ವಿರುದ್ಧ ಹೊಸ ನಿಯಮಗಳನ್ನು ಜಾರಿ ಮಾಡಿದ್ದಾರೆ.
ಗಿಲ್ಲಿ ವರ್ತನೆಗೆ ಅತಿಥಿಗಳ ಅಸಮಾಧಾನ
BBK12 ಮನೆಯೊಳಗೆ ಅತಿಥಿ ಸತ್ಕಾರ ಟಾಸ್ಕ್ ನಡೆಯುತ್ತಿದ್ದರೂ,Gilli Nata ವರ್ತನೆ ಅತಿಥಿಗಳಿಗೆ – ವಿಶೇಷವಾಗಿ ಉಗ್ರಂ ಮಂಜು ಮತ್ತು ರಜತ್ಗೆ – ಬೇಸರ ತಂದಿದೆ.ಬಂದ ಕ್ಷಣದಿಂದಲೇ ಗಿಲ್ಲಿ ಮತ್ತು ಈ ಇಬ್ಬರ ನಡುವೆ ಮನಸ್ತಾಪ ಹೆಚ್ಚುತ್ತಲೇ ಇದೆ.
ಸೀಸನ್ 11 ಸ್ಪರ್ಧಿಗಳಿಂದ ಹೊಸ ರೂಲ್ಸ್ – ಗಿಲ್ಲಿಗಾಗಿಯೇ ಟಾರ್ಗೆಟ್?
ಹೊರಬಂದ ಪ್ರೋಮೋ ಪ್ರಕಾರ, ಉಗ್ರಂ ಮಂಜು ಗಿಲ್ಲಿಗಾಗಿಯೇ ಹೊಸ ನಿಯಮವನ್ನು ಮಾಡಿದ್ದಾರೆ. ಗಿಲ್ಲಿಯ ಕೈಯಿಂದಲೇ ಊಟ ಬಡಿಸಿಕೊಂಡು ತಿನ್ನಬೇಕು
ಅಥವಾ ,ಎಲ್ಲರಿಗೂ ಊಟ ಆದ ಬಳಿಕ ಮಾತ್ರ ಗಿಲ್ಲಿ ಊಟ ಮಾಡಬೇಕು .
ಆದರೆ ಗಿಲ್ಲಿ ಈ ನಿಯಮವನ್ನು ಪಾಲಿಸಲಿಲ್ಲ.ಇದರಿಂದ ಉಗ್ರಂ ಮಂಜು ಹಾಗೂ ಉಳಿದ ಅತಿಥಿಗಳ ಅಸಮಾಧಾನ ಹೆಚ್ಚಾಗಿದೆ.
MUST READ : BBK 12 : ಈ ವಾರ ಬಿಗ್ ಬಾಸ್ನಿಂದ ಹೊರ ಹೋಗೋದು ಯಾರು?
“ಇದೆಂಥಾ ರೂಲ್ಸ್?” – ಗಿಲ್ಲಿಯ ಕೌಂಟರ್
ಗಿಲ್ಲಿ, ರಘು ಅವರ ಮುಂದೆ ಸ್ಪಷ್ಟವಾಗಿ ಪ್ರಶ್ನಿಸಿದ್ದಾರೆ !! “ಇದೆಂಥಾ ರೂಲ್ಸ್? ಊಟದ ಮೇಲೆ ನಿಯಮ ಮಾಡೋದು ಸರಿಯಲ್ಲ.”
ಅವರು ಮುಂದುವರೆದು,
“ನೀವು ಸೇವೆ ಬಗ್ಗೆ ಹೇಳಿ, ಊಟ ಹಾಕಿ, ಬೇರೇನು ಮಾಡಲಿ. ಊಟದ ವಿಷಯದಲ್ಲಿ ತಲೆ ಕೆಡಿಸ್ಕೋಬೇಡಿ”
ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಉಗ್ರಂ ಮಂಜು ಗರಂ – “ನಾಳೆ ಬೇರೆ ಆಟ ತೋರಿಸ್ತೀನಿ”
ಈ ಕೌಂಟರ್ಗೆ ಉಗ್ರಂ ಮಂಜು ಇನ್ನಷ್ಟು ಕೆಂಡಾಮಂಡಲವಾಗಿ – “ನಾನು ಹೇಳಿದ್ದೇನು? ಯಾಕೆ ಕೇಳ್ವಲ್ಲ?” , “ಗಿಲ್ಲಿ ಬೋಂಡಾ ತಿಂದ್ಕೊಂಡು ಆರಾಮ್. ನೀವು ಹಸಿವು ಅಂತ ಇರ್ತೀರಾ?” , “ನಿಮಗೆ ನಾಚಿಕೆ ಆಗಲ್ವಾ?” ಎಂದು ಕಿಡಿಕಾರಿದ್ದಾರೆ.
ಇದಕ್ಕೂ ಹೆಚ್ಚು, ಅವರು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ “ನಾಳೆ ನಾನೇ ಬೇರೆ ಆಟ ತೋರಸ್ತೀನಿ!”
ಗಿಲ್ಲಿಯನ್ನು ಟಾರ್ಗೆಟ್ ಮಾಡ್ತಿದ್ದಾರಾ ಉಗ್ರಂ ಮಂಜು?
ಪ್ರೋಮೋದಲ್ಲಿ ತೋರಿಸಿದಂತೆ, ಉಗ್ರಂ ಮಂಜು ಗಿಲ್ಲಿ ಮಾಡಿದ್ದ ಎಲ್ಲ ಸಣ್ಣ ತಪ್ಪುಗಳಿಗೂ ಪ್ರತಿಕ್ರಿಯೆ ನೀಡುತ್ತಿದ್ದರು:
- ಟೇಬಲ್ ಮೇಲೆ ನೀರು ಚೆಲ್ಲೋದು
- ಕಾಫಿ ಚೆಲ್ಲೋದು
- ಕಸ ಮಾಡಿ ಮತ್ತೆ ಗಿಲ್ಲಿಗೇ ಕ್ಲೀನ್ ಮಾಡಿಸೋದು
- ಗಿಲ್ಲಿಯನ್ನು ವೈಟರ್ನಿಂದ ಕ್ಲಿನರ್ ಪಾತ್ರಕ್ಕೆ ತಳ್ಳೋದು
ಇದರ ಜೊತೆಗೆ ಉಗ್ರಂ ಮಂಜು ಚೇರ್ ಏತ್ತಿ ಬಿಸಾಡುವಷ್ಟು ಕೋಪ ತೋರಿಸಿದ್ದಾರೆ.
ಫ್ಯಾನ್ಸ್ ರಿಯಾಕ್ಷನ್ – ಕೋಪ ಉಗ್ರಂ ಮಂಜುವರ ಮೇಲೆ
BBK12 ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮಂಜು ವರ್ತನೆಗೆ ಮುಖಾಮುಖಿ ವಿರೋಧ ವ್ಯಕ್ತಪಡಿಸಿದ್ದಾರೆ.
ಅವರ ಮಾತಿನಲ್ಲಿ,“ಗಿಲ್ಲಿಯನ್ನು ಅನವಶ್ಯಕವಾಗಿ ಟಾರ್ಗೆಟ್ ಮಾಡ್ತಿದ್ದಾರೆ” ಎಂಬ ಅಭಿಪ್ರಾಯ ಹೆಚ್ಚು.




