Karnataka Politics : Karnataka Congress ಕುರ್ಚಿ ಕದನ ಕುರಿತು ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ. “ನೀವ್ ನೀವೇ ಅಗ್ರಿಮೆಂಟ್ ಮಾಡಿಕೊಂಡ್ರೆ ಇದೇನು ಕಾಂಟ್ರಾಕ್ಟಾ?”– ಸಿಎಂ ಸಿದ್ದರಾಮಯ್ಯ ಪರ ಬಲವಾದ ನಿಲುವು.

Karnataka Politics: ಕುರ್ಚಿ ಕದನಕ್ಕೆ ಬಸವರಾಜ ರಾಯರೆಡ್ಡಿ ತೀವ್ರ ಪ್ರತಿಕ್ರಿಯೆ
ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಕುರ್ಚಿ ಕದನದ ಮಧ್ಯೆ, ಸಿಎಂ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಗಟ್ಟಿಯಾದ ಪ್ರತಿಕ್ರಿಯೆ ನೀಡಿದ್ದಾರೆ.
“ನೀವ್ ನೀವೇ ಅಗ್ರಿಮೆಂಟ್ ಮಾಡಿಕೊಂಡ್ರೆ ಇದೇನು ಕಾಂಟ್ರಾಕ್ಟಾ?” ಎಂದು ಕೇಳಿ ಗೊಂದಲ ಸೃಷ್ಟಿಸಿರುವವರನ್ನೇ ಪ್ರಶ್ನಿಸಿದ್ದಾರೆ.
“ನಮ್ಮ ಪಕ್ಷದಲ್ಲಿ ಬಣಗಳೇ ಇಲ್ಲ” — ರಾಯರೆಡ್ಡಿ
ಕೊಪ್ಪಳದಲ್ಲಿ ಮಾತನಾಡಿದ ರಾಯರೆಡ್ಡಿ “ಸಿದ್ದರಾಮಯ್ಯ ಬಣ, ಡಿಕೆ ಶಿವಕುಮಾರ್ ಬಣ ಅಂತಾ ಯಾವ ಬಣವೂ ಪಕ್ಷದಲ್ಲಿ ಇಲ್ಲ.”ನಾವೆಲ್ಲಾ ಕಾಂಗ್ರೆಸ್ ಕುಟುಂಬದವರು.”ಸಿಎಂ ಆಗಬೇಕು, ಸಚಿವರಾಗಬೇಕು ಅನ್ನೋ ಆಸೆ ಸಹಜ.”
ಸಿದ್ದರಾಮಯ್ಯ ಬದಲಾವಣೆ ಯಾಕೆ? – ಪ್ರಶ್ನಿಸಿದ ರಾಯರೆಡ್ಡಿ
ರಾಯರೆಡ್ಡಿ ಸ್ಪಷ್ಟವಾಗಿ ಪ್ರಶ್ನಿಸಿದರು:“ಸಿದ್ದರಾಮಯ್ಯನನ್ನ ಬದಲಾವಣೆ ಮಾಡೋ ಮಾತು ಈಗ ಯಾಕೆ ಬರುತ್ತಿದೆ?” .“ಎರಡೂವರೆ ವರ್ಷ ಅವರು, ಎರಡು ವರ್ಷ ಇವರು ಅಂತ ಹೇಳಿದ್ದರೆ ನಮಗೆ ಹೇಳಬೇಕಿತ್ತು.“ನಮಗೆ ಆ ಮಾತುಕತೆ ಬಗ್ಗೆ ಯಾರೂ ಹೇಳಿಲ್ಲ.”
