Shivamogga News : ಗಂಡನ ಮನೆಯಲ್ಲಿ ಕಿರುಕುಳ – ಮದುವೆಯಾಗಿ 6 ತಿಂಗಳಲ್ಲಿ ನವವಿವಾಹಿತೆ ಲತಾ ದಾರುಣ ಸಾವು .

Shivamogga News :ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ನವವಿವಾಹಿತೆಯ ದಾರುಣ ಮರಣ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾಗಿ ಕೇವಲ ಆರು ತಿಂಗಳು ಆಗಿದ್ದ ಮಹಿಳೆ, ಗಂಡನ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ತೀವ್ರ ನಿರಾಸೆಯಿಂದ ಜೀವ ಕಳೆದುಕೊಂಡಿರುವ ಆರೋಪ ಕುಟುಂಬದವರು ಮಾಡಿದ್ದಾರೆ.
ಮೃತ ಯುವತಿಯನ್ನು ಲತಾ (25) ಎಂದು ಗುರುತು
ಘಟನೆಯಲ್ಲಿ ಮೃತಳಾದ ಯುವತಿಯನ್ನು ಲತಾ (25) ಎಂದು ಗುರುತಿಸಲಾಗಿದೆ.ಅವಳು ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಮೂಲದವರು ಅಗಿದು B.Sc ಮತ್ತು B.Ed ಪದವೀಧರೆ ಅಗಿದರು . 2025ರ ಏಪ್ರಿಲ್ 14ರಂದು ಶಿಕಾರಿಪುರದ ಗುರುರಾಜ್ ಜೊತೆ ವಿವಾಹ ಅಗಿತ್ತು .
ಲತಾ ಅವರ ಪತಿ ಗುರುರಾಜ್ ಅವರು ಕಪಿಸಿಎಲ್ (KPCL) ನಲ್ಲಿ AEE ಆಗಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ.
ವಾಟ್ಸಪ್ನಲ್ಲಿ ಡೆತ್ನೋಟ್ ಬರೆದಿದ್ದರು ಎಂದು ಕುಟುಂಬದ ಆರೋಪ
ಘಟನೆಯ ದಿನ, ಲತಾ ತಮ್ಮ ವಾಟ್ಸಪ್ನಲ್ಲಿ ಒಂದು ಸಂದೇಶ ಬರೆದಿದ್ದು, ಅದರಲ್ಲಿ ಗಂಡ ಹಾಗೂ ಗಂಡನ ಮನೆಯವರಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆ ವಿವರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ವಾಟ್ಸಪ್ನಲ್ಲಿ ಡೆತ್ನೋಟ್ ನಲ್ಲಿ ಮಾನಸಿಕ ಒತ್ತಡ , ಮನೆಮಂದಿಯ ವರ್ತನೆ , ಮದುವೆಯ ನಂತರ ಎದುರಿಸಿದ ಹಿಂಸೆ ಮುಂತಾದ ವಿಷಯಗಳು ಉಲ್ಲೇಖವಾಗಿವೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 23ರಂದು ಲತಾ ತಮ್ಮ ಮನೆಯಿಂದ ಹೊರಟ ಬಳಿಕ ಮರಳಿ ವಾಪಸ್ ಬರಲಿಲ್ಲ. ನಂತರ ಅವರು ಭದ್ರಾ ನದಿಯ ಸಮೀಪದಲ್ಲಿ ಕಾಣೆಯಾಗಿದ್ದರು.
ಪೊಲೀಸರು ಮತ್ತು ಅಗ್ನಿಶಾಮಕ ದಳ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪತಿ ಮತ್ತು ಮನೆಯವರು ನಾಪತ್ತೆ – ಪೊಲೀಸ್ ರ ತನಿಖೆ ಮುಂದುವರೆದಿದೆ
ಘಟನೆ ಹೊರಬಿದ್ದ ನಂತರ ಲತಾ ಅವರ ಪತಿ ಗುರುರಾಜ್ ಹಾಗು ಗಂಡನ ಮನೆಯ ಇತರ ಸದಸ್ಯರು ಎಲ್ಲರೂ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ವೇಗವಾಗಿದೆ.
ಕುಟುಂಬ ಕಿರುಕುಳ ಪ್ರಕರಣಗಳ ಗಂಭೀರತೆ
ಶಿವಮೊಗ್ಗ–ಭದ್ರಾವತಿ ಪ್ರದೇಶದಲ್ಲಿ ನಡೆದ ಈ ಘಟನೆ, ಮದುವೆಯಾದ ಬಳಿಕ ಮಹಿಳೆಯರು ಎದುರಿಸುವ ಮಾನಸಿಕ-ಕುಟುಂಬ ಕಿರುಕುಳದ ಸಮಸ್ಯೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
ಪೊಲೀಸರು ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದು, ಲತಾ ಅವರ ಮರಣಕ್ಕೆ ಕಾರಣವಾದ ಕಿರುಕುಳದ ಸ್ವರೂಪ, ಸಂದೇಶದ ವಿವರಗಳು ಮತ್ತು ಅನುಮಾನಿತ ವ್ಯಕ್ತಿಗಳ ಪಾತ್ರಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.




