VIRAL NEWS : ಬ್ಯಾಸ್ಕೆಟ್ ಬಾಲ್ ಪ್ರಾಕ್ಟೀಸ್ ಮಾಡುವಾಗ ಬ್ಯಾಸ್ಕೆಟ್ ಬಾಲ್ ಕಂಬವೇ ಕುಸಿದು ಬಿದ್ದು ನ್ಯಾಷನಲ್ ಲೆವೆಲ್ ಬ್ಯಾಸ್ಕೆಟ್ ಬಾಲ್ ಆಟಗಾರ ಸಾವನ್ನಪ್ಪಿದ್ದಾರೆ.

VIRAL NEWS : ಹರಿಯಾಣದ ರೋಹಟಕ್ ನಲ್ಲಿ 16 ವರ್ಷದ ನ್ಯಾಷನಲ್ ಲೆವೆಲ್ ಬ್ಯಾಸ್ಕೆಟ್ ಬಾಲ್ ಆಟಗಾರ ಹಾರ್ದಿಕ್ ರಾಥಿ, ಬ್ಯಾಸ್ಕೆಟ್ ಬಾಲ್ ಕಂಬ ಕುಸಿದುಬಿದ್ದಿದ್ದರಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : IND VS SA|ಪಂತ್ ಪಡೆಗೆ ಮತ್ತೊಂದು ಮುಖಭಂಗ
ಯುವ ಬ್ಯಾಸ್ಕೆಟ್ ಬಾಲ್ ಆಟಗಾರ ಸಾವು
ಬ್ಯಾಸ್ಕೆಟ್ ಬಾಲ್ ಆಟದ ಪ್ರಾಕ್ಟೀಸ್ ನಡೆಸುವಾಗ ಕಂಬವನ್ನು ಹಿಡಿದುಕೊಂಡಿದ್ದಾರೆ. ತಕ್ಷಣವೇ ಕಂಬ ಮುರಿದು ಆಟಗಾರನ ಎದೆಯ ಮೇಲೆ ಬಿದ್ದಿದೆ. ತಕ್ಷಣವೇ ಸ್ಥಳದಲ್ಲಿದ್ದ ಉಳಿದ ಆಟಗಾರರು ಕಂಬವನ್ನು ಎತ್ತಿ, ಯುವ ಆಟಗಾರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವ ಬ್ಯಾಸ್ಕೆಟ್ ಬಾಲ್ ಆಟಗಾರ ಸಾವನ್ನಪ್ಪಿದ್ದಾರೆ.
ಮಜ್ರಾ ಗ್ರಾಮದ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ದುರಂತ
ಹರಿಯಾಣ ರಾಜ್ಯದ ರೋಹಟಕ್ ಜಿಲ್ಲೆಯ ಲಖನ್ ಮಜ್ರಾ ಗ್ರಾಮದ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ಈ ದುರಂತ ನಡೆದಿದೆ. ಬ್ಯಾಸ್ಕೆಟ್ ಬಾಲ್ ಕೋರ್ಟ್ ನಲ್ಲಿ 16 ವರ್ಷದ ಹಾರ್ದಿಕ್ ರಾಥಿ ಮಾತ್ರವೇ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ದುರಂತದ ದೃಶ್ಯ ಮೈದಾನದಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ಇದನ್ನು ನೋಡಿ : ಹಳ್ಳಿಯಲ್ಲಿ ಹಾಲು ಕರಿತಿದ್ದೆ, ಇಂದು ಸಿಇಓ ಆದೆIAS ಅಧಿಕಾರಿ ಜಿ.ಪ್ರಭು ಅವರ ಅದ್ಭುತ ಭಾಷಣ