MUST READ : Nelamangala Crime News : ಸ್ನೇಹಿತೆಯ ರೂಂಗೆ ಕರೆದೊಯ್ದು ವಿದ್ಯಾರ್ಥಿನಿ ದೇವಿಶ್ರೀ ಹತ್ಯೆ – ತಿರುಪತಿಯಲ್ಲಿ ಆರೋಪಿ ಬಂಧನ
“ಸಿದ್ದರಾಮಯ್ಯ ಐದು ವರ್ಷ ಸಿಎಂ” – ಭವಿಷ್ಯ ನುಡಿದ ರಾಯರೆಡ್ಡಿ
ರಾಯರೆಡ್ಡಿ ಹೇಳಿದ್ದಾರೆ: ನನಗೆ ಗೊತ್ತಿರುವ ಮಟ್ಟಿಗೆ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿಯೇ ಇರುತ್ತಾರೆ.ಡಿಕೆ ಶಿವಕುಮಾರ್ ಎಲ್ಲೂ ‘ನಾನು ಸಿಎಂ ಆಗ್ತೀನಿ’ ಅಂತ ಹೇಳಿದ್ರು ಅನ್ನೋದು ತಪ್ಪು.
“ಸಿದ್ದರಾಮಯ್ಯ ವಿರುದ್ಧ ಯಾವುದೇ ಗೊಂದಲ ಇಲ್ಲ”
ರಾಯರೆಡ್ಡಿ ಮುಂದುವರಿಸಿದರು:
- “ಸಿದ್ದರಾಮಯ್ಯ ಹತ್ರ ಗೊಂದಲ ಇಲ್ಲ.”
- “ಡಿಕೆ ಶಿವಕುಮಾರ್ ಹತ್ರ ಗೊಂದಲ ಇಲ್ಲ.”
- “ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಗಿನವರು ಪ್ರಯತ್ನಿಸುತ್ತಿದ್ದಾರೆ.”
ಲಿಂಗಾಯತ ಸಮುದಾಯದಿಂದಲೂ ಸಿಎಂಗೆ ಬೆಂಬಲ
ರಾಯರೆಡ್ಡಿ ದೊಡ್ಡ ಹೇಳಿಕೆ ನೀಡಿದರು ಎಲ್ಲ ಲಿಂಗಾಯತ ನಾಯಕರು ಸಿದ್ದರಾಮಯ್ಯ ಪರ.ಸಿದ್ಧರಾಮಯ್ಯಗೆ ಲಿಂಗಾಯತ ಸಮಾಜದಿಂದ ಭಾರೀ ಬೆಂಬಲ ಇದೆ.ಮೊನ್ನೆ ಎಲ್ಲ ಸ್ವಾಮೀಜಿಗಳು ಸಿದ್ದರಾಮಯ್ಯಗೆ ವಿಭೂತಿ ಹಚ್ಚಿದ್ರು. ಸಿದ್ದರಾಮಯ್ಯ ಬಸವಣ್ಣನ ಪರಮಾನುಯಾಯಿ; ಆದ್ದರಿಂದಲೂ ಸಮಾಜ ಅವರಿಗೆ ಇಷ್ಟ.
ರಾಜ್ಯ ಕಾಂಗ್ರೆಸ್ನ ಕುರ್ಚಿ ಕದನದ ನಡುವೆಯೇ, ಬಸವರಾಜ ರಾಯರೆಡ್ಡಿ ನೀಡಿದ ಹೇಳಿಕೆಗಳು ರಾಜಕೀಯ ತಾಪಮಾನ ಹೆಚ್ಚಿಸಿವೆ.
ಅವರ ಪ್ರಕಾರ, ಸಿದ್ದರಾಮಯ್ಯ ಸರ್ಕಾರ ಸ್ಥಿರವಾಗಿದ್ದು, ಐದು ವರ್ಷಗಳ ಕಾಲ ಮುಂದುವರಿಯಲಿದೆ.
ಇದನ್ನು ನೋಡಿ : ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್: ಮತ್ತೆ 42 ಲಕ್ಷ ರೂ. ಜಪ್ತಿ; ಈವರೆಗೆರಿ ಕವರಿಯಾದ ಹಣವೆಷ್ಟು?




